ಬೆಳಗಾವಿ .
ಇಡೀ ನಾಗರಿಕ ಸಮಾಜವೇ ತಲೆತಗ್ಗುಸುವಂತಹ ಘಟನೆ ಬೆಳಗಾವಿ ತಾಲುಕಿನ ಹೊಸ ವಂಟಮೂರಿಯಲ್ಲಿ ನಡೆದ ವರದಿಯಾಗಿದೆ.
ಪ್ತೀತಿಸಿದ ಯುವತಿ ಯುವಕನ ಜೊತೆ ಓಡಿ ಹೋಗಿದ್ದು ಈ ಘಟನೆಗೆ ಕಾರಣ.

ಇತ್ತೀಚೆಗಷ್ಟೇ ಗೋಕಾಕ ತಾಲುಕಿನ ಘಟಪ್ರಭಾದಲ್ಲೂ ದಲಿತ ಮಹಿಳೆಯನ್ಬು ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಈ ಬಗ್ಗೆ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಘಟಪ್ರಭಾ ಪೊಲೀಸರು ಒಬ್ಬರನ್ನು ಬಂಧಿಸಿ ಉಳಿದವರಿಗೆ ಸ್ಟೇಷನ್ ಬೇಲ್ ಮೇಲೆ ಬಿಟ್ಟಿದ್ದರು. ಆದರೆ ಕೋರ್ಟ ಅವರಿಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿತ್ತು.

ಆ ಘಟನೆ ಮರೆಮಾಚುವ ಮುನ್ನವೇ ಬೆಳಗಾವಿ ಹೊರವಲಯದ ಹೊಸ ವಂಟಮೂರಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.
ಇಲ್ಲಿ ಯು ವತಿಯ ಮನೆಯವರು ನಿಶ್ಚಿತಾರ್ಥ ಮಾಡಲು ಸಿದ್ಧತೆ ಮಾಡಿಕೊಳ್ಳುವ ಹೊತ್ತಿನಲ್ಲಿ ಪ್ರೀತಿಸಿದ ಯುವಕನೊಂದಿಗೆ ಯುವತಿ ಪರಾರಿಯಾದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಮನೆಯವರು 42ವರ್ಷದ ಯುವಕನ ತಾಯಿಯನ್ನು ತಡರಾತ್ರಿ ಕಂಬಕ್ಕೆ ಕಟ್ಟಿಹಾಕಿ ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯತೆ ಮರೆದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಒಂದೇ ಗ್ರಾಮದವರಾದ ಯುವಕ, ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಭಾನುವಾರ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಇಂದು ಯುವತಿತ ನಿಶ್ಚಿತಾರ್ಥ, ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.
ಏಕಾಏಕಿ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆ ಮೇಲೆ ಭಾನುವಾರ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ದ್ವಂಸ ಗೊಳಿಸಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ
ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ 7 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ., . ಗ್ರಾಮದಲ್ಲಿ 2 ಕೆ ಎಸ್ ಆರ್ ಪಿ ಪೊಲೀಸ್ ಬಂದೋಬಸ್ತ ನಿಯೋಜನೆ ಮಾಡಲಾಗಿದೆ.