ಬೆಳಗಾವಿ. ಪಾಲಿಕೆ ರಾಜಕಾರಣ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಮೇಯರ್ ಶೋಭಾ ಸೋಮನ್ನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಹೀಗಾಗಿ ಪಾಲಿಕೆ ವಿವಾದದ ಚೆಂಡು ಈಗ ರಾಜ್ಯಪಾಲರ ಅಂಗಳಕ್ಕೆ ಹೋದಂತಾಗಿದೆ.

ಮೇಯರ್ ಪತ್ರದಲ್ಲಿ ಏನಿದೆ?
ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಈಗ ಚರ್ಚಯ ವಸ್ತುವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕರ್ತವ್ಯ ಲೋಪಗಳ ಬಗ್ಗೆ ಸದಸ್ಯರುಗಳು ಕಳೆದ ದಿ. 21 ರಂದು ಸಭೆಯಲ್ಲಿ ಕರ್ತವ್ಯಲೋಪವೆಸಗಿದವರ ವಿರುದ್ಧ ನಿಯಮಾನುಸಾರ ಕ್ರಮಕ್ಕೆ ಗೊತ್ತುವಳಿಯನ್ನು ಅಂಗೀಕರಿಸಿದ್ದರು,
ಈ ಬಗ್ಗ್ತೆ ರಾಜ್ಯಪಾಲರು, ಯು.ಪಿ.ಎಸ್.ಸಿ, ಡಿಪಿಎಆರ್, ಡಿಓಪಿಟಿ) ಮುಂತಾದ ಇಲಾಖೆಗಳಿಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಿ ಗೊತ್ತುವಳಿಯನ್ನು ಅಂಗೀಕರಿಸಲಾಗಿತ್ತು,

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಯವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೇಲ್ಕಾಣಿಸಿದ ಇಲಾಖೆಗಳಿಗೆ ಹಾಗೂ ಘನತೆವೆತ್ತ ತಮಗೆ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾದ್ದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜನೆ ಮಾಡಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು,
ಸಚಿವರ ಹಸ್ತಕ್ಷೇಪ, ಒತ್ತಡ ಮತ್ತು ಕಿರುಕುಳದಿಂದ ಮಹಿಳೆಯಾದ ನನಗೆ ಸುಗಮವಾಗಿ, ಸ್ವತಂತ್ರವಾಗಿ, ನಿಭರ್ೀತಿಯಿಂದ ನಿಷ್ಪಕ್ಷಪಾತವಾಗಿ ಪಾಲಿಕೆಯಲ್ಲಿ ಆಡಳಿತವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೇಯರ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ, ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜನೆ ಮಾಡುವ ಕುರಿತು ಸಚಿವರ ಹೇಳಿಕೆಯಿಂದ ಬೆಳಗಾವಿಯ ಸುಮಾರು ಆರು ಲಕ್ಷ ಜನರು ಭಯಭೀತರಾಗಿದ್ದು, ಪಾಲಿಕೆಯ 58 ನಗರ ಸೇವಕರನ್ನು ಅತಂತ್ರ ಮಾಡುವ ದುರುದ್ದೇಶವನ್ನು ಹೊಂದಿರುತ್ತಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ..