138 ಪಿಕೆಗಳ ಮುಷ್ಕರ ಶುರು..!

ಸಂಬಳ ಇಲ್ಕಂದ್ರೆ ಕೆಲಸಾನೂ ಇಲ್ಲ.

ಸ್ನಾರ್ಟ ಸಿಟಿ‌ ಇನ್ನು ಗಲೀಜು ಸಿಟಿ.

ಯಾರೊ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ.

ಈ ತಪ್ಪಿಗೆ ಶಿಕ್ಷೆ ಯಾರಿಗೆ?

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿದ್ದ 138 ಜನ ಫೌರ ಕಾರ್ಮಿಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ಅದರಲ್ಲಿ ಸುಮಾರು 50 ಜನ‌ ಚಾಲಕರು ಕೆಲಸವನ್ನು‌ ಬಂದ್ ಮಾಡಿದ್ದಾರೆ.

ಪಾಲಿಕೆಯ ಆಯುಕ್ತರ ಆದೇಶವಿಲ್ಲದೇ ನಿಯಮ‌ ಉಲ್ಲಂಘಿಸಿ 138 ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಹೋದ ಹಿನ್ನೆಲೆಯಲ್ಲಿ ಅದನ್ನು ರದ್ದು ಮಾಡಲಾಗಿತ್ತು.

ಈಗ ಇವರನ್ನು ತೆಗೆದುಕೊಂಡ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ. ಈಗಾಗಲೇ ಇವರ‌ ಸಂಬಳ ಕೊಡಲು ಆಗಲ್ಲ. ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!