ದರ್ಶನ ಗ್ಯಾಂಗ್ ತರಹ ಚಿತ್ರಹಿಂಸೆ ನೀಡಿದ್ದರು.
ಹೊಟೇಲನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ .ಹತ್ತುಸಾವಿರ ಕೊಟ್ಟು ಕೇಸ್ ಮುಚ್ವಿಹಾಕುವ ಯತ್ನ.
ಮೃತ ಕುಟುಂಬದ ಬೆನ್ನಿಗೆ ನಿಂತ ಗ್ರಾಮಸ್ಥರು.
ಬೆಳಗಾವಿ:
ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ಸಾಕ್ಷಿಯಾಗಿದೆ.
ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನುವ ಒಂದೇ ಕಾರಣಕ್ಕೆ ಚಿತ್ರನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿ ಕೊಂದಿತ್ತು.
ಈಗ ಅದೇ ಮಾದರಿಯಲ್ಲಿ 18 ವರ್ಷದ ಕಾರ್ಮಿಕನ ಮೇಲೆ ಕಳ್ಳತನ ಆರೋಪ ಹೊರೆಸಿದ ಹೊಟೇಲ್ ಮಾಲಿಕ ಚಿತ್ರಹಿಂಸೆ ನೀಡಿ ಸಾವಿಗೆ ಕಾರಣವಾಗಿದ್ದಾನೆ.

ಮೃತ ಯುವಕ ಮೈಯೇಕರ
ಅಷ್ಟೇ ಅಲ್ಲ ಹೊಟೇಲ್ ಮಾಲಿಕ ನಾಗೇಶ್ ಬೆಡರೆ ಮತ್ತು ಸಹೋದರ ವಿಜಯ್ ಬೆಡರೆ ಇಷ್ಟೆಲ್ಲ ರಾದ್ದಾಂತ ಮಾಡಿದ ಮೇಲೂ ಕುಟುಂಬಸ್ಥರಿಗೆ ಬೆದರಿಕೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದನು ಎಂದು ಗೊತ್ತಾಗಿದೆ. ಇಲ್ಲಿ ಮೃತ ಯುವಕನ ಪೋಷಕರಿಗೆ ಹತ್ತು ಸಾವಿರ ರೂ ನೀಡಿ ಕೇಸ್ ದಾಖಲು ಮಾಡದಂತೆ ಬೆದರಿಕೆ ಹಾಕಿದ್ದರು ಎಂದು ಗೊತ್ತಾಗಿದೆ.
ಮಾಣಿಕವಾಡಿ ಗ್ರಾಮದ 18 ವರ್ಷದ ವೆಂಕಪ್ಪ ಮೈಯೆಕರ್ ಹೋಟೆಲ್ನಲ್ಲಿ ಕೆಲಸ ಮಾಡುವ ವೇಳೆ ಹಲ್ಲೆಗೊಳಗಾಗಿ ಮೃತಪಟ್ಟವ ಎಂದು ಗೊತ್ತಾಗಿದೆ.
ಘಟನೆ ಹಿನ್ನೆಲೆ
ವೆಂಕಪ್ಪ ಮೈಯೆಕರ್, ಖಾನಾಪುರದ ಹೊರವಲಯದ ಹೋಟೆಲ್ನಲ್ಲಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದನು..
ಸೆಪ್ಟೆಂಬರ್ 16 ರಂದು ಹೋಟೆಲ್ ಮಾಲೀಕ ನಾಗೇಶ್ ಬೆಡರೆ ಮತ್ತು ಸಹೋದರ ವಿಜಯ್ ಬೆಡರೆ ಯುವಕನ ಮೇಲೆ ಕಳ್ಳತನದ ಸುಳಿವು ನೀಡುತ್ತ, ಆತನನ್ನು ಕೂಡಿ ಹಾಕಿ, ತೀವ್ರ ಹಲ್ಲೆ ಮತ್ತು ಚಿತ್ರಹಿಂಸೆ ನೀಡಿದರು ಎನ್ನಲಾಗಿದೆ.
ಗಾಯಗೊಂಡ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತಪಟ್ಟಿದ್ದಾನೆ.

ಪೋಷಕರಿಗೆ ಬೆದರಿಕೆ
ಹೋಟೆಲ್ ಮಾಲೀಕರು ಮೃತನ ಪೋಷಕರಿಗೆ 10,000 rs ನೀಡುವ ಮೂಲಕ ದೂರು ನೀಡದಂತೆ ಬೆದರಿಕೆ ಹಾಕಿದ್ದರೆಂದು ಗೊತ್ತಾಗಿದೆ.
ಪೋಷಕರು ಬೆದರಿಕೆಯ ಭಯದಿಂದ ಪೊಲೀಸ್ಗೆ ದೂರು ನೀಡಲು ಹಿಂಜರಿದಿದ್ದರು, ಆದರೆ ಗ್ರಾಮಸ್ಥರ ಬೆಂಬಲದೊಂದಿಗೆ ದೂರು ನೀಡಿ ಪ್ರಕರಣ ದಾಖಲಿಸಿದರು.
ಮುಂದಿನ ಕ್ರಮ
ಮಾಲೀಕ ನಾಗೇಶ್ ಬೆಡರೆ ಮತ್ತು ಸಹೋದರ ವಿಜಯ್ ಬೆಡರೆ ವಿರುದ್ಧ ಕಠಿಣ ತನಿಖೆ ನಡೆಯಲಿದೆ.
ಪೋಲೀಸ್ ಇಲಾಖೆ ನ್ಯಾಯಾಂಗಕ್ಕೆ ಸಲ್ಲಿಸಲು ಸಂಪೂರ್ಣ ದಾಖಲೆಗಳು ಮತ್ತು ಸಾಕ್ಷಿಗಳನ್ನು ಸಂಗ್ರಹಿಸುತ್ತಿದೆ.