ಬ್ಯಾನರ್ ಹರಿದವರ ಮೇಲೆ ಕ್ರಮಕ್ಕೆ ಆಗ್ರಹ
ಬೆಳಗಾವಿ.
ನಗರದ ಪ್ರಸಿದ್ಧ ಶ್ರೀ ಮಂಗಾಯಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ಸ್ವಾಗತ ಬ್ಯಾನರ್ ಹರಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು ಪಾಲಿಕೆಯ ಬಿಜೆಪಿ ನಗರಸೇವಕರ ನಿಯೋಗ ಆಗ್ರಹಿಸಿದೆ.

ಮೇಯರ್ ಮಂಗೇಶ ಪವಾರ್, ಉಪಮೇಯರ ವಾಣಿ ಜೋಶಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತ್ರತ್ವದ ನಿಯೋಗ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರಿಗೆ ಮನವಿ ಪತ್ರ ಅರ್ಪಿಸಿತು.

ಜಾತ್ರೆಯ ಸಂದರ್ಭದಲ್ಲಿ ಈ ಮೂಲಕ ಶಾಂತಿ ಕದಡುವ ಕೆಲಸವನ್ಬು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಆದ್ದರಿಂದ ಅಂತಹವರನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕೆಂದು ನಿಯೋಗ ಮನವಿ ಮಾಡಿಕೊಂಡಿತು.
ಆಯುಕ್ತರು ಈ ನಿಟ್ಟಿನಲ್ಲಿ ಕ್ರಮ ಜರುಗಿಸುವ ಭರವಸೆ ನೀಡಿದರು.
ಗಿರೀಶ ಧೋಂಗಡಿ, ಜಯಂತ ಜಾಧವ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಡಿಸಿಪಿ ನಾರಾಯಣ ಬರಮನಿ ಉಪಸ್ಥಿತರಿದ್ದರು.