ಛೇ..ಇದು‌ IPS ಆಡುವ ಮಾತಾ?

ಅಂಗವಿಕಲಟೆರಿರಿಸ್ಟನಂತೆಕಂಡನಾ?

ಉದ್ಯಮಬಾಗ ಪೊಲೀಸರ ಅಮಾನವೀಯ ವರ್ತನೆ.

ಕ್ರೂರತನವನ್ನು  ಸಮರ್ಥಿಸಿದಪೊಲೀಸ್ಆಯುಕ್ತ.ರು.

ಪೊಲೀಸರ ಕೊರಳಪಟ್ಟಿಹಿಡಿದ ಎನ್ನಲಾದ ಸಿಸಿಟಿವಿಎಲ್ಲಿ?

ಆತಕುಡಿದಿದ್ದರೆ ವೈದ್ಯಕೀಯ ಪರೀಕ್ಷೆ ಏಕೆಮಾಡಿಸಲಿಲ್ಲ?

ಮಾರಣಾಂತಿಕ ಹಲ್ಲೆಮಾಡಲು ಅನುಮತಿಕೊಟ್ಟಿದ್ದು ಯಾರು?

ತಡರಾತ್ರಿವರೆಗೆ ತೆರೆದಿಟ್ಟಹೊಟೇಲ್ ಮೇಲೆ ಏಕಿಲ್ಲ ಕ್ರಮ?

ವಿಶೇಷ ವರದಿ

ಬೆಳಗಾವಿ

ಇಡೀ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡು  ಕಾನೂನು ಚೌಕಟ್ಟಿನಡಿ ಅದನ್ನು ನಡೆಸಿಕೊಂಡು ಹೋಗುವ ಹಿರಿಯ ಅಧಿಕಾರಿಗಳುಮನಸೋ ಇಚ್ಚೆ ಮಾತನಾಡಲು ಸಾಧ್ಯವೇ?

ಅಥವಾ ಅಧಿಕಾರ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಾತನಾಡಬಹುದಾ?

ಇದೆಂತಹ‌‌ ಹಿರಿಯ‌‌ IPS  ಮಾತು?

https://youtu.be/_7uCgH9nNSg

ರೀತಿ ಮಾತನಾಡಿದ್ದರೆ ಯಾರಿಗೆ ಕೆಟ್ಟ ಹೆಸರುಇಲ್ಲಿ ಜನಪರ ಆಡಳಿತಕೊಡಲು ಮುಂದಾಗಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರಇಂತಹಅಧಿಕಾರಿಗಳನ್ನು ಇನ್ನೂ ಸಹಿಸಿ ಕೊಂಡಿದೆಯಲ್ಲಾ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಅದು ಸಹಜ ಮತ್ತು ಸ್ವಾಭಾವಿಕ.

ಮನುಷ್ಯತ್ವ ಮರೆತಪೊಲೀಸ್..!


ಅಂದರೆ ಇಲ್ಲಿ ಅಧಿಕಾರಿಗಳದ್ದು ತೂಕದ ಮಾತಿರಬೇಕು. ಕಾನೂನು ಚೌಕಟ್ಟಿನಲ್ಲಿ ನೊಂದವರಿಗೆ ನ್ಯಾಯಕೊಡಿಸುವಂತಿರಬೇಕು. ಅದನ್ನು ಬಿಟ್ಟು ಅಧಿಕಾರಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಾತಾಡಿದರೆ ಯಾರಿಗೆ ಶೋಭೆ ಎನ್ನುವುದುಓದುಗರಿಗೆ ಬಿಟ್ಟ ವಿಚಾರ.

ಇಲ್ಲಿ ಇಷ್ಟೆಲ್ಲ ಮಾತು  ಒಬ್ಬ ಅಂಗವಿಕಲನ ಮೇಲೆ ಬೆಳಗಾವಿ ಉದ್ಯಮಬಾಗದ ಮೂವರು ಪೊಲೀಸರು ನಡೆದು ಕೊಂಡ ಅಮಾನುಷವಾಗಿನಡೆಸಿದ ಹಲ್ಲೆ.‌ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಆಡಿದ ಭಾರೀಮಾತುಗಳಿಂದ ಉಲ್ಭಣಿಸಿವೆ

 ಇಲ್ಲಿ ಘಟನೆನಡೆದ. ರೀತಿ, ಅದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಸಾಕ್ಷಿ ಯನ್ನು ಗಮನಿಸಿದರೆ ಪೊಲೀಸ್ ಆಯುಕ್ತರು ಪ್ರಾಥಮಿಕವಾಗಿ ಮೂವರು ಹಲ್ಲೆಕೋರ ಪೊಲೀಸರನ್ನು‌‌ ಮನೆಗಟ್ಟಿ ನಂತರ ಎಸಿಪಿಗೋ ಅಥವಾ ಡಿಸಿಪಿಗೋವಿಚಾರಣೆಗೆ ಆದೇಶ ಮಾಡಬೇಕಿತ್ತು.

ಆದರೆ ಇಲ್ಲಿ ಕನಿಷ್ಟ‌‌ ಮಾನವೀಯತೆಯನ್ನೇ ತೋರದ ಆಯುಕ್ತರು‌, ಘಟನೆ ಬಗ್ಗೆ ಪ್ರಶ್ನೆಮಾಡಿದ ಪತ್ರಕರ್ತರಿಗೆ ಒಂದು ರೀತಿ ಹಾರಿಕೆ ಉತ್ತರಕೊಡುವ ಕೆಲಸ ಮಾಡಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟ.

ಅಷ್ಟೇ ಅಲ್ಲ ಘಟನೆ ನಡೆದು 48 ಗಂಟೆ ಕಳೆದರೂ ಸಹ ಅದರ ಬಗ್ಗೆಶಿಸ್ತುಕ್ರಮದ ಮಾತಾಡಿಲ್ಲ

 ಬದಲಾಗಿ ಸಧ್ಯ ಅವರು ಮಾತನಾಡಿದ ರೀತಿಯನ್ನು ಗಮನಿಸಿದವರಿಗೆನಕ್ಲೀನ್ ಚಿಟ್ ಕೊಡುವ ಕೆಲಸ‌‌ ವಿಚಾರಣೆಗೆ ಮುನ್ನವೇ  ಮಾಡಿದ್ದಾರೆಬಹುಶಃ ಮುಂದಿನ‌‌ ದಿನದಲ್ಲಿ ಅಂಗವಿಕಲನ ಮೇಲೆಪೌರುಷ ತೋರಿದ‌‌ ಮೂವರು ಪೊಲೀಸರಿಗೆ ಅವಾರ್ಡಕೊಡುವ ಕೆಲಸ ಕೂಡ ಮಾಡಬಹುದು ಎನ್ನುವ ವ್ಯಂಗ್ಯನಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

: *ಏನಾಗಿತ್ತು ಆವತ್ತು?* 

ನಿರಂಜನಚೌಗಲಾ ಊಟದ ಪಾರ್ಸ್ಲ್ ತೆಗೆದುಕೊಂಡು ಹೋಗಲು ಉದ್ಯಮಬಾಗದಲ್ಲಿರುವ ವಿರಾಟ ಹೊಟೇಲ್ ಗೆ ಹೋಗಿದ್ದಾರೆ.‌ 

ಮೊದಲೇ ಅಂಗವಿಕಲ. ರಾತ್ರಿ ಧಾರಾಕಾರಮಳೆಬೇರೆ.ಹೀಗಾಗಿ ಊಟದ ಪಾರ್ಸಲ್ ತೆಗೆದುಕೊಂಡು ಹೊಟೇಲ್ ಮುಂಭಾಗನಿಂತುವಕೊಂಡಿದ್ದಾನೆ. ಆಗ ಅಲ್ಲಿಗೆಸಾಹಸಿ‌‌‌ ಮೂವರುಪೊಲೀಸರ ಕಣ್ಣಿಗೆ ಬಡಪಾಯಿ‌  ಅಂಗವಿಕಲಟೆರಿರಿಸ್ಟನಂತೆ ಕಂಡನೊ  ಏನೊ? ಇಲ್ಲೇಕೆನಿಂತಿದ್ದಿಯಾ ಎಂದುಕೇಳಿದ ಪ್ರಶ್ನೆಗೆ ಆತ ಉತ್ತರಿದುವಾಗಲೇಪೊಲೀಸರು ನಡು ರಸ್ತೆಯಲ್ಲಿ ದನಕ್ಕೆ‌‌ ಬಡಿದಂತೆ ಬಡಿದರು.‌ ರಸ್ತೆಯಲ್ಲಿ ಉರುಳುಡಾಸಿಒಬ್ಬ ಹೊಟ್ಟೆಗೆ ಸೇರಿದಂತೆ ದೇಹದ ಎಲ್ಲ ಭಾಗಕ್ಕೆ ಒದ್ದನು. ಇನ್ನೊಬ್ಬನು ಲಾಠಿಯಿಂದಬಡೆಯತೊಡಗಿದನು. ಸಂದರ್ಭದಲ್ಲಿಅಂಗವಿಕಲ ಚೀರಾಟ ಮಾಡಿದರೂ ಪೊಲೀಸರಿಗೆ ಕರುಣೆ ಎನ್ನುವುದು ಬರಲೇ ಇಲ್ಲ.


ಕೊನೆಗೆ  ಗಾಡಿ, ಮೊಬೈಲ್ ಕಸಿದುಕೊಂಡ ಆತನನ್ನು ಪೊಲೀಸರು ರೇಲ್ವೆ ಹಳಿ ಪಕ್ಕಕ್ಕೆ ಬಿಟ್ಟು ಹೋದರು.‌ಕೊನೆಗೆಅಲ್ಲಿಯೇ ತಡರಾತ್ರಿವರೆಗೆ   ಕಳೆದಆತನನ್ನು ಬೇರೆ ಪೊಲೀಸರು ಆರ್ ಪಿಡಿವರೆಗೆ ಬಿಟ್ಟರಂತೆ.

 ಕಥೆ* ಕಟ್ಟತೊಡಗಿದ ಖಾಕಿ ಪಡೆ..* 

ಇಷ್ಟೆಲ್ಲರಂಪಾಟನಡೆದಸುದ್ದಿಸೋಷಿಯಲ್ಮಿಡಿಯಾದಲ್ಲಿ‌‌‌ ಸಿಸಿಟಿವಿ ದೃಶ್ಯಾವಳಿಸಮೇತವೈರಲ್ಆಗತೊಡಗಿದವು.‌ಮಾಧ್ಯಮಗಳಲ್ಲಿಸಹ ಪೊಲೀಸ್ ಕ್ರೌರ್ಯದ ವರದಿಗಳುಬಿತ್ತರಗೊಂಡವು.

ಪ್ರಕರಣ‌‌ ಗಂಭೀರಸ್ವರೂಪ ಪಡೆದು ಕೊಳ್ಳುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸಾಹಸ ಶೂರಖಾಕಿಧಾರಿಗಳು ಅದಕ್ಕೊಂದುಕಥೆ ಕಟ್ಟತೊಡಗಿದರು

 *ಪೊಲೀಸರ ಕಥೆಏನಿದೆ?

:ನಿರಂಜನ ಚೌಗಲಾಮೂಲತಃ ಅಂಗವಿಕಲಅಲ್ಲ.‌ಅಪಘಾತ ಪ್ರಕರಣದಲ್ಲಿ  ಅಂಗವಿಕಲಆಗಿದ್ದಾನೆ.‌ಆತಆವತ್ತುಕುಡಿದಿದ್ದನು.‌ಪೊಲೀಸರನ್ನು ಕಂಡ ತಕ್ಷಣ‌‌‌ ಅವರ ಕೊರಳಪಟ್ಟಿಹಿಡಿದನು‌. ಕೆಟ್ಟದಾಗಿ ಬೈದನು

ಹೀಗಾಗಿಪೊಲೀಸರು ಒಂದೆರೆಡು ಏಟುಹೊಡೆದರು.‌ ಸಿಸಿಟಿವಿಯಲ್ಲಿ ಏನೂ ಕ್ಲೀಯರೆನಿಲ್ಲ.‌ಲಾಠಿ ಮುರಿದಿದ್ದುನೀವ್  ನೋಡಿದ್ದಿರಾ ಎನ್ನುವುದುಪೊಲೀಸ್ಆಯುಕ್ತರಪತ್ರಕರ್ತರಿಗೆ ಕೇಳಿದ ಬಹುದೊಡ್ಡ ಪ್ರಶ್ನೆ.

* ವಿಡಿಯೊ ಎಲ್ಲಿದೆ ತೋರಿಸಿ..* 

ಈಗಸಿಸಿಟಿವಿಯಲ್ಲಿಪೊಲೀಸರುಹಲ್ಲೆಮಾಡಿದದೃಶ್ಯ ದಾಖಲಾಗಿದೆ.‌ಆದರೆಅಂಗವಿಕಲನ ಪೊಲೀಸರ ಕೊರಳಪಟ್ಟಿಹಿಡಿದ ದೃಶ್ಯಎಲ್ಲಿದೆ? ಮೇಲಾಗಿ  ಆತನ ಕುಡಿದಿದ್ದರೆಆತನನ್ನುವೈದ್ಯಕೀಯಪರೀಕ್ಷೆಗೆ ಏಕೆ ಕರೆದುಕೊಂಡು ಹೋಗಲಿಲ್ಲ,?

ಇದೆಲ್ಲದರ ಜೊತೆಗೆ ರಾತ್ರಿ‌ 11.45 ರವರೆಗೆ ತೆರೆದಿಟ್ಟ ಹೊಟೇಲ್ ಮೇಲೆ ಏಕೆ ಕಾನೂನು ಕ್ರಮತೆಗೆದುಕೊಂಡಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸ್ ಸಿಟ್ಟು ಹೊಟೇಲ್ ಮೇಲಿತ್ತು ಎನ್ನುವುದು ಸ್ಪಷ್ಟ.‌ಕಾರಣ ಬೇಕಿದ್ದರೆ ಪೊಲೀಸರನ್ನೇ ಕೇಳಿ

Leave a Reply

Your email address will not be published. Required fields are marked *

error: Content is protected !!