
ಹಿಡಕಲ್ ನೀರಿಗೆ ಬಾಯ್ತೆರೆದ ಧಾರವಾಡ.. ಸಿಎಂ ಜೊತೆ ಚರ್ಚೆ ಎಂದ ಸತೀಶ್
“ಹಿಡಕಲ್ ನೀರಿಗೆ ಧಾರವಾಡದ ದಾಹ: ಸಿಎಂ ಸಿದ್ದರಾಮಯ್ಯ ಜೊತೆ ತುರ್ತು ಚರ್ಚೆ!” – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯರು, ರೈತರು ಮತ್ತು ಸಾಮಾಜಿಕ ಸಂಘಟನೆಗಳು ಉಗ್ರ ವಿರೋಧ ತೋರಿದ್ದಾರೆ. ಈ ವಿವಾದಿತ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸತೀಶ್ ಜಾರಕಿಹೊಳಿ ಹಿಂದೆಯೇ ಆದೇಶಿಸಿದ್ದರೂ, ಸಂಬಂಧಿತ ಇಲಾಖೆಗಳು ಟೆಂಡರ್ ಪ್ರಕ್ರಿಯೆ ಮುಂದೂಡಿದ್ದು ಬಹಿರಂಗವಾಗಿದೆ. ಇದರ ಪರಿಣಾಮವಾಗಿ, “ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…