ಇ ಬೆಳಗಾವಿನೊಂದವರ ಪರ. ಹೆದರಿಕೆ ಎನ್ನುವುದು ರಕ್ತದಲ್ಲಿಯೇ ಬಂದಿಲ್ಲ.. ಬೆದರಿಕೆಗಳಿಗೆ ಬಗ್ಗಲ್ಲ. ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ.
ಬೆಳಗಾವಿ..
ಕಳೆದ 2023 ಅಗಸ್ಟ್ 17 ಕ್ಕೆ ಅಂಬೆಗಾಲಿಡುತ್ತ ಆರಂಭಗೊಂಡ ಇ ಬೆಳಗಾವಿ ಡಾಟ್ ಕಾಮ್. (e belagavi.com) ಈಗ ಹೆಮ್ಮರವಾಗಿ ಬೆಳೆಯುತ್ತಿದೆ.
ನಾವು ಇಲ್ಲಿ ಇದ್ದ ಬಿದ್ದ ಎಲ್ಲ ಸುದ್ದಿಗಳನ್ನು ಕೊಡುವುದಿಲ್ಲ.ಕೆಲವೊಂದು ಸುದ್ದಿಯಾಗದ ಸುದ್ದಿಗಳು ಮಾತ್ರ ಇ ಬೆಳಗಾವಿ ಯಲ್ಲಿ ಬರುತ್ತವೆ.
ಇಂದಿನವರೆಗೆ ‘ಇ ಬೆಳಗಾವಿ’ ವೀಕ್ಷಕರ ಸಂಖ್ಯೆ ಬರೊಬ್ಬರಿ 40768….!
ಒಂದು ರೀತಿಯಲ್ಲಿ ನಮಗೇ ಅಚ್ಚರಿ. ಇದಕ್ಕೆ ಓದುಗರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೆ!.
ನಮ್ಮ ವೆಬ್ ಸೈಟ್ ಗೆ ಭೆಟ್ಟಿಕೊಡುವ Visitors ಸಂಖ್ಯೆ ಕೂಡ 27780.
ಇ ಬೆಳಗಾವಿ ಆರಂಭವಾದಾಗಿಂದ ನಾವು ಸುದ್ದಿ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಂಡಿಲ್ಲ. ಪಕ್ಷ, ಪಂಗಡ ನೋಡಿಲ್ಲ. ಜಾತಿ ಲೆಕ್ಕಕ್ಕೆ ಬಂದಿಲ್ಲ. ಯಾರಿಗೆ ಅನ್ಯಾಯ ಆಗಿದೆ ಅಂತ ಗೊತ್ತಾಗಿದೆಯೊ ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವರು ಸತ್ಯ ಸುದ್ದಿಯನ್ನು ಅರಗಿಸಿಕೊಳ್ಳದವರು ನಿಮ್ಮ ಇ ಬೆಳಗಾವಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಪಾಲಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಠರಾವ್ ಕೂಡ ಮಾಡಿದರು.
ಅಂದರೆ ಈ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಕೂಡ ನಡೆಯಿತು. ಬೇರೆ ಬೇರೆ ನಂಬರದಿಂದ ಬೆದರಿಕೆ ಕರೆಗಳು ನಿರಂತರವಾಗಿ ಬಂದವು. ಅವುಗಳನ್ನು ದಾಖಲೆಯಾಗಿ ಇಟ್ಟುಕೊಂಡಿದ್ದೇವೆ. ಅಂತಹ ಕರೆಗಳು ನಮಗೆ ಮಾಮೂಲು. ಅಂತಹುಗಳಿಗೆ ಹೆದರಿ ಯಾರ ಮುಂದೆಯೂ ತಲೆತಗ್ಗಿಸಿಲ್ಲ . ಅಷ್ಟೇ ಅಲ್ಲ ನೊಂದವರ ಪರ ಧ್ವನಿಯನ್ನು ಕಡಿಮೆ ಸಹ ಮಾಡಿಲ್ಲ. ಮಾಡುವುದೂ ಇಲ್ಲ.
ಇನ್ನು ಮುಂದೆಯೂ ನಿಮ್ಮ ಬೆಂಬಲ ನಮಗಿರಲಿ. ನಾವು ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ.