ಬೆಳಗಾವಿ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿ.ಟಿ.ಯು) ಕರ್ನಾಟಕದಷ್ಟೇ ಅಲ್ಲ, ದೇಶದ ತಾಂತ್ರಿಕ ಶಿಕ್ಷಣ ವಲಯದ ಹೆಮ್ಮೆ.!
ಇಂತಹ ಅತಿ ದೊಡ್ಡ ಸಂಸ್ಥೆಯ ಮುಂಚೂಣಿಯಲ್ಲಿ ನಿಂತು ದಿಕ್ಕು ತೋರಿಸುವ ಉಪಕುಲಪತಿ ಪ್ರೊ. ವಿದ್ಯಾಶಂಕರ ಅವರ ಅವದಿ ಈಗ ಮತ್ತೇ ಮೂರು ವರ್ಷಗಳ ಕಾಲ ವಿಸ್ತರಣೆಯಾಗಿದೆ.
ಇದು ಕೇವಲ ಹುದ್ದೆಯ ಮುಂದುವರಿಕೆ ಅಲ್ಲ. ಅವರ ಆಡಳಿತ ಶೈಲಿ, ಶೈಕ್ಷಣಿಕ ದೃಷ್ಟಿಕೋನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ದೊರೆತ ಮಾನ್ಯತೆ ಎಂದು ಹೇಳಲಾಗುತ್ತಿದೆ.

ಶಿಕ್ಷಣ, ಸಂಶೋಧನೆಗೆ ಹೊಸ ಚೈತನ್ಯ
ಪ್ರೊ. ವಿದ್ಯಾಶಂಕರ ಅವಧಿಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವನ್ನು ವಿ.ಟಿ.ಯು ಅತಿ ವೇಗವಾಗಿ ಅಳವಡಿಸಿಕೊಂಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಪಠ್ಯಕ್ರಮಗಳನ್ನು ನವೀಕರಿಸಿ, ಕೌಶಲ್ಯಾಧಾರಿತ ಹಾಗೂ ಉದ್ಯಮಾಭಿಮುಖ ಕಲಿಕೆಗೆ ಪ್ರಾಮುಖ್ಯತೆ ನೀಡಲಾಯಿತು. ಇದರಿಂದ ವಿದ್ಯಾರ್ಥಿಗಳು ಕೇವಲ ತಾಂತ್ರಿಕ ಜ್ಞಾನವನ್ನೇ ಅಲ್ಲ, ಕೈಗಣ್ಣಿನ ಅನುಭವವನ್ನೂ ಪಡೆಯಲು ಸಾಧ್ಯವಾಯಿತು.

ಉದ್ಯಮ-ವಿಶ್ವವಿದ್ಯಾಲಯ ಸಹಭಾಗಿತ್ವ
ಇದರ ಜೊತೆಗೆ ವಿ.ಟಿ.ಯು ಹಲವು ಪ್ರಮುಖ ಉದ್ಯಮ ಗುಂಪುಗಳೊಂದಿಗೆ ಒಪ್ಪಂದಗಳನ್ನು ಮಾಡಿದೆ. ಈ ಸಹಭಾಗಿತ್ವಗಳ ಮೂಲಕ ವಿದ್ಯಾರ್ಥಿಗಳಿಗೆ ಇಂಟನಶಿಪ್, ಸಂಶೋಧನಾ ಪ್ರಾಜೆಕ್ಟು, ಉದ್ಯೋಗಾವಕಾಶಗಳ ಬಾಗಿಲು ತೆರೆಯಲಾಗಿದೆ.

“ಕಂಪನಿ ಮತ್ತು ಕ್ಯಾಂಪಸ್ ನಡುವಿನ ಅಂತರ ಕಡಿಮೆ ಮಾಡುವುದು” ಎಂಬುದೇ ಅವರ ಧ್ಯೇಯವಾಗಿತ್ತು.
ಮಹಾಮಾರಿ ಕೊರೊನಾ ನಂತರದ ಕಾಲದಲ್ಲಿ, ವಿ.ಟಿ.ಯು ಡಿಜಿಟಲ್ ಶಿಕ್ಷಣದಲ್ಲಿ ತಕ್ಷಣ ಚೇತರಿಸಿಕೊಂಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.
ಆನ್ಲೈನ್ ಪಠ್ಯಕ್ರಮ, ಡಿಜಿಟಲ್ ಗ್ರಂಥಾಲಯ, ಮತ್ತು ಇ ಗವರ್ಣನ್ಸ್ ವ್ಯವಸ್ಥೆ ಆಡಳಿತದ ಪಾರದರ್ಶಕತೆಗೂ, ವಿದ್ಯಾಥರ್ಿ ಶಿಕ್ಷಕ ಸಂಪರ್ಕಕ್ಕೂ ಹೊಸ ಚೈತನ್ಯ ನೀಡಿತು.
ವಿಶ್ವವಿದ್ಯಾಲಯದಲ್ಲಿ ಹಲವು ಸಂಶೋಧನಾ ಕೇಂದ್ರಗಳು, ಇಂಕ್ಯುಬೇಶನ್ ಹಬ್ಬಗಳು, ಪೇಟೆಂಟ್ಗಳ ಉತ್ತೇಜನ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಲು ವಿಶೇಷ ಅನುದಾನ ವ್ಯವಸ್ಥೆ ಕಲ್ಪಿಸಲಾಯಿತು.
ಇದರಿಂದ ವಿ.ಟಿ.ಯು ಜಾಗತಿಕ ಶೈಕ್ಷಣಿಕ ನಕ್ಷೆಯಲ್ಲಿ ಹೊಸ ಸ್ಥಾನ ಪಡೆಯಲು ಆರಂಭಿಸಿತು ಎಂದು ಹೇಳಬಹುದು.
ವಿದ್ಯಾರ್ಥಿ- ಕೇಂದ್ರಿತ ದೃಷ್ಟಿಕೋನ
ವಿದ್ಯಾಶಂಕರ ಅವರ ಆಡಳಿತದಲ್ಲಿ ವಿದ್ಯಾರ್ಥಿಗಳ ಕಲ್ಯಾಣಕ್ಕೂ ವಿಶೇಷ ಒತ್ತು ನೀಡಲಾಗಿದೆ. ವಿದ್ಯಾರ್ಥಿ ದೂರು ಪರಿಹಾರ ಕೇಂದ್ರಗಳು, ಕೌನ್ಸೆಲಿಂಗ್ ಸೌಲಭ್ಯಗಳು, ಹಾಗೂ ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಯಿತು.
ಅಭಿನಂದನೆ ಮಹಾಪೂರ..
ವಿಟಿಯು ಉಪಕುಲಪತಿಯಾಗಿ ವಿದ್ಯಾಶಂಕರ ಅವರ ಅವಧಿ ಮುಂದುವರೆಯುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು.
ವಿಟಿಯು ಸಿಬ್ಬಂದಿಗಳು ಸೇರಿದಂತೆ ವಿವಿಧ ಕಾಲೇಜಿನ ಮುಖ್ಯಸ್ಥರು ಮತ್ತು ಕನ್ನಡ ಪರ ಸಂಘಟನೆಗಳು ವಿದ್ಯಾಶಂಕರ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.