ಪಾಲಿಕೆ ಆಯುಕ್ತೆಯ ಭರ್ಜರಿ ಸ್ಟೆಪ್..‌!

ಗಣಪತಿಯ ವಿದಾಯ ಮೆರವಣಿಗೆ
ಆಯುಕ್ತೆಯ ಭರ್ಜರಿ ಸ್ಟೆಪ್

ಬೆಳಗಾವಿ,
ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ಕೊನೆಯ ಕ್ಷಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಿಗೆ ಕುಣಿದ ದೃಶ್ಯ ನಗರಕ್ಕೆ ಹೊಸ ಉತ್ಸಾಹ ತುಂಬಿತು.

ಆಯುಕ್ತೆ ಶುಭ ಜೊತೆ, ಉಪಮೇಯರ್ ವಾಣಿ ಜೋಶಿ, ಮೇಯರ್ ಮಂಗೇಶ ಪವಾರ್ ಜೊತೆಗೆ ಹಲವಾರು ನಗರಸೇವಕರು ಸಂಗೀತದ ತಾಳಕ್ಕೆ ಭರ್ಜರಿ ಸ್ಟೆಪ್ ಹಾಕಿ ಮೆರವಣಿಗೆಗೆ ಹೊಸ ರಂಗು ತಂದರು,
ಕಳೆದ ದಿ, 6 ರಂದು ಸಂಜೆ ಆರಂಭಗೊಂಡ ವಿಸರ್ಜನೆ ಮೆರವಣಿಗೆಯು ದಿ, 8 ರ ಬೆಳಗಿನ ಜಾವ 5.15 ಕ್ಕೆ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿತು.

ಸಹಜವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಗಣೇಶನನ್ನೇ ಕೊನೆಯದಾಗಿ ವಿಸರ್ಜನೆ ಮಾಡುವ ಪರಿಪಾಠ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ತಾಸಿನಿಂದ ಟೆನ್ಶನದಲ್ಲಿದ್ದ ಎಲ್ಲರೂ ಬಿಂದಾಸ್ ಆಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು,
ಆಯುಕ್ತರು, ಉಪಮೇಯರ್ ಸೇರಿದಂತೆ ಬಹುತೇಕರು ಡ್ಯಾನ್ಸ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ,
ಇದೇ ಮೊದಲ ಬಾರಿಗೆ ಬೆಳಗಾವಿ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಆಡಳಿತದ ತ್ರಿಮೂರ್ತಿಗಳು ನೇರವಾಗಿ ‘ಪಬ್ಲಿಕ್’ ಜೊತೆ ಹೆಜ್ಜೆ ಹಾಕಿದ ವಿಶೇಷ ಕ್ಷಣ ಎಂದು ಸ್ಥಳೀಯರು ಹೇಳಿದರು.

Leave a Reply

Your email address will not be published. Required fields are marked *

error: Content is protected !!