
ಅಂಗವಿಕಲನ ಸ್ಥಿತಿ ಅಯೋಮಯ
ಹೊಡೆದವರು ನಿರಾಳ, ಹೊಡೆಸಿಕೊಂಡವನ ನರಳಾಟ. ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಟ. ಶೌಚಕ್ಕೂ ಬೇರೆಯವರ ಆಶ್ರಯ ಬೆಳಗಾವಿ.ಉದ್ಯಮಬಾಗ ಪೊಲೀಸರಿಂದ ಹಲ್ಲೆಗೊಳಗಾದ ಬಡಪಾಯಿ ಅಂಗವಿಕಲನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ.ಇಲ್ಲಿ ಹಲ್ಲೆ ಮಾಡಿದ ಪೊಲೀಸರು ನಿರಾಳವಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಹಲ್ಲೆಗೊಳಗಾದ ಅಂಗವಿಕಲ ಈಗ ಹಾಸಿಗೆ ಹಿಡಿದಿದ್ದಾನೆ. ಮನೆಯಲ್ಲಿ ಶೌಚಾಲಯಕ್ಕೆ ಹೋಗಲೂ ಬೇರೆಯವರ ಆಶ್ರಯ ಪಡಬೇಕಾಗಿದೆ. ದುಡಿದು ಮನೆ ನಡೆಸಬೇಕಾದ ಅಂಗವಿಕಲ ನಿರಂಜನ ಚೌಗಲಾ ಈಗ ಕನಿಷ್ಟ ಇನ್ನೂ 6 ತಿಂಗಳು ಹಾಸಿಗೆ ಬಿಟ್ಟು ಏಳದ ಪರಿಸ್ಥಿತಿಯಲ್ಲಿದ್ದಾನೆ. ಒಂದು ರೀತಿಯಲ್ಲಿ…