ಬೆಳಗಾವಿ. ಸಹಜವಾಗಿ ಚುನಾವಣೆ ಬಂದಾಗ ಎಲ್ಲಾ ಎಲ್ಲ ರಾಜಕೀಯ ಪಕ್ಷಗಳು ಇದ್ದುದರಲ್ಲಿಯೇ ಉತ್ತಮ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತವೆ. ಮೊದಲು ಹೇಗಿತ್ತು ಅಂದರೆ, ಹೈಕಮಾಂಡ ವಸೂಲಿ ಇದ್ದರೆ ಸಾಕು, ಅವರಿಗೆ ಅರ್ಹತೆ, ಇರಲಿ,ಬಿಡಲಿ ಟಿಕೇಟ್ ಕೊಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಆಗಿದೆ. ಇದೆಲ್ಲದರ ಜೊತೆಗೆ ಮತದಾರರು ಕೂಡ ನಮ್ಮ ಪ್ರತಿನಿಧಿ ಸಂಸತ್ ನಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತಾಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಗುವವರ ಬಗ್ಗೆ ಅಳೆದು ತೂಗಿ ಆಯ್ಕೆ ಮಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಲೋಕಸಭೆ ಚುನಾವಣೆ ಕಾಲ. ಕಾಂಗ್ರೆಸ್ ,ಬಿಜೆಪಿಯವರು ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದಾರೆ. ಬಿಜೆಪಿಯಲ್ಲೂ ಕೂಡ ಅಂಗಡಿ ಕುಟುಂಬ ಬಿಟ್ಟರೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೆಸರು ಅಂತಿಮ ಆಗಬಹುದು ಎನ್ನುವ ಮಾತುಗಳಿವೆ.
ಆದರೆ ಕಾಂಗ್ರೆಸ್ ನಲ್ಲಿ ಬಹುತೇಕ ನೂರಕ್ಕೆ ನೂರರಷ್ಟು ಡಾ. ಗಿರೀಶ ಸೋನವಾಲ್ಕರ ಹೆಸರು ಅಂತಿಮ ಎನ್ನುವ ಮಾತಿದೆ. ಇಲ್ಲಿ ಘೋಷಣೆಯೊಂದೇ ಬಾಕಿ ಉಳಿದಿದೆ.
ಇನ್ನುಳಿದಂತೆ ಲೋಕಸಮರದಲ್ಲಿ ಯಾವ ಯಾವ ಡಾವ್ ಹಾಕಬೇಕು ಎನ್ನುವ ತಯಾರಿಯಲ್ಲಿ ಅವರು ತೊಡಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕಾಂಗ್ರೆಸ್ ಪಕ್ಷಕ್ಕೆ ಡಾ.ಸೋನವಾಲ್ಕರ ಇನ್ನೂ ಸೇರ್ಪಡೆ ಆಗಿಲ್ಲ. ಆದರೂ ಅವರಿಗೇ ಏಕೆ ಟಿಕೆಟ್ ಎನ್ನುವ ಪ್ರಶ್ನೆ ಪಕ್ಷದ ವಲಯದಲ್ಲಿ ಕೇಳಿ ಬರುವುದು ಸಹಜ ಮತ್ತು ಸ್ವಾಭಾವಿಕ. ಆದರೆ ಡಾ. ಸೋನವಾಲ್ಕರ ಅವರನ್ನು ಬಲ್ಲವರಿಗೆ ಟಿಕೆಟ್ ಗೆ ಅವರೇ ಅರ್ಹ ವ್ಯಕ್ತಿ ಎಂದೆನಿಸದೇ ಇರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೂಢಿ ಮಾತು ಕೇಳಿರಬಹುದು. ಅದೇ ರೀತಿ ಡಾ. ಗಿರೀಶ ಸೋನವಾಲ್ಕರ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಎಲ್ಲೆಡೆ ಉತ್ತಮ ಹೆಸರು ಮಾಡಿದ್ದಾರೆ. ಒಂದೇ ಒಂದು ಕಪ್ಪು ಚುಕ್ಕೆ ಇವರ ಮೇಲಾಗಲೀ ಅಥವಾ ಇವರ ಕುಟುಂಬದ ಮೇಲಾಗಲೀ ಇಲ್ಲ.
ಖುದ್ದು ವೈದ್ಯರಾಗಿರುವ ಅವರು ಆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಸಹಕಾರ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಕೂಡ ಇವರು ಹೆಸರು ಮಾಡಿದ್ದಾರೆ.
ಇನ್ನೊಂದು ಮಾತೆಂದರೆ, ಡಾ. ಗಿರೀಶ ಸೋನವಾಲ್ಕರ ಅವರಿಗೆ ಜಾತಿ ,ಭಾಷೆ ಎಂಬುದಿಲ್ಲ. ಎಲ್ಲವನ್ನು ಮೀರಿ ಎಲ್ಲರೊಂದಿಗೂ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಬಹುತೇಕವಾಗಿ ರಾಜಕೀಯ ಹೊರತುಪಡಿಸಿಯೂ ಕೂಡ ಡಾ.ಗಿರೀಶ ಎಲ್ಲರಿಗೂ ಅಚ್ಚುಮೆಚ್ಚು.