ಆಪ್ತರ ಬಗ್ಗೆ ಎಚ್ಚರ ಎಚ್ಚರ ಎಚ್ಚರ…!
ಸಚಿವೆಯ ಸಾಧನೆಗೆ `ಆಪ್ತರೇ’ ಅಡ್ಡಗಾಲು..!
ಸಚಿವೆಗೆ ಇದು ಎಚ್ಚರದ ಘಂಟೆ
ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಬಹಳಷ್ಟು ಹೋರಾಟ ನಡೆಸಿ ಪಡೆದಿರುವ ಈ ಸ್ಥಾನಮಾನವನ್ನು ಉಳಿಸಿಕೊಳ್ಳಲು, ತಮ್ಮ ಆಪ್ತರ ಮೇಲೆ ಕಠಿಣ ನಿಯಂತ್ರಣ ಹೇರಲೇಬೇಕು.

ಜನಪ್ರೀಯತೆ ಹೆಚ್ಚಿದಂತೆ, ‘ಆಪ್ತ’ ಎನ್ನಿಸಿಕೊಂಡವರ ವಲಯವೂ ವಿಸ್ತರಿಸುತ್ತೇ ಹೋಗುತ್ತದೆ. ಆದರೆ ಅವರ ಮೇಲೆ ನಿಗಾವಹಿಸಿ, ಸಚಿವೆಯ ಹೆಸರನ್ನು ದುರುಪಯೋಗಪಡಿಸದಂತೆ ತಡೆಯುವುದು ತುರ್ತು ಅಗತ್ಯ.
“ನಾವು ಅವರ ಕಾರ್ಯಶೈಲಿಯನ್ನು ಮೆಚ್ಚುತ್ತೇವೆ. ಆದರೆ, ಅನಗತ್ಯ ವಿವಾದಗಳಿಂದ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳುವುದು ಸಚಿವರ ಕೈಯಲ್ಲಿದೆ.
ಬೆಳಗಾವಿ
ಗಡಿನಾಡ ಬೆಳಗಾವಿ ರಾಜಕೀಯದಲ್ಲಿ ಲಕ್ಷ್ಮೀ ಹೆಬ್ಬಾಳಕರ ಹೆಸರಿಗೆ ಒಂದು ರೀತಿಯ ಗತ್ತು ಗೈರತ್ತು ಇದೆ, ಅವರ ಸತತ ಶ್ರಮ, ಹೋರಾಟ ಮತ್ತು ಜನಪ್ರೀಯತೆಯ ಪ್ರತೀಕವೇ ಇದಕ್ಕೆ ಕಾರಣ.
ಗ್ರಾಮಾಂತರದಿಂದ ರಾಜ್ಯ ರಾಜಕೀಯದ ಅಂಗಳದವರೆಗೆ, ಅವರು ನಡೆದು ಬಂದ ದಾರಿಯು ಸುಗಮವಾಗಿರಲಿಲ್ಲ. ಸ್ವಪಕ್ಷೀಯ ವಿರೋಧಿಗಳ ಅಡೆತಡೆಗಳನ್ನು ಎದುರಿಸಿ ತಮ್ಮದೇ ಆದ ವಿಶಿಷ್ಟ ನಡೆ ನುಡಿಯ ಮೂಲಕ ಹೆಸರು ಮಾಡಿದವರಲ್ಲಿ ಹೆಬ್ಬಾಳಕರ ಒಬ್ಬರು.

ತಂದೆಯ ಅಸೆಯನ್ನು ಈಡೇರಿಸಲೇಬೇಕು ಎನ್ನುವ ಪಣತೊಟ್ಟು ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿಂದಲೇ ಸಚಿವೆಯಾದರು. ಗಮನಿಸಬೇಕಾದ ಸಂಗತಿ ಎಂದರೆ, ಗ್ರಾಮೀಣ ಕ್ಷೇತ್ರದಿಂದ ವಿಧಾನಸೌಧ ಕಟ್ಟೆ ಏರಿದವರಲ್ಲಿ ಇದುವರೆಗೂಯಾರೂ ಸಚಿವರಾಗಿರಲಿಲ್ಲ. ಆದರೆ ಲಕ್ಷ್ಮೀ ಹೆಬ್ಬಾಳಕರಗೆ ಮಂತ್ರಿಯಾಗುವ ಭಾಗ್ಯ ಸಿಕ್ಕಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಹೆಬ್ಬಾಳಕರ ಅವರ ದಿಟ್ಟ ನಿಲುವು, ನೇರ ಮಾತು, ಅಭಿವೃದ್ಧಿ ಕಾರ್ಯಗಳ ಬದ್ಧತೆ, ಎಲ್ಲವೂ ಅವರನ್ನು ಈ ಸಕರ್ಾರದಲ್ಲಿ ಪ್ರಭಾವಿ ಹುದ್ದೆಗೆ ತಲುಪಿಸಿದವು ಎನ್ನುವುದು ವಾಸ್ತವ,
ಆದರೆ ಈ ಎಲ್ಲ ಬೆಳವಣಿಗೆಗಳು ಸುರಳಿತವಾಗಿ ನಡೆದುಕೊಂಡು ಹೋಗಿದ್ದರೆ ಯಾರೂ ಸಚಿವೆರ ಬಗ್ಗೆ ಬೊಟ್ಟು ಮಾಡಿ ತೋರಿಸುವ ಪ್ರಮೇಯವೇ ಬರುತ್ತಿರಲಿಲ್ಲ.
ಆದರೆ ಈಗ `ಆಪ್ತರು’ ಎಂದು ಕರೆಯಿಸಿಕೊಳ್ಳುವ ಕೆಲವರ ನಡೆ ಸಚಿವೆ ಹೆಬ್ಬಾಳಕರ ಅವರ ಪ್ರಗತಿಯ ಓಟಕ್ಕೆ ಅಡ್ಡಿಯಾಗಿದೆ ಎನ್ನುವುದು ಸುಳ್ಳಲ್ಲ.
ಸಹಜವಾಗಿ ಪ್ರಭಾವಿ ಸಚಿವೆ ಎಂದಾಕ್ಷಣ ಒಂದಿಷ್ಟು ಅಧಿಕೃತ ಮತ್ತು ಅನಧೀಕೃತ ಪಿಎಗಳು ಹುಟ್ಟಿಕೊಳ್ಳುವುದು ಸಹಜ. ಇನ್ನೂ ಕೆಲವರು ನಾನು ಹೇಳಿದಂತೆ ಮಾತ್ರ ಸಚಿವರು ಕೇಳುತ್ತಾರೆ ಎಂದು ಹೇಳುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಇಲ್ಲಿ ಸಾಕಷ್ಟಿದ್ದಾರೆ.
ಆದರೆ ಅಂತಹ ಪಿಎಗಳನ್ನೇ ನಂಬಿ ಸಚಿವೆ ಮುಂದಕ್ಕೆ ಸಾಗುತ್ತಿರುವುದರಿಂದ ಕೆಲವೊಂದು ಸಚಿವರು ಸಂದರ್ಭದಲ್ಲಿ ಅನಿವಾರ್ಯವಾಗಿ ಮುಜುಗುಕ್ಕೊಳಗಾಗಬೇಕಾದ ಪರಿಸ್ಥಿತಿ ಬಂದೊದಗಿದೆ.
ಇಲ್ಲಿ ಸ್ಪಷ್ಟವಾಗಿ ಹೇಳಲೇಬೇಕೆಂದರೆ, ಬೆಳಗಾವಿಯ ಎಲ್ಲ ವರ್ಗದ ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದ ಸಚಿವೆ ಹೆಬ್ಬಾಳಕರ ಅವರನ್ನು ಪಿಎಗಳೇ ದೂರ ಮಾಡುತ್ತಿದ್ದಾರೆ ಎನ್ನುವ ಮಾತಿದೆ.. ಇದೂ ಕೂಡ ಅವರ ಇಮೇಜ್ಗೆ ಕಪ್ಪು ಚುಕ್ಕೆಯಾಗುತ್ತಿದೆ, ಆದರೆ ಅವರು ಇದನ್ನು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.
ಪಿಎಗಳ ವಿವಾದಗಳ ಸರಮಾಲೆ
ಬೆಳಗಾವಿ ತಹಶೀಲ್ದಾರ ಕಚೇರಿ ಆತ್ಮಹತ್ಯೆ ಪ್ರಕರಣ. ಇಲ್ಲಿ ಗುಮಾಸ್ತನೊಬ್ಬ ತಹಶೀಲ್ದಾರ ಕಚೇರಿಯಲ್ಲಿಯೇ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲೂ ಸಚಿವೆಯ ಆಪ್ತರ ಹೆಸರು ಮುನ್ನಲೆಗೆ ಬಂದಿತ್ತು,
ಇನ್ನು ಸಿಟಿ ರವಿ ಕೇಸ್ ನಂತರದ ಬೆಳವಣಿಗೆಯಲ್ಲೂ ಕೂಡ ಆಪ್ತರ ಯಡವಟ್ಟುಗಳು ಕೇಳಿ ಬಂದವು.
ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೇ ಸಕರ್ಾರಿ ನೌಕರಿ ಕೊಡಿಸುವುದಾಗಿ ವಂಚಿಸಿದ್ದ ಪ್ರಕರಣದಲ್ಲಿ ಕೂಡ ಸಚಿವೆಯ ಆಪ್ತನ ಹೆಸರು ಮುನ್ನೆಲೆಗೆ ಬಂದಿತು,
ಆದರೆ ಸುದೈವವಶಾತ್ ಇದರ ಬಗ್ಗೆ ಎಸ್ಪಿಯವರಿಗೆ ಮುಂಚಿತವಾಗಿ ಪತ್ರ ಬರೆದು ಪ್ರಕರಣದ ತನಿಖೆಗೆ ಸೂಚನೆ ನೀಡಿದ್ದರು,
ಇತ್ತೀಚಿನ ಇನ್ನೂ ಕೆಲವು ಕಚೇರಿ ಮಟ್ಟದ ಗೊಂದಲಗಳು ಮತ್ತು ಸರ್ಕಾರಿ ಕಚೇರಿ ಕೆಲಸದಲ್ಲಿ ಹಸ್ತಕ್ಷೇಪದ ಆರೋಪಗಳಲ್ಲಿಯೂ ಆಪ್ತರ ಹೆಸರುಗಳು ಕೇಳಿಬಂದಿವೆ.
ಈ ಪಟ್ಟಿ ಉದ್ದವಾಗುತ್ತಲೇ ಇದೆ, ಆದರೆ ಇದರ ಮಧ್ಯೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ಎಂದರೆ, ಸಚಿವರು ಸ್ವತಃ ಯಾವುದೇ ತಪ್ಪಿನಲ್ಲಿ ಭಾಗಿಯಾಗದೇ ಇದ್ದರೂ, ಅವರ ಹೆಸರನ್ನು ಈ ರೀತಿಯ ವಿವಾದಗಳಲ್ಲಿ ಎಳೆಯುತ್ತಿರುವುದು ಅವರ ಆಪ್ತರ ನಡವಳಿಕೆಯೇ ಕಾರಣ.
ಇವರ ಪಿಎ ಹೆಸರು ಏಕಿಲ್ಲ?

ಗಡಿನಾಡ ಬೆಳಗಾವಿಯಲ್ಲಿಯೇ ಮತ್ತೊಬ್ಬ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ ಇದ್ದಾರೆ. ಆದರೆ ಎಲ್ಲಿಯೂ ಅವರ ಆಪ್ತರ ಹೆಸರುಗಳು ಇಂತಹ ವಿವಾದಗಳಲ್ಲಿ ಕೇಳಿಬಂದಿಲ್ಲ
ಇದರಿಂದಲೇ, ಸಚಿವೆಯ ಶಿಬಿರದಲ್ಲೇ ಒಳನಿರ್ವಹಣಾ ಶಿಸ್ತು ಕೊರತೆ ಇದೆಯೇ? ಎಂಬ ಪ್ರಶ್ನೆಕೇಳಿ ಬರುತ್ತಿದೆ.
ರಾಜಕೀಯದಲ್ಲಿ ನಾಯಕನ ಶಕ್ತಿ ಮತ್ತು ದುರ್ಬಲತೆ ಎರಡೂ ಅವರ ತಂಡದಿಂದಲೇ ನಿಧರ್ಾರಗೊಳ್ಳುತ್ತದೆ.