ಬೆಳಗಾವಿ ‘ಸ್ಮಾರ್ಟ’ ಟೀಕಾಕಾರರಿಗೆ ರಾಷ್ಟ್ರಪತಿ ಉತ್ತರ

ಸ್ಮಾರ್ಟ ಸಿಟಿ ಬೆಳಗಾವಿಗೆ ರಾಷ್ಟ್ರಪತಿ ಶಹಬ್ಬಾಷಗಿರಿ.

ಮಧ್ಯಪ್ರದೇಶ ದ ಇಂದೋರನಲ್ಲಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ವಿತರಣೆ.

ಬೆಳಗಾವಿ ಸ್ಮಾರ್ಟ ಟೀಕಾಕಾರರಿಗೆ ಪ್ರಶಸ್ತಿ ಮೂಲಕ ಉತ್ತರ ಕೊಟ್ಟ ರಾಷ್ಟ್ರಪತಿ.

ಸ್ಮಾರ್ಟ ಪ್ರಶಸ್ತಿ ಖುಷಿ ತಂದಿದೆ ಎಂದ ಶಾಸಕ ಅಭಯ ಪಾಟೀಲ


ಬೆಳಗಾವಿ.
ಗಡಿನಾಡ ಬೆಳಗಾವಿ ಸ್ಮಾರ್ಟ ಸಿಟಿ ಬಗ್ಗೆ ಸದಾ ಇಲ್ಲ ಸಲ್ಲದ್ದೊಂದು ಮಾತನಾಡುವ ‘ಪ್ರಜ್ಞಾವಂತ’ ಟೀಕಾಕಾರರಿಗೆ ಖುದ್ದು ರಾಷ್ಟ್ರಪತಿ ಮುರ್ಮು ಉತ್ತರ ನೀಡಿದ್ದಾರೆ.
ಬೆಳಗಾವಿ ಸ್ಮಾರ್ಟ ಸಿಟು ಕಾಮಗಾರಿ ಕಳಪೆ ಆಗಿದೆ. ‘ಸ್ಮಾರ್ಟ” ಆದವರೇ ಬೇರೆಯವರು’ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡಿದ್ದರು. ಮಾತನಾಡುತ್ತಲೇ ಇದ್ದರು‌.
ಅಂತಹ ಅಸಂತುಷ್ಡರಿಗೆ ಮುರ್ಮು ಉತ್ತರ ರವಾನಿಸಿದ್ದಾರೆ.
ಅದೂ ಮಧ್ಯಪ್ರದೇಶ ಇಂದೋರನಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿಗೆ ರಾಷ್ಟ್ರಪತಿಗಳು ಪ್ರಶಸ್ತಿ ನೀಡಿ ಶಹಬ್ಬಾಷಗಿರಿ ನೀಡಿದ್ದಾರೆ
.

ಇಂಡಿಯಾ ಸ್ಮಾರ್ಟ್ ಸಿಟೀಸ್ ಅವಾರ್ಡ್ಸ್ ಸ್ಪರ್ಧೆಯಲ್ಲಿ (ISAC 2022) ಬೆಳಗಾವಿ ಸೇರಿದಂತೆ ಕರ್ನಾಟಕದ ಮೂರು ನಗರಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಇದರಲ್ಲಿ 1 ಮಿಲಿಯನ್ ಜನಸಂಖ್ಯೆಯೊಳಗಿನ ದಕ್ಷಿಣ ಭಾರತದ ನಗರಗಳ ಪೈಕಿ ಬೆಳಗಾವಿ ಒಟ್ಟಾರೆ ಸಾಧನೆಗಾಗಿ ಪ್ರಶಸ್ತಿ ಪಡೆದಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ವಿಶೇಷ ಯೋಜನೆಗಳಿಗಾಗಿ ಪ್ರಶಸ್ತಿ ಪಡೆದಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ (ದಿ.27) ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.


ಮೊದಲ ಬಾರಿಗೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಯೋಜನಾ ಮೌಲ್ಯಮಾಪನ, ಪರಿಸರ, ಸಾಮಾಜಿಕ ಆಡಳಿತ, ಯೋಜನೆಯ ಪರಿಕಲ್ಪನೆ ಮತ್ತು ಯೋಜನಾ ಅಭಿವೃದ್ಧಿ ಮತ್ತು ನವೀನ ಯೋಜನೆಯ ಹಣಕಾಸು ಒಳಗೊಂಡಿತ್ತು. 2016ರ ಮೊದಲ ಪಟ್ಟಿಯಲ್ಲಿ ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಬೆಳಗಾವಿಗೆ ಒಟ್ಟು 930 ಕೋಟಿ ರೂ.ನಿಧಿ ಮಂಜೂರಾಗಿದೆ. ಅದರಲ್ಲಿ 854 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಈ ಪೈಕಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 761.21 ಕೋಟಿ ರೂ.
ಇಲ್ಲಿಯವರೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಹಾತ್ಮ ಫುಲೆ ಉದ್ಯಾನ್, ರವೀಂದ್ರ ಕೌಶಿಕ್ ಇ-ಲೈಬ್ರರಿ, ಕಿಡ್ಸ್ ಝೋನ್, 11 ವಿಕಲಾಂಗ ಮಕ್ಕಳಿಗಾಗಿ ಫಿಸಿಯೋಥೆರಪಿ ಕೇಂದ್ರವನ್ನು ಸ್ಥಾಪಿಸಿದೆ. ಉದ್ಯಾನವನಗಳ ಅಭಿವೃದ್ಧಿ, ಕಣಬರ್ಗಿ ಕೆರೆ ಪುನರುಜ್ಜೀವನ, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, , ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ ಇತ್ಯಾದಿಗಳನ್ನು ಒಳಗೊಂಡಿದೆ. ಇದರೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೂ.211.06 ಕೋಟಿ ವೆಚ್ಚದಲ್ಲಿ ಇನ್ನೂ 6 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಐಎಎಸ್ ಅಧಿಕಾರಿ ದೀಪಾ ಚೋಳನ್ ಮತ್ತು ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಆಫ್ರಿನ್ ಬಾನು ಬಳ್ಳಾರಿ ಮತ್ತು ಇತರ ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ಸ್ಮಾರ್ಟ ಪ್ರಶಸ್ತಿ‌ ಖುಷಿ ತಂದಿದೆ..!


ಬೆಳಗಾವಿ ಸ್ಮಾರ್ಟ ಸಿಟಿಗೆ ಘನತೆವೆತ್ತ ರಾಷ್ಟ್ರಪತಿಗಳೇ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ.
ಈ ಮೂಲಕ ಸ್ಮಾರ್ಟ ಸಿಟಿ ಬಗ್ಗೆ ಆರೋಪ ಮಾಡುವ ಮಹನೀಯರಿಗೆ ರಾಷ್ಡ್ರಪತಿಗಳೇ ಉತ್ತರ ನೀಡುದಂತಾಗಿದೆ. ಹೀಗಾಗಿ ಅವರ ಆರೋಪಗಳಿಗೆ ನಾನು ಉತ್ತರ ನೀಡಲ್ಲ.
ಅಭಯ ಪಾಟೀಲ. ಶಾಸಕರು. ದಕ್ಷಿಣ ಕ್ಷೇತ್ರ. ಬೆಳಗಾವಿ.

ಯಾರು ಶ್ಯಾಣ್ಯಾರು?


ಇದೆಲ್ಲದರ ನಡುವೆ ಇದೇ ಸ್ಮಾರ್ಟ್ ಸಿಟಿ ಬಗ್ಗೆ ಅಲ್ಲ ಸಲ್ಕದ್ದನ್ನು ಮಾತನಾಡುವವರು ಈಗ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಂಡು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ.
ಸಧ್ಯ ಹೇಗಾಗಿದೆ ಎಂದರೆ, ಅದರಲ್ಲೂ ಬೆಳಗಾವಿ ದಕ್ಷಿಣ ವಿಷಯದಲ್ಲಿ ಸ್ಮಾರ್ಟ ಸಿಟಿ ಎಂದಾಕ್ಷಣ ಬೆರಳೆಣಿಕೆಯ ಜನ ಅದರ ಬಗ್ಗೆ ಅಲ್ಲ ಸಲ್ಲದ್ದನ್ನು ಮಾತನಾಡಲು ಶುರುವಿಟ್ಟುಕೊಳ್ಳುತ್ತಾರೆ. ಅವರ ಹೇಳಿಕೆಯನ್ನು ಗಮನಿಸಿದರೆ ಬೆಳಗಾವಿಯಲ್ಲಿ ಸ್ಮಾರ್ಟ ಸಿಟಿ ಕೆಲಸವೇ ಆಗಿಲ್ಲ ಎನ್ನುವ ಹಾಗೆ ಇರುತ್ತದೆ.
ಆದರೆ, ಘನವೆತ್ತ ರಾಷ್ಟ್ರಪತಿ‌ ಮುರ್ಮು ಅವರೇ ಬೆಳಗಾವಿ ಸ್ಮಾರ್ಟ ಸಿಟಿಗೆ ಪ್ರಶಸ್ತಿ ಘೋಷಣೆ ಮಾಡಿ ಪ್ರಶಸ್ತಿ ನೀಡಿದ್ದಾರೆ.‌ಅಂದರೆಇಲ್ಲಿ ಯಾರು ಉತ್ತಮರು ಎನ್ನುವುದು ಗೊತ್ತಾಗುತ್ತದೆ.

Leave a Reply

Your email address will not be published. Required fields are marked *

error: Content is protected !!