ಬೆಳಗಾವಿ. ಗಡಿನಾಡ ಬೆಳಗಾವಿ ಮಹಾ ನಗರ ಪಾಲಿಕೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೂ ಕೂಡ ಸಕಾರಣವಿಲ್ಲದ ನೋಟೀಸ್ ಕೊಟ್ಟ ಸರ್ಕಾರ ಮಹಾನಗರ ಪಾಲಿಕೆ ಬಗ್ಗೆನೇ ಜನ ಸಂಶಯದಿಂದ ನೋಡುವ ಹಾಗೆ ಮಾಡಿದೆ. ಆಡಳಿತಾಧಿಕಾರಿಯ ಅವಧಿಯಲ್ಲಿ ಆದ ಲೋಪಕ್ಕೆ ಈಗ ಪಾಲಿಕೆಯ ಎಲ್ಲ 58 ಜನ ನಗರಸೇವಕರು ಅನಗತ್ಯವಾಗಿ ತಮ್ಮ ತೆಲೆ ಬಿಸಿವಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಮೂಲಗಳ ಪ್ರಕಾರ ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಪಾಲಿಕೆಗೆ ನೋಟೀಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇಲ್ಲಿ ಪಾಲಿಕೆಯ ಪರಿಷತ್ ಸಭೆಯ ಗೊತ್ತುವಳಿಯನ್ನು ತಿದ್ದುಪಡಿ ಮಾಡಿದ್ದು ಸೇರಿದಂತೆ ಅಧಿಕಾರಿಗಳ ಲೋಪವನ್ನು ದಾಖಲೆ ಸಮೇತ ಉತ್ತರ ನೀಡಲು ಆಡಳಿತ ಪಕ್ಷ ಸಜ್ಜಾಗಿದೆ. ಪಾಲಿಕೆಯ ಕಿಂಗ್ ಮೇಕರ್ ಅಭಯ ಪಾಟೀಲ ಕೂಡ ಅಧಿಕಾರಿಗಳ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಬಿಜೆಪಿ ನಗರಸೇವಕರ ಜೊತೆ ನಾಳಿನ ಸಭೆ ಬಗ್ಗೆ ಚರ್ಚ ನಡೆಸಲಿದ್ದಾರೆ.
ಇದೆಲ್ಲದರ ಮಧ್ಯೆ ಬೆಳಗಾವಿ ಪಾಲಿಕೆ ಆಯುಕ್ತರು, ಪರಿಷತ್ ಕಾರ್ಯದರ್ಶಿ ಮತ್ತು ಕಂದಾಯ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮೇಯರ್ ಅವರು ಪ್ತಾದೇಶಿಕ ಆಯುಕ್ತರಿಗೆ ಪತ್ರ ನೀಡಿದ್ದು ಈಗ ಚರ್ಚೆಗ ಕಾರಣವಾಗಿದೆ.
ಆದರೆ ಆ ಎಲ್ಲ ದಾಖಲೆಗಳಿಗೆ ಅಧಿಕಾರಿಗಳು ಯಾವ ರೀತಿಯ ಉತ್ತರ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು,
ಮೇಯರ್ ಪತ್ರದಲ್ಲಿ ಏನಿದೆ? ಕಳೆದ ದಿನಾಂಕ 17 ರಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಮೇಯರ ಶೋಭಾ ಸೋಮನ್ನಾಚೆ ಅವರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. ಅದರಲ್ಲಿ ಮಹಾನಗರ ಪಾಲಿಕೆಯ ಪರಿಷತ್ತು ಗೊತ್ತುವಳಿಯನ್ನು ಅನದಿಕೃತವಾಗಿ ತಿರುಚಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ, ಪೌರಾಡಳಿತ ಇಲಾಖೆ ನಿದೇರ್ಶಕರು ಮಹಾನಗರ ಪಾಲಿಕೆ ಆಯುಕ್ತರಿಗೆ, ಆಸ್ತಿ ಕರ ಪರಿಷ್ಕರಣೆಯಲ್ಲಿ ಕರ್ತವ್ಯ ಲೋಪ ವ್ಯಸಗಿರುವದಾಗಿ ಕಾರಣ ಕೇಳಿ ನೋಟಿಸು ನೀಡಿದ್ದರು.
ಮೇಯರ್ ಬರೆದ ಪತ್ರ..
——-
ಈ ನೋಟಿಸಿಗೆ ಆಯುಕ್ತರು, ಮಹಾನಗರ ಪಾಲಿಕೆಯ ಪರಿಷತ್ತು ಗೊತ್ತುವಳಿ ಸಂಖ್ಯೆ.: 36 ಸೆ. 16 ರ ಪರಿಷತ್ ಸಭೆಯ ಪ್ರಕಾರ ಆಸ್ತಿ ಕರವನ್ನು 2024-25 ನೇ ಸಾಲಿನಿಂದ ಪರಿಷ್ಕರಿಸಿ ಗೊತ್ತುವಳಿ ಅಂಗಿಕರಿಸಲಾಗಿದೆ ಎಂದು ಉತ್ತರಿಸಿದ್ದರು.
ಆದರೆ ಪಾಲಿಕೆಯ ಪರಿಷತ್ ಗೊತ್ತುವಳಿ ಸಂಖ್ಯೆ: 36 ರ ಪ್ರಕಾರ ಆಸ್ತಿ. ಕರವನ್ನು 2023-24 ನೇ ಸಾಲಿನಿಂದ ಪರಿಷ್ಕರಿಸಿ ಗೊತ್ತುವಳಿ ಆಂಗಿಕರಿಸಲಾಗಿತ್ತು. ಈ ಗೊತ್ತುವಳಿಯ ಪ್ರತಿಯನ್ನು ಅಕ್ಟೋಬರ 7 ರ ಸಭೆಯ ವಿಷಯ ಪಟ್ಟಿಯೊಂದಿಗೆ 3 ರಂದು ಎಲ್ಲ ಸರ್ವ ಸದಸ್ಯರಿಗೂ ಕಳಿಸಿದ್ದರು,
ಆದರೆ ಈ ನೋಟಿಸು ಸ್ವೀಕೃತವಾದ ನಂತರ ಪಾಲಿಕೆಯ ಆಯುಕ್ತರು, ಉಪ ಆಯುಕ್ತರು (ಕಂದಾಯ) ಹಾಗೂ ಪರಿಷತ್ತ ಕಾರ್ಯದರ್ಧಿಗಳು ಎಲ್ಲರೂ ಸೇರಿ ಕನ್ನಡ ಬಾರದ ಮಹಾಪೌರರಿಗೆ ತಪ್ಪು ಮಾಹಿತಿ ನೀಡಿದರು, ಅಷ್ಟೇ ಅಲ್ಲ ಪಾಲಿಕೆಯ ಗೊತ್ತುವಳಿ (ಸಂಖ್ಯೆ. 36 ದಿನಾಂಕ: 16.09.2023)ಯನ್ನು 2023-24ನೇ ಸಾಲಿಗೆ ಅನ್ವಯವಾಗುವಂತೆ ದರ ಪರಿಷ್ಕರಿಸಿ ಆಂಗಿಕರಿಸಿದ್ದನ್ನು ತಿರುಚಿ 2024-25ನೇ ಸಾಲಿಗೆ ದರ ಪರಿಷ್ಕರಿಸಲಾಗುವುದಾಗಿ ದಾಖಲೆಗಳನ್ನು ಸಿದ್ಧಪಡಿಸಿ ಮೇಯರ್ ಕಡೆಯಿಂದ ಪತ್ರಕ್ಕೆ ಸಹಿ ಮಾಡಿಸಿಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರಕಾರದ ಪತ್ರಾಂಕಿತ ಅಧಿಕಾರಿಗಳಾದ ಈ ಮೂರು ಜನರು ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸ ಅಪ್ರಾಮಾಣಿಕತೆಯಿಂದ ದಾಖಲೆಗಳನ್ನು ಸುಳ್ಳು ಸೃಷ್ಟಿಸಿ ಗಂಭೀರವಾದ ಕರ್ತವ್ಯ ಲೋಪವನ್ನು ಎಸಗಿರುತ್ತಾರೆಂದು ಮೇಯರ್ ಆರೋಪಿಸಿದ್ದಾರೆ,