ಬೆಳಗಾವಿ.
ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಎರಡು ಅವಧಿಗೆ ಮುಂದುವರೆದಿದ್ದ ಮುಜಮಿಲ್ ಡೋಣಿ ಹಠಾತ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ದಿನವಷ್ಟೇ ವಿರೋಧಪಕ್ಷದ ನಗರಸೇವಕರು ಬದಲಾವಣೆ ಮಾಡಬೇಕೆಂದು ಶಾಸಕ ಆಸೀಫ್ ಶೇಠರಿಗೆ ಪತ್ರವನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಯಾಗಿದೆ ಎನ್ನುವ ಮಾತಿದೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕರ ಅಧೀಕೃತ ಆಸನದಲ್ಲಿ ನಗರಸೇವಕಿ ಪತ್ತೇಖಾನ ಅವರ ಪುತ್ರ ಇಮ್ರಾನ್ ಫತ್ತೇಖಾನ್ ಕುಳಿತಿದ್ದರು ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.
ಈಗ ಡೋಣಿ ಸ್ಥಾನಕ್ಕೆ ಶಾಹೀಲ್ ಸಂಗೊಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಗೊತ್ತಾಗಿದೆ