ಗಣೇಶ ವಿಸರ್ಜನೆ ಮೆರವಣಿಗೆ ಆರಂಭ, ಶಾಸಕ ಅಭಯ ಪಾಟೀಲ, ಕವಟಗಿಮಠ, ರಾಜು ಶೇಠ, ಮೇಯರ್ ಭಾಗಿ,
ಮೆರವಣಿಗೆ ಕಣ್ತುಂಬಿಕೊಳ್ಳುವ ಸಂಭ್ರಮಕ್ಕೆ ಖಾಕಿ ಅಡ್ಡಿ,
ಅಂಬ್ಯುಲೆನ್ಸ್ ಹೋಗದಂತೆ ಬ್ಯಾರಿಕೇಡ್ ಹಾಕಿದ ಖಾಕಿ
ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಹನ್ನೊಂದು ದಿನಗಳ ಕಾಲ ವಿರಾಜಮಾನಗೊಂಡ ಗಣಪತಿ ವಿಸರ್ಜನೆ ಮೆರವಣಿಗೆ ನಿಗದಿತ ಸಮಯಕ್ಕೆ ಆರಂಭಗೊಂಡಿದೆ.
ಕಾವೇರಿ ಕೋಲ್ಡ್ರಿಂಕ್ಸ್ ಬಳಿ ಶಾಸಕ ಅಭಯ ಪಾಟೀಲ ವಿಧಾನ. ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಆಸೀಫ್ ಶೇಠ, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಡಿಸಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಸಿದ್ರಾಮಪ್ಪ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮುಂತಾದವರು ಮೆರವಣಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಹಾಜರಿದ್ದರು.
ಸಧ್ಯ ಬೋಗಾರವೇಸ್ ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂಭ್ರಮ ವನ್ಬು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಈ ಬಾರಿ ಗಣೇಶ ಮಂಡಳದವರು ಡಿಜೆಗೆ ಹೆಚ್ಚಿನ ಒತ್ತು ಕೊಡದೇ ಜಾಂಜ್ , ಜೇಜಿಮ್ ಗೆ ಆಧ್ಯತೆ ಕೊಟ್ಟಿದ್ದು ಎದ್ದು ಕಾಣುತ್ತಿದೆ.
ಕಪಿಲೇಶ್ವರ ಸೇರಿದಂತೆ ಬೆಳಗಾವಿಯ ಎಂಟು ಕಡೆಗೆ ಸಾರ್ವಜನಿಕ ಗಣೇಶ ವಿಸರ್ಜನೆ ವ್ಯವಸ್ಥೆಯನ್ನು ಪಾಲಿಕೆ ಅಚ್ಚುಕಟ್ಟಾಗಿ ಮಾಡಿದೆ.
ಬಂದ್ ಬಂದ್ ಬಂದ್..!
ಗಣೇಶ ವಿಸರ್ಜನೆ ಮೆರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲುಆಗಮಿಸುವ ಭಕ್ತರಿಗೆ ಪೊಲೀಸರ ಅತೀಯಾದ ಬಂದೊಬಸ್ತಿ ಅಡ್ಡಿಯಾಗುತ್ತಿದೆ.
ಕಿತ್ತೂರು ಚನ್ನಮ್ಮ ವೃತ್ತದ ಮೂಲಕ ಕಾಲೇಜು ರಸ್ತೆ ಗೆ ಅಡ್ಡಲಾಗಿ ಪೂರ್ಣವಾಗಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.
ಅಲ್ಲಿ ವಾಹನ ಬಿಡಿ. ಪಾದಚಾರಿಗಳಿಗೂ ಅವಕಾಶ ಕೊಡುತ್ತಿಲ್ಲ. ಕಾಲೇಜು ರಸ್ತೆಯಲ್ಲಿರುವ ಆಸ್ಪತ್ರೆಗೆ ಅಂಬ್ಯುಲೆನ್ಸ್ ಬಂದರೂ ಹೋಗದ ಹಾಗೆ ಬಂದ್ ಮಾಡಿದ್ದಾರೆ.
ಅಲ್ಲಿನ ಪೊಲೀಸರು ಜನರಿಗೆ ಕಾಕತಿವೇಸ್ ಮೂಲಕ ಹೋಗಿ ಎನ್ನುವ ಉತ್ತರ ನೀಡುತ್ತಾರೆ. ಅವರ ಸೂಚನೆ ಪ್ರಕಾರ ಕಾಕತೇಸಕಡೆಗೆ ಹೋದರೆ ಅಲ್ಲಿ ಕೂಡ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಅಲ್ಲಿರುವ ಪೊಲೀಸರು ಅಂಬ್ಯುಲೆನ್ಸ್ ಸೇರಿದಂತೆ ಯಾವುದೇ ವಾಹನ ಬಂದರೂ ಬಿಡಬಾರದು ಎನ್ನುವ ಸೂಚನೆ ಮೇಲಾಧಿಕಾರಿಗಳಿಂದ ಬಂದಿದೆ ಎನ್ನುವ ಉತ್ತರ ಕೊಡುತ್ತಾರೆ.
ಹೀಗಾಗಿ ಬೋಗಾರವೇಸ್ ಬಳಿ ಮೆರವಣಿಗೆಯ ಸಂಭ್ರಮ ದಲ್ಲಿ ಭಾಗಿಯಾಗುವ ಭಕ್ತಾಧಿಗಳಿಗೆ ಪೊಲೀಸರು ಅಡ್ಡಿಯಾಗುತ್ತಿದ್ದಾರೆ ಎನ್ನುವ ಅಸಮಾಧಾನ ವ್ಯಕ್ತವಾಗುತ್ತಿದೆ.
ಇನ್ನು ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.