ಸಿಕ್ಕಿ ಬಿದ್ದ ಲಂಚಬಾಕ..!

ಇ ಬೆಳಗಾವಿ ಬಳಿ ದಾಖಲೆ ಲಭ್ಯ.

ಟೇಬಲ್ ಮೇಲೆ ಗರಿಗರಿ ನೋಟಿದ್ದರೆ ಕೆಲಸ,

ಇಲ್ಲದಿದರೆ ನಾಳೆ ಬಾ

ಲೋಕಾಯುಕ್ತರ ಭಯ ಇಲ್ಲದ ಲಂಚಬಾಕರು.

ಬೆಳಗಾವಿ.

ಗಡಿನಾಡ ಬೆಳಗಾವಿಯ ಕೆಲ ಸರ್ಕಾರಿ ಕಚೇರಿಗಳಲ್ಲಿ ಕಾಂಚಾಣ ಸದ್ದು ಮಾಡದಿದ್ದರೆ ಬ್ರಹ್ಮ ಬಂದರೂ ಕೆಲಸ ಆಗಲ್ಲ ಎಂದು E belagavi ವರದಿ ಮಾಡಿತ್ತು.

ಯಾವಾಗಲೂ ಇ ಬೆಳಗಾವಿ ಡಾಟ್ ಕಾಮ್ ಗಾಳಿಯಲ್ಲಿ ಗುಂಡು ಹಾರಿಸಿದಂತೆ ,ಅಂತೆ ಕಂತೆಗಳ ಮೇಲೆ ವರದಿ ಮಾಡಲ್ಲ. ಪಕ್ಕಾ ದಾಖಲೆಗಳನ್ನು ಇಟ್ಡುಕೊಂಡೇ ಸುದ್ದಿಯನ್ನು ಪ್ರಕಟಿಸುವ ಕೆಲಸವನ್ನು ನಿಮ್ಮ ಇ ಬೆಳಗಾವಿ ಮಾಡುತ್ತ ಬಂದಿದೆ..

ಬೆಳಗಾವಿ ಲೋಕಾಯುಕ್ತ ಕಚೇರಿಯ ಸುತ್ತಮುತ್ತಲು ಇರುವ ಸರ್ಕಾರಿ ಕಚೇರಿಗಳಲ್ಲಿ ಸಿಟಿಎಸ್ ಮತ್ತು ಭೋಜಾ ಕಡಿಮೆ ಮಾಡಿ ದಾಖಲೆ‌ ಕೊಡುವುದಕ್ಕಾಗಿ ಯಾವ ರೀತಿ ಮುಲಾಜಿಲ್ಲದೇ ಹಣವನ್ನು ಕೇಳಿ ಪಡೆಯಲಾಗುತ್ತದೆ ಎಂದು ವರದಿ ಪ್ರಕಟವಾಗಿತ್ತು.

ಇಲ್ಲಿ ದುಡ್ಡೇ ದೊಡ್ಡಪ್ಪ

https://ebelagavi.com/index.php/2023/09/12/b-2/

ಈಗ ಭೋಜಾ ಕಡಿಮೆ ಮಾಡಿದ ದಾಖಲೆ ಕೊಡಲು ಒಬ್ಬ ಸಿಬ್ಬಂದಿ ಲಂಚ ಪಡೆಯುವ ದೃಶ್ಯ ಲಭ್ಯವಾಗಿದೆ‌‌. .ಕಚೇರಿಯಲ್ಲಿಯೇ ರಾಜಾರೋಷವಾಗಿ ವ್ಯಕ್ತಿಯೊಬ್ಬರಿಂದ ಪಡೆಯಲಾಗುತ್ತಿದೆ‌ ಆ ರೀತಿ ಪಡೆದ ಹಣವನ್ಬು ಟೇಬಲ್ ಮೇಲಿಟ್ಟ ಪೊಟೊ ಕೂಡ ಇದೆ. ಅಂದರೆ ಇವರಿಗೆ ಯಾರದೇ ಭಯವಿಲ್ಲ ಎನ್ನುವುದು ಸ್ಪಷ್ಟ.

Leave a Reply

Your email address will not be published. Required fields are marked *

error: Content is protected !!