Headlines

ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನ

ಎರಡು ದಿನಗಳ ಕಾಲ ಬೆಂಗಳೂರಲ್ಲಿ ವಿಪ್ರ ಮಹಿಳಾ ರಾಜ್ಯ ಸಮ್ಮೇಳನ
ಐದು ಸಾವಿರ ಮಂದಿ ಗೊಳ್ಳುವ ನಿರೀಕ್ಷೆ: ಶಂಕರಪುರಂ ನ ಸಜ್ಜು

ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನಕ್ಕೆ ಇದೀಗ ಬೆಂಗಳೂರಿನ ಶಂಕರ ಪುರಂ ಬಡಾವಣೆ ಸಜ್ಜುಗೊಂಡಿದೆ.
ರಾಜಧಾನಿಯ ಸಾಂಸ್ಕೃತಿಕ ಬೇರು ಎಂದೇ ಹೆಸರಾದ ಬಸವನಗುಡಿಗೆ ಅಂಟಿಕೊಂಡೇ ಇರುವ ಈ ಬಡಾವಣೆಯ ಶಂಕರ ಮಠದ ಆವರಣದ ಜಗದ್ಗುರು ಶ್ರೀ ಭಾರತೀತೀರ್ಥ ಸಭಾ ಭವನದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸುವುದರೊಂದಿಗೆ ಎರಡು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.


ಬ್ರಾಹ್ಮಣ ಮಹಾಸಭಾ ಸ್ಥಾಪನೆಗೊಂಡು 50 ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಪ್ರಮುಖ ಸಂಗತಿಯಾದರೆ 17 ವರ್ಷಗಳ ಸುದೀರ್ಘ ಅವಧಿಯ ನಂತರ ಹೊಸ ಆಲೋಚನೆಗಳೊಂದಿಗೆ ಸಜ್ಜುಗೊಂಡಿರುವುದು ಇನ್ನೊಂದು ವಿಶೇಷ. ಈ ಹಿಂದೆ 2007ರಲ್ಲಿ ಅಂದು ಮಹಾಸಭಾ ಅಧ್ಯಕ್ಷರಾಗಿದ್ದ ಡಾ. ಎಂ.ಆರ್.ವಿ ಪ್ರಸಾದ್ ಅವರ ನಾಯಕತ್ವದಲ್ಲಿ ಮಹಿಳಾ ಸಮ್ಮೇಳನ ಜರುಗಿದ್ದು ಇನ್ನೊಂದು ವಿಶೇಷ. ಈ ಬಾರಿಯ ಸಮ್ಮೇಳನದ ಅಧ್ಯಕ್ಷೆಯಾಗಿಸಮಾಜ ಸೇವಕಿ ಶ್ರೀಮತಿ ಅಲ್ಕಾ ಸುಧೀರ ಇನಾಮದಾರ ಅವರು ಆಯ್ಕೆಯಾಗಿದ್ದಾರೆ.


ನಾಡಿನ ಹೆಸರಾಂತ ವಕೀಲ ಅಶೋಕ್ ಹಾರನಹಳ್ಳಿಯವರು ಮಹಾಸಭೆ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮತ್ತೊಂದು ಪ್ರಮುಖ ಸಮಾವೇಶ ಇದಾಗಿದ್ದು ಮಹತ್ವ ಪೂರ್ಣ ಎನಿಸಿದೆ ಕಳೆದ 2022 ರಲ್ಲಿ ಮಹಾಸಭಾ ವತಿಯಿಂದ ಸ್ವಾತಂತ್ರ್ಯ ಚಳವಳಿಯ ನೆನಪಿಗಾಗಿ ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ಎಂದೇ ಹೆಸರಾದ ವಿಧುರಾಶ್ವತ್ಥಕ್ಕೆ ಗೌರಿ ಬಿದನೂರಿನಿಂದ ನಡೆದ ಬೃಹತ್ ಪಾದಯಾತ್ರೆಯ ನಂತರ ನಡೆಯುತ್ತಿರುವ ಕಾರ್ಯಕ್ರಮ ಇದಾಗಿರುವುದರಿಂದ ಇಡೀ ರಾಜ್ಯದ ಗಮನ ಸೆಳೆದಿದೆ.


ವಿಪ್ರ ಮಹಿಳಾ ಸಮ್ಮೇಳನದ ಯಶಸ್ಸಿಗಾಗಿ ಖುದ್ದು ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರೇ ಆಸ್ಥೆ ವಹಿಸಿ ಅಗತ್ಯ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಮೂಲಕ ನೇರ ಮೇಲ್ವಿಚಾರಣೆ ನಡೆಸುತ್ತಿರುವುದು ಸಿದ್ಧತೆಗಳ ಗಂಭೀರತೆಯನ್ನು ಹೆಚ್ಚಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿಪ್ರ ಮಹಿಳೆಯರು ಬೆಂಗಳೂರಿನ ಸಮ್ಮೆಳನಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಗತ್ಯ ವ್ಯವಸ್ಥೆಗಳಲ್ಲಿ ಕೊಂಚವೂ ಲೋಪ ಆಗದಂತೆ ಎಚ್ಚರ ವಹಿಸಿದ್ದು ವಸತಿ, ಊಟೋಪಚಾರ, ಸಮ್ಮೇಳನದ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಒಟ್ಟು ನಾಲ್ಕು ವಿಚಾರ ಗೋಷ್ಠಿಗಳು ನಡೆಯಲಿವೆ.


ಸಮ್ಮೇಳನ ಹಾಗು ವಿಚಾರಗೋಷ್ಠಿಗಳು ನಡೆಯುವ ಸಭಾಂಗಣಕ್ಕೆ ಉಭಯ ಭಾರತೀ ವೇದಿಕೆ ಎಂದು ಹೆಸರಿಡಲಾಗಿದೆ. ಸಮ್ಮೇಳನಕ್ಕೆ ಪೂರಕವಾಗಿ ಭಾನುವಾರ ಬೆಳಿಗ್ಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಿಂದ ಸಂಕರ ಮಠದ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಉದ್ಘಾಟಿಸಲಿದ್ದಾರೆ.
ಸಮ್ಮೇಳನ ಹೆಚ್ಚು ಆಕರ್ಷಕವಾಗುವಂತೆ ಮಾಡಲು ರಾಜ್ಯದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಕಲಾಪ್ರದರ್ಶನ ನಡೆಯಲಿದ್ದು ರಾಜ್ಯ ಮಟ್ಟದ ಭಜನಾಸ್ಪರ್ಧೆ ನಡೆಯಲಿದೆ.

ಸಮಾವೇಶದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದ್ದು ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಹು ಮುಖ್ಯವಾಗಿ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಉತ್ತೇಜನದಾಯಕ ಪ್ರತಿಕ್ರಿಯೆ ಬಂದಿದ್ದು ಈಗಾಗಲೇ ನೋಂದಾವಣೆ ಗೊಂಡಿದೆ.
ಭಾನುವಾರ ಸಂಜೆ ಸಮ್ಮೇಳನ ಸಮಾರೋಪ ಸಮಾರಂಭ ನಡೆಯಲಿದ್ದು ಶೃಂಗೇರಿ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಪುರಸ್ಕೃತ ಡಾ.ವಿ .ಆರ್. ಗೌರಿ ಶಂಕರ್ , ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ. ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ , ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಶಾಸಕ ಆರ್.ವಿ ದೇಶಪಾಂಡೆ ಶಾಸಕ ಟಿ.ಎಸ್. ಶ್ರೀವತ್ಸ , ವಿಧಾನ ಪರಿಷ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5.30 ರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಶ್ರೀಮತಿ ಜ್ಯೋತಿ ಚೇತನ ತಂಡದ 25 ಮಹಿಳೆಯರಿಂದ ಏಕ ಕಾಲಕ್ಕೆ ಸಾಮೂಹಿಕ ವೀಣಾವಾದನ ನಡೆಯಲಿರುವುದು ಕಾರಯ್ಕರಮದ ವಿಶೇಷಗಳಲ್ಲಿ ಒಂದು.
ಬಾಕ್ಸ್: ಫೋಟೋ ನಿಮ್ಮ ಬಳಿ ಇರಬಹುದು. ನಿನ್ನೆ ಮೋಹನ್ ಕೊಟ್ಟಿದ್ದಾರೆ
ಡಾ. ಶ್ರೀಮತಿ ಶುಭ ಮಂಗಳ . ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಈಗ ಕೇಳಿ ಬರುತ್ತಿರುವ ದೊಡ್ಡ ಹೆಸರು. ಬೆಂಗಳೂರಿನಲ್ಲಿ ಸೈಬರ್ ಭದ್ರತಾ ಸಂಸ್ಥೆ ನಡೆಸುತ್ತಿರುವ ಇವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ. ಮಹಾಸಭೆಯ ಹಲವು ಸಮಾಜೋಪಯೋಗಿ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳಲ್ಲಿ ರಾಜ್ಯ ಪೊಲೀಸರಿಗೆ ನೆರವಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ವಿಪ್ರ ಮಹಿಳೆಯರು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರು ಅಡುಗೆ ಮನಗೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಿ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎನ್ನುತ್ತಾರೆ. ಅದಕ್ಕಾಗಿ ವಿವಿಧ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಒದಗಿಸುವ ಉದ್ದೇಶವೂ ಮಹಾಸಭೆ ವತಿಯಿಂದ ಇದ್ದು ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎನ್ನುತ್ತಾರೆ.
+++++++++++++++++++++++++++++++++++++++++++++++

Leave a Reply

Your email address will not be published. Required fields are marked *

error: Content is protected !!