ಅದ್ಧೂರಿಯಾಗಿ ನಡೆದ ಬೆಳಗಾವಿ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವ
ಬೆಳಗಾವಿ .
ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟವು CPED ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು., ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಉತ್ತರ ವಿಭಾಗದ ಶಾಸಕ ಆಸಿಪ್ ಶೇಟ್ ಕ್ರೀಡೋತ್ಸವವನ್ನು ಉದ್ಘಾಟಿಸಿ, ಬಂಟ ಸಮಾಜದ ಕಾರ್ಯವೈಖರಿ , ನಿರಂತರ ಶ್ರಮ, ಅವಿರತವಾದ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ,

ಕ್ರೀಡೋತ್ಸವದ ವಿವಿಧ ವಿಭಾಗಗಳಲ್ಲಿ ಕ್ರಿಕೆಟ್, ವಾಲಿಬಾಲ್, ತ್ರೋ ಬಾಲ್ ಹಗ್ಗ ಜಗ್ಗಾಟ , ರನ್ನಿಂಗ್ ರೇಸ್ ಇನ್ನಿತರ ಸ್ಪರ್ಧೆಗಳು ಇದ್ದವು , ಪುರುಷರು ಮಹಿಳೆಯರು ಮಕ್ಕಳು ಅತೀ ಉತ್ಸಾಹದಿಂದ ಭಾಗವಹಿಸಿದರು,

ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ವಿಠ್ಠಲ ಎಸ್ ಹೆಗಡೆ, ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ಚೇತನ್ ಶೆಟ್ಟಿ, ಮಾಜಿ ಅಧ್ಯಕ್ಷ ಆನಂದ್ ಎನ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕ್ರೀಡಾ ಸಮಿತಿಯ ಉಳ್ತೂರು ಸಂತೋಷ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಕೀರ್ತಿಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ಹಿರಿಯ ಸದಸ್ಯ ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಬಂಟರ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು