ಬೆಳಗಾವಿ. ಬೆಳಗಾವಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಶಾಸಕ ಅನಿಲ ಬೆನಕೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅಂದರೆ ಅವರಿಗೆ ಮುಂಬರುವ ಲೋಕಸಭೆ ಕ್ಷೇತ್ರದಿಂದ ಬಿಹೆಪಿ ಟಿಜೆಟ್ ಪಕ್ಕಾ ಎನ್ನುವ ಮಾತಿತ್ತು.

ಮರಾಠಾ ಭಾಷಿಕ ರನ್ನು ಓಲೈಸಿಕೊಳ್ಖಲು ಬೆನಕೆಯವರಿಗೆ ಟಿಕೆಟ್ ಕೊಡಬಹುದು ಎನ್ಬುವ ಮಾತುಗಳು ಕೇಳಿ ಬಂದಿದ್ದವು.

ಆದರೆ ಈಗ ಅವರನ್ಬು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ಟಿಕೆಟ್ ಲೆಕ್ಕಾಚಾರ ಬೇರೆನೇ ಇದೆ ಎನ್ಬಲಾಗುತ್ತದೆ.
ಇಲ್ಲಿ ಬೆಳಗಾವಿ ಕ್ಷೇತ್ರದ ಮೇಲೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಕಣ್ಣಿಟ್ಟಿದ್ದಾರೆ.