ಅಂಬೇಡ್ಕರ್ ಜಯಂತಿ: “ಸಂವಿಧಾನವೇ ಭಾರತಕ್ಕೆ ದಿಕ್ಕು ತೋರುವ ದೀಪ” – ಜಗದೀಶ ಶೆಟ್ಟರ್
ಬೆಳಗಾವಿಯಲ್ಲಿ ಬಿಜೆಪಿ ವತಿಯಿಂದ ಭಾವಪೂರ್ಣ ಆಚರಣೆ
ಬೆಳಗಾವಿ, ಎ.14: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಬೆಳಗಾವಿ ಗ್ರಾಮಾಂತರ ಬಿಜೆಪಿ ಕಚೇರಿಯಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಆದರ್ಶವನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಮಾತನಾಡಿ,
ಅಂಬೇಡ್ಕರ್ ರಚಿಸಿದ ಸಂವಿಧಾನವು ತಾತ್ವಿಕ ದೃಷ್ಟಿಯಿಂದ ಮಾತ್ರವಲ್ಲ, ಬದುಕಿನ ಪ್ರತಿ ಹಂತಕ್ಕೂ ದಾರಿದೀಪವಾಗಿದೆ. ಇದು ಕೇವಲ ಕಾನೂನು ಪುಸ್ತಕವಲ್ಲ – ಇದು ನಮ್ಮ ರಾಷ್ಟ್ರದ ಆತ್ಮವಾಗಿದೆ,” ಎಂದು ಹೇಳಿದರು.,
“ವಿಚಾರಗಳಿಂದ ಬದುಕು ಬದಲಿಸಲು ಸಾಧ್ಯ” – ಶೆಟ್ಟರ್
“ಬಾಬಾಸಾಹೇಬರು ಶೋಷಿತ, ವಂಚಿತ ವರ್ಗಕ್ಕೆ ಸ್ವಾಭಿಮಾನ ಮತ್ತು ಹಕ್ಕು ಎಂಬ ಶಬ್ದವನ್ನು ಪರಿಚಯಿಸಿದ ಮಹಾಪುರುಷ.. ಅವರ ಚಿಂತನೆಗಳಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ನ್ಯಾಯದ ಪರಿಪೂರ್ಣತೆ ಇದೆ. ಇಂದು ಅವರ ಜಯಂತಿಯನ್ನು ಆಚರಿಸುವುದು ಗೌರವವಲ್ಲ, ಜವಾಬ್ದಾರಿ.” ಎಂಬ ಮಾತುಗಳಿಂದ ಶೆಟ್ಟರ್ ಅವರು ಬಾಬಾಸಾಹೇಬರ ತತ್ವಗಳ ಮಹತ್ವವನ್ನು ಬಿಂಬಿಸಿದರು.
ಅಂಬೇಡ್ಕರ್ ಅವರ ಶೈಕ್ಷಣಿಕ ಸಾಧನೆ, ಧೈರ್ಯ ಹಾಗೂ ನಿಷ್ಠೆಯ ಉದಾಹರಣೆಗಳನ್ನು ಮುಂದಿಟ್ಟು ಯುವಕರಿಗೆ ಪ್ರೇರಣೆ ನೀಡುವಂತೆ ಮಾತನಾಡಿದರು.
“ವ್ಯಕ್ತಿ ಎಲ್ಲಿ ಹುಟ್ಟಿದ ಎನ್ನುವುದು ಮುಖ್ಯವಲ್ಲ. ಏನು ಸಾಧಿಸಿದ, ಎಂಥ ದಿಕ್ಕುNationಗೆ ನೀಡಿದ ಎಂಬುದು ಇತಿಹಾಸ ನಿರ್ಧರಿಸುತ್ತದೆ. ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮಾಜಿ ಶಾಸಕ ಸಂಜಯ್ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ , ಧನಶ್ರೀ ದೇಸಾಯಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಉಪಾಧ್ಯಕ್ಷ ವಿನಯ್ ಕದಂ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ dr ಸೋನಾಲಿ ಸರ್ನೋಬತ್, ನಿತಿನ್ ಚೌಗಲೆ, ಸಚಿನ್ ಕಡಿ, ಸಂತೋಷ ದೇಶನೂರ, ಮಹೇಶ್ ಮೋಹಿತೆ ಹಾಗೂ ಮುಖಂಡರಾದ ಮುರುಗೇಂದ್ರಗೌಡ ಪಾಟೀಲ, ಚೇತನ್ ಅಂಗಡಿ, ಪ್ರಶಾಂತ್ ಅಮ್ಮಿನಭಾವಿ, ಮನೋಜ್ ಪಾಟೀಲ, ಶ್ವೇತಾ ಜಗದಾಳೆ, ವಿಠ್ಠಲ ಸಾಯಣ್ಣವರ ಮುಂತಾದವರು ಉಪಸ್ಥಿತರಿದ್ದರು.