Headlines

ರಾಜೀ ರಾಜಕೀಯ..! ಇದು ಕನ್ನಡಿಗರ ದೌರ್ಭಾಗ್ಯ..!

ಆಗ ಎಂಇಎಸ್ ನವರು ಹೊಂದಾಣಿಕೆಗೆ ಬರ್ತಿರಲಿಲ್ಲ. ಬರೀ ಮುಂಬಯಿ ಚಲೋ..! ಅದರೆ ಈಗ ಬರೀ‌ Adjustment ..! ಕಿರಣ ಠಾಕೂರ್ – ಅಭಯ ಪಾಟೀಲ ನಡುವೆ ಜಿದ್ದಾಜಿದ್ದಿ ಇದ್ದರೂ ಒಂದು ದಿನ ಹೊಂದಾಣಿಕೆ ಮಾತು ಬರಲಿಲ್ಲ.


ಬೆಳಗಾವಿ.
ಗಡಿನಾಡ ಕನ್ನಡ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಇಡೀ ಕನ್ನಡ ನಾಡು ತುದಿಗಾಲ ಮೇಲೆ ನಿಂತಿದೆ, ಆದರೆ ಮತ್ತೊಂದು ಕಡೆಗೆ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ಗೆ ಜೀವ ತುಂಬುತ್ತಿರುವ ಕೀಳು ಮಟ್ಟದ ರಾಜಕೀಯ ನಡೆದಿದೆ,
ಇಲ್ಲಿ ಅಂತಹ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಬಿಡಿಸಿ ಹೇಳಬೇಕಾದ ಅವಶ್ಯಕತೆಯಿಲ್ಲ. ಎಲ್ಲವೂ ಬೆಳಗಾವಿಗರ ಕಣ್ಮುಂದೆಯೇ ಇದೆ,.!


ರಾಜಕೀಯ ಹಾಳಾಗಿ ಹೋಗಲಿ, ಕೊನೆ ಪಕ್ಷ ಕನ್ನಡ, ನಾಡು, ನುಡಿ ವಿಷಯ ಬಂದಾಗಲಾದರೂ ನಾಡದ್ರೋಹಿಗಳನ್ನು ಹೆಡಮುರಿ ಕಟ್ಟಿ ಎಂದು ಪೊಲೀಸರಿಗೆ ಹೇಳುವ ಎದೆಗಾರಿಕೆ ಆಡಳಿತ ನಡೆಸುವ ಸರ್ಕಾರಕ್ಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅಂದರೆ ಎಲ್ಕರದ್ದೂ ಓಲೈಕೆ ರಾಜಕಾರಣ
ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೇ ಸೋತು ಸುಣ್ಣವಾಗಿ ಮನೆದಾರಿ ಹಿಡಿದಿದ್ದ ಎಂಇಎಸ್ನ ಕೆಲವರು ಈಗಲೂ ಕಿಡಿಗೇಡಿತನ ಮಾಡುತ್ತಾರೆಂದರೆ ಅವರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ ಎಂದೇ ಅರ್ಥ.

ಇಲ್ಲದಿದ್ದರೆ ಪುಕ್ಕಲ ಎಂಇಎಸ್ನವರಿಗೆ ಪೊಲೀಸರನ್ನು ವಿರೋಧ ಕಟ್ಟಿಕೊಂಡು ಕರಾಳ ದಿನ ಮೆರವಣಿಗೆ ನಡೆಸುವ ಭಂಡ ಧೈರ್ಯ ಬರುತ್ತಿರಲಿಲ್ಲ.


ನಿಮಗೆ ನೆನಪಿರಬಹುದು. ವಿಜಯ ಮೋರೆ ಮೇಯರ್ ಆಗಿದ್ದ ಸಂದರ್ಭದಲ್ಲಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ಗೊತ್ತುವಳಿಯನ್ನು ಸ್ವೀಕರಿಸಲಾಗಿತ್ತು,
ಅಷ್ಟೇ ಅಲ್ಲ ಇದೇ ವಿಜಯ ಮೋರೆ ತಾಕತ್ತಿದ್ದರೆ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲಿ ಎಂದು ಮಾಧ್ಯಮದ ಮುಂದೆ ಸವಾಲು ಹಾಕಿದ್ದರು, ನಂತರ ಕುಡಿಯುವ ನೀರಿನ ಯೋಜನೆಗೆ ಹಣ ಕೊಡಿ ಎಂದು ಬೆಂಗಳೂರಿಗ್ ನಿಯೋಗ ಹೋಗಿದ್ದ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ವಿಜಯ ಮೋರೆ ಸೇರಿದಂತೆ ಇನ್ನಿತರರ ಮುಖಕ್ಕೆ ಮಸಿ ಬಳೆದಿದ್ದರು,


ಆದರೆ ಆ ಸಂದರ್ಭದಲ್ಲಿ ಎಂಇಎಸ್ ಪರವಾಗಿ ಯಾವುದೇ ರಾಜಕೀಯ ಪಕ್ಷದವರು ನಿಲ್ಲಲಿಲ್ಲ. ಹೀಗಾಗಿ ಆಗಿನ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ಸ ಸರ್ಕಾರ ಆಗಿನ ಪಾಲಿಕೆಯನ್ನು ಬೇರೆ ಬೇರೆ ಕಾರಣ ನೀಡಿ ಸೂಪರ್ ಸೀಡ್ ಮಾಡಿತ್ತು, ಅದು ಈಗ ಮುಗಿದ ಅಧ್ಯಾಯ
..

ಇಲ್ಲಿ ಮತ್ತೊಂದು ಘಟನೆಯನ್ನು ಸ್ನರಿಸಿ ಕೊ:ಳ್ಳಲೇಬೇಕು, ವಿಜಯ ಮೋರೆ ಮುಖಕ್ಕೆ ಮಸಿ ಬಳಸಿಕೊಂಡ ನಂತರ ಎಂಇಎಸ್ನವರು ಅದೇ ಪೊಟೊಗಳನ್ನು ಇಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಬೆಳಗಾವಿ ಬಂದ್ ಗೆ ಕರೆ ನೀಡಿದ್ದರು, ಬೋಗಾರವೇಸ್ ವೃತ್ತದ ಮಧ್ಯವಿರುವ ಗಡಿಯಾರದ ಮೇಲೆ ಕನ್ನಡ ಬಾವುಟ ಹಾರಾಡುತ್ತಿತ್ತು, ಅದನ್ನು ಕಿಡಿಗೇಡಿಗಳು ಪೊಲೀಸರ ಮುಂದೆಯೇ ಕಿತ್ತು ಬಿಸಾಕಿದರು,ನಂತರ ಬೋಗಾರವೇಸ್ದಿಂದ ಕಾಕತಿವೇಸ್ ಮೂಲಕ ಚನ್ನಮ್ಮ ವೃತ್ತದವರೆಗೂ ಕನ್ನಡ ಫಲಕಗಳನ್ನು ಧ್ವಂಸ ಮಾಡುತ್ತಲೇ ಬಂದರು. ಅಲ್ಲಿಯವರೆಗೂ ಪೊಲೀಸರು ಲಾಠಿಗೆ ಕೆಲಸ ಕೊಟ್ಟಿರಲಿಲ್ಲ. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಆಗಿನ ಶಾಸಕರ ಫಲಕವಿತ್ತು, ಅದನ್ನು ಹರಿದ ಪುಂಡರು ಚನ್ನಮ್ಮವ ಮೂರ್ತಿಗೆ ಧಕ್ಕೆ ತರಲು ಯತ್ನ ನಡೆಸಿದ್ದರು,
ಅಷ್ಟೇ ಸಾಕಿತ್ತು, ಆಗ ಎಸ್ಪಿಯಾಗಿದ್ದ ಹೇಮಂತ ನಿಂಬಾಳ್ಕರ ನೇತೃತ್ವದಲ್ಲಿ ಖಾಕಿ ಟೀಮ್ ಪುಂಡರನ್ನು ಅಟ್ಟಾಡಿಸಿಕೊಂಡು ಬಡಿದಿದ್ದರೆ ಇಡೀ ಚನ್ನಮ್ಮ ವೃತ್ತದ ತುಂಬ ಚಪ್ಪಲಗಳ ರಾಶಿ ಬಿದ್ದಿತ್ತು,

ನಂತರದ ದಿನಗಳಲ್ಲಿ ಪೊಲೀಸರನ್ನು ಕಂಡರೆ ಎಂಇಎಸ್ನವರು ಸಲಾಮ್ ಸಾಬ್ ಎಂದು ದೂರ ನಿಲ್ಲುತ್ತಿದ್ದರು.

ಆಗ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ.
ಬೆಳಗಾವಿಯಲ್ಲಿ ಆಗಿನ ಮತ್ತು ಈಗಿನ ಎಂಇಎಸ್ ಹೋರಾಟಕ್ಕೆ ಅಜಗಜಾಂತರ ವ್ಯತ್ಯಾಸವಿದ್ದುದು ಸ್ಪಷ್ಟವಾಗಿ ಗೊತ್ತಾಗುತ್ತದೆ,.
ಕಿರಣ ಠಾಕೂರ, ದೀಪಕ ದಳವಿ, ಮಾಲೋಜಿರಾವ್ ಅಷ್ಟೇಕರ, ಮುತಗೇಕರ ಮುಂತಾದವರು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಹೋರಾಟ ಮಾಡುತ್ತ ಬಂದವರು, ಅವರದ್ದು ಏನೇ ಇದ್ದರೂ ಹತ್ತಾರು ಬಾರಿ ಮಹಾರಾಷ್ಟ್ರಕ್ಕೆ ಹೋಗಿ ಮನವಿ ಪತ್ರ ಅರ್ಪಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಸ್ಥಳೀತವಾಗಿ ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳುತ್ತಿರಲಿಲ್ಲ.
ಇಲ್ಲಿ ಉಲ್ಲೇಖ ಮಾಡಲೇಬೇಕಾದ ಸಂಗತಿ ಎಂದರೆ, ಆಗಲೂ ಕೂಡ ಕಿರಣ ಠಾಕೂರ ಜೊತೆ ಅಭಯ ಪಾಟೀಲರ ಮುನಿಸಿತ್ತು, ವಿಷಯಕ್ಕೆ ಸಂಬಂಧಿಸಿದಂತೆ ಅಭಯ ಪಾಟೀಲರು ಠಾಕೂರ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ್ದರು, ಆದರೂ ಕೂಡ ಇವರಿಬ್ಬರು ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಕಟ್ಟರ್ ಎಂಇಎಸ್ನವರಿದ್ದರು,
ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿರೆ ಎಲ್ಲಕ್ಕೂ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ,
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಂಇಎಸ್ನವರು ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿತು, ಆದರೆ ಪರಿಣಾಮ ಏನಾಯಿತು ಅಂದರೆ ಮರಾಠಿಗರೇ ಎಂಇಎಸ್ ಕೈ ಹಿಡಿಯಲಿಲ್ಲ. ಹೀಗಾಗಿ ಬಿಜೆಪಿ ಜಯಭೇರಿ ಬಾರಿಸಿತು,

ನಂತರ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎನ್ನುವ ಸಂಗತಿ ಗುಟ್ಟಾಗಿ ಉಳಿದಿರಲಿಲ್ಲ. ಎಂಇಎಸ್ ಎಂದು ಹೇಳಿಕೊಂಡವರು ಕಾಂಗ್ರೆಸ್ನ ಒಂದು ಟೀಮ್ ಎನ್ನುವಂತಾದರು, ಹೀಗಾಗಿ ಆಗಲೂ ಎಂಇಎಸ್ ಕೈ ಯಾರೂ ಹಿಡಿಯಲೇ ಇಲ್ಲ.

ಬೇಸತ್ತ ಮರಾಠಿಗರು..
ಮೂಲಗಳ ಪ್ರಕಾರ ಎಂಇಎಸ್ನವರು ಕಾಂಗ್ರೆಸ್ನ್ನು ಓಲೈಸಿದರೆ ಕರಾಳ ದಿನಕ್ಕೆ ಅನುಮತಿ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು, ಒಂದು ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ಕೊಡದಿದ್ದರೂ ಕರಾಳ ದಿನ ಆಚರಿಸಿದರೆ ಕೇಸ್ ಮಾಡಲ್ಲ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ, ಅದು ನಾಳೆ ಸ್ಪಷ್ಟವಾಗಿ ಗೊತ್ತಾಗುತ್ತದೆ,

Leave a Reply

Your email address will not be published. Required fields are marked *

error: Content is protected !!