Headlines

ಪರಿಹಾರ ಕೊಡಿ..ಇಲ್ಲ ವಿಷ ಕೊಡಿ….

ಪರಿಹಾರ ಕೊಡಿ..ಇಲ್ಲ ವಿಷ ಕೊಡಿ. ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಬೆಳಗಾವಿ.ಅಖಿಲ ಕರ್ನಾಟಕ ರೈತ ಸಂಘ, ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಪ್ರಾರಂಭಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿ ಇಲ್ಲ, ವಿಷಕೊಡಿ ಎಂದು ತಮ್ಮ ಘೋಷಣೆ ಕೂಗುವ ಮೂಲಕ ತಮ್ಮ…

Read More

ಪ್ರಿಯಂಕಾ ಜಾರಕಿಹೊಳಿ ಅಬ್ಬರದ ಪ್ರಚಾರ

ವಿವಿಧ ಗ್ರಾಮಗಳಲ್ಲಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅಬ್ಬರದ ಪ್ರಚಾರ *ಹೊಸ ವಂಟಮುರಿ, ಹುದಲಿ ಜಿಪಂ ವ್ಯಾಪ್ತಿಯ ಅಷ್ಠೆ, ಬಂಬರಗಾ ಹಾಗೂ ಹೊನಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಪ್ರಚಾರ ಸಭೆ ಬೆಳಗಾವಿ: ಕಳೆದ 5 ವರ್ಷ ಬಿಜೆಪಿ ಸಂಸದ ಅವರಿಗೆ ಅವಕಾಶ ನೀಡಿದ್ದಿರಿ. ಆದರೆ ನಿಮ್ಮ ನಿರೀಕ್ಷೆಯಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಅದಕ್ಕಾಗಿ ಈ ಭಾರಿ ಅಭಿವೃದ್ದಿಗೆ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.ಯಮಕನಮರಡಿ…

Read More

ಎಲ್ಲೆಡೆ ಗೆಲ್ಲೋದು ನಾವೇ- ಬೊಮ್ಮಾಯಿ

ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುತ್ತಾರೆ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. ಮೂರು ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಜನರಿಂದ ವ್ಯಕ್ತವಾದ ಬೆಂಬಲದಿಂದ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ತಾರೆ ಅನ್ನುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉಪ ಚುನಾವಣೆ ನಡೆದ ಮೂರು…

Read More

ಮಹಾಕುಂಭ ಮೇಳ ಕಾಲ್ತುಳಿತಕ್ಕೆ ಬೆಳಗಾವಿಯ ಇಬ್ಬರು ಬಲಿ

ಪ್ರಯಾಗರಾಜ ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ ಮಗಳು ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಟ ಮೃತ ದುರ್ದೈವಿಗಳು ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ. ಮಾಡಿದ್ದರು.13 ಜನರ ತಂಡದಲ್ಲಿ ಪ್ರಯಾಣ ಬೆಳೆಸಿದ್ದರು

Read More

ಪೊಲೀಸರಿಗೂ ಮಸಿ ಬಿತ್ತು..!

ಫಲಕಗಳಿಗೆ ಬೀಳುವ ‌ಕಪ್ಪು‌ಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್.. ಬೆಳಗಾವಿ ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು

Read More

ರಾಯಣ್ಣ ಕೊಡುಗೆ ಅವಿಸ್ಮರಣೀಯ

ಕೌಜಲಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕಿರು ಕೋಟೆ ಅನಾವರಣ ದೇಶಕ್ಕೆ ಸಂಗೊಳ್ಳಿ ರಾಯಣ್ಣನ ಕೊಡುಗೆ ಅವಿಸ್ಮರಣೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ, ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಹಾಗೂ ಕಲ್ಲಿನ ಕಿರು ಕೋಟೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ.26) ಅನಾವರಣಗೊಳಿಸಿದರು. ಇದೇ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಏಕ ಕಾಲಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಲ್ಕು ಪ್ರತಿಮೆಗಳನ್ನು ಅನಾವರಣಗೊಳಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ…

Read More

ಬಾಲಚಂದ್ರ ಜಾರಕಿಹೊಳಿ ಇಲ್ಲಿ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ.!

ಹುಕ್ಕೇರಿಯಲ್ಲಿ ಜಾರಕಿಹೊಳಿ ರಾಜಕೀಯ ವರ್ಜಿತ ಕ್ಷೇತ್ರ ಸಾಬೀತು!ವಿದ್ಯುತ್ ಸಹಕಾರ ಸಂಘದ ‘ಪ್ಲೇಮ್ಯಾಕ್ಸ್’ ನಾಟಕದಲ್ಲಿ ಜಾರಕಿಹೊಳಿಯೇ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ನಾಯಕ! ಬೆಳಗಾವಿ:ಹುಕ್ಕೇರಿ ಕ್ಷೇತ್ರದ ರಾಜಕೀಯ ಛತ್ರದಲ್ಲಿ ಈಗೊಂದು ನಿಜಾನಿಜದ ಮಹಾಯುದ್ಧ ನಡೆಯುತ್ತಿದೆ. ಆದರೆ ಈ ಯುದ್ಧದಲ್ಲಿ ಶತ್ರುಗಳು ಇನ್ನೂ ತಲೆ ಎತ್ತುವ ಮೊದಲು ಜಾರಕಿಹೊಳಿ ಬಲಗತಿಗೆ ಶರಣಾಗುತ್ತಿದ್ದಾರೆ. ಸಹಕಾರಿ ಕ್ಷೇತ್ರ, ವಿಶೇಷವಾಗಿ ವಿದ್ಯುತ್ ಸಹಕಾರ ಸಂಘದ ಆಡಳಿತ ತಂತ್ರದಲ್ಲಿ ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಬೃಹತ್ ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ. ಇದೊಂದು ಸಂಘದ ಚುನಾವಣೆ ಮಾತ್ರವಲ್ಲ – ಇದು ಜಾರಕಿಹೊಳಿ…

Read More

ನೇಕಾರ ನೇಣಿಗೆ ಶರಣು

ಬೆಳಗಾವಿ:ನೇಕಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳೇಭಾವಿಯಲ್ಲಿ ನಡೆದಿದೆ.ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡ ನೇಕಾರ ಎಂದು ಗೊತ್ತಾಗಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿಯಲ್ಲಿ ಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್..!

ಸರ್ಕಾರದ ಆಶಯಕ್ಕೆ ಎಳ್ಳುನೀರು.. ಕನ್ನಡ ನಾಡು‌ ನುಡಿ ಬೆಳವಣಿಗೆಗೆ ಅಡ್ಡಿಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್…! ಎರಡು ದಿನ ಪ್ರಷಾರಕ್ಕೆ ಗೋಗರೆದ ಕಲಾವಿದೆ ಆಟೋ ದಲ್ಲಿ ಧ್ವನಿ ವರ್ಧಕ ಮೂಲಕ ಅನುಮತಿ ಕೊಡಲು ಸತಾಯಿಸಿದ ಡಿಸಿಪಿ ಸರ್ಕಾರದ ಶುಲ್ಕ ತುಂಬಿದರೂ ಡೋಂಟ್ ಕೇರ್ ಎಂದ ಡಿಸಿಪಿ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಣ್ಣೀರು ಸುರಿಸಿದ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸಕರ್ಾರದ ಪ್ರಯತ್ನಕ್ಕೆ ಪೊಲೀಸರು ಎಳ್ಳು…

Read More
error: Content is protected !!