ವಾರದೊಳಗೆ ಪ್ರಕರಣ ದಾಖಲು ಸಾಧ್ಯತೆ
`ತೆರಿಗೆ ವಂಚನೆ- ಮಾಹಿತಿ ಸಂಗ್ರಹ ಶುರು’
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸದ್ದುಗದ್ದಲವಿಲ್ಲದೇ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.
ನಗರದ ಉದ್ಯಮಬಾಗದಲ್ಲಿರುವ ವೆಗಾ ಕಂಪನಿ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಲಿಕೆ ಆಯುಕ್ತರು ಲೋಕಾಯುಕ್ತರಿಗೆ ಲಿಖಿತ ಪತ್ರವನ್ನು ಕಳೆದ ದಿ. 5 ರಂದೇ ಬರೆದಿದ್ದರು.

ಈ ಪತ್ರ ತಲುಪಿದ ತಕ್ಷಣವೇ ಅದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ತೆರಿಗೆ ವಂಚನೆ ದೂರುಗಳ ಬಗ್ಗೆ ಇನ್ನಷ್ಟು ಸಾಕ್ಷಾಧಾರವನ್ನು ಸಂಗ್ರಹಿಸುವ ಕೆಲಸ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಆರಂಭಿಕ ಹಂತದಲ್ಲಿ ಪತ್ರ ಬರೆದ ಪಾಲಿಕೆ ಆಯುಕ್ತರಿಂದ ಸಮಗ್ರ ಮಾಹಿತಿ ಪಡೆಯುವ ಕೆಲಸ ಮಾಡುತ್ತಾರೆ, ಅಷ್ಟರೊಳಗೆ ನಿಯಮ 17 ಎ ರಡಿಯಲ್ಲಿ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆಗಳಿವೆ,ಬಹುಶ: ಇನ್ನೊಂದು ವಾರದೊಳಗೆ ಲೋಕಾಯುಕ್ತರು ತನಿಖೆಗಾಗಿ ಬೆಳಗಾವಿ ಪಾಲಿಕೆ ಪ್ರವೇಶ ಮಾಡಬಹುದು ಎನ್ನಲಾಗುತ್ತಿದೆ.

ವೆಗಾ ಕಂಪನಿ ತೆರಿಗೆ ಬಾಕಿ ಮತ್ತು ಪಾಲಿಕೆ ಆಯುಕ್ತರು ಪತ್ರ ಬರೆದಿದ್ದರ ಬಗ್ಗೆ ಸಂಯುಕ್ತ ಕನರ್ಾಟಕ ಶುಕ್ರವಾರ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.