ಬಡ ರೈತರಿಗೆ ನ್ಯಾಯ ನೀಡಿದ ಡಿಸಿ ನ್ಯಾಯಾಲಯ’

ಬೆಳಗಾವಿ,
ಅಥಣಿ ತಾಲೂಕಿನ ಮದಭಾವಿಯಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ಮೂವರು ಸಹೋದರರು ಕಬಳಿಸಿಕೊಂಡಿದ್ದ 13 ಎಕರೆ 8 ಗುಂಟೆ ಕೃಷಿ ಭೂಮಿಯನ್ನು ಮೂಲ ಹಕ್ಕುದಾರರಿಗೆ ಮರಳಿ ನೀಡುವಂತೆ ಜಿಲ್ಲಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಡಾ. ಮೊಹಮ್ಮದ್ ರೋಶನ್ ಅಧ್ಯಕ್ಷತೆಯ ನ್ಯಾಯಾಲಯದಿಂದ ಈ ನಿರ್ಣಯ ಹೊರಬಿದ್ದಿದೆ.


ಜಕ್ಕರಹಟ್ಟಿ ಗ್ರಾಮದ ಮಾರುತಿ, ಅಪ್ಪಾಸಾಹೇಬ ಹಾಗೂ ಬಾಬು ಬಜಬಳೆ ಎಂಬ ರೈತ ಕುಟುಂಬವು ಕಳೆದ ಹಲವು ವರ್ಷಗಳಿಂದ ತಮ್ಮ ಹೆಸರಿನಲ್ಲಿದ್ದ 23 ಎಕರೆ 16 ಗುಂಟೆ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದರು.
ಆದರೆ, ಮದಭಾವಿಯ ದೌಲತ್, ಖಂಡೇರಾವ್ ಮತ್ತು ಆನಂದ ಘೋರಪಡೆ ಎಂಬ ಮೂವರು ಸಹೋದರರು, ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿನ ಅಧಿಕಾರಿಗಳ ಸಹಾಯದಿಂದ ನಕಲಿ ದಾಖಲೆಗಳ ಮೂಲಕ 13 ಎಕರೆ 8 ಗುಂಟೆ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾ ಯಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!