ಮಹಿಳೆಯ ಸೀರೆ ಎಳೆದು ಹಲ್ಲೆ
ಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್ ಎಂದ ಖಾಕಿ
ಬೆಳಗಾವಿ.
ಅದೊಂದು ಸಿಸಿಟಿವಿ ಸಾಕ್ಷಿಯನ್ನು ಯಾವುದೇ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನೋಡಿದರೆ ಮೊದಲು ಹಲ್ಲೆಕೋರನ್ನು ಒದ್ದು ಒಳಗೆ ಹಾಕಿ ಎನ್ನುತ್ತಾರೆ, ಅದರಲ್ಲಿಯೂ ಇಪ್ಪತ್ತಕ್ಕೂ ಹೆಚ್ಚು ಜನ ಮಹಿಳೆಯನ್ನು ನಡು ರಸ್ತೆಯಲ್ಲಿ ಸೀರೆ ಜಗ್ಗಿ ಹಲ್ಲೆ ಮಾಡಿದ್ದನ್ನು ಕೇಳಿದರೆ ಎಂಥಹವರ ಮೈ ಸಹ ಉರಿದು ಹೋಗುತ್ತದೆ,
ಆದರೆ ಪಾಪ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಏನೂ ಕಾಣದಂತೆ ಕುಳಿತುಬಿಟ್ಟಿದ್ದಾರೆ,

ತನ್ನ ಹೆತ್ತ ಮಕ್ಕಳ ಸಮ್ಮುಖದಲ್ಲಿ ಹತ್ತಕ್ಕೂ ಹೆಚ್ಚಿದ್ದ ಜನ ಆ ಮಹಿಳೆಯ ಸೀರೆ ಎಳೆದು ಹಲ್ಲೆ ಮಾಡುತ್ತಿರಬೇಕಾದರೆ ಪರಿಸ್ಥಿತಿ ನೀವೇ ಊಹಿಸಿ ಇಲ್ಲಿ ಸಂತ್ರಸ್ತೆ ಆ ದೃಶ್ಯದ ಸಿಸಿಟಿವಿಯನ್ನು ರಾಯಬಾಗ ಪೊಲೀಸರಿಗೆ ಹೋಗಿ ತೋರಿಸಿದರೆ ಪ್ರಕರಣ ದಾಖಲಿಸುವ ಮಾತೇ ಆಡಲಿಲ್ಲವಂತೆ, ಬದಲಾಗಿ ನಾಳೆ ಬಾ ಎನ್ನುವ ಮಾತನ್ನು ಆಡಿ ಕಳಿಸಿದರು,
‘ಹೀಗಾಗಿ ಸಂತ್ರಸ್ತೆ ಇಂದು ಅದೆಲ್ಲ ದಾಖಲೆಯನ್ನು ಹೊತ್ತುಕೊಂಡು ಬೆಳಗಾವಿ ಎಸ್ಪಿ ಕಚೇರಿಯ ಮೆಟ್ಟಿಲು ಹತ್ತಿದ್ದಳು, ಇಲ್ಲಿನ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಆ ಸಿಸಿಟಿವಿ ದೃಶ್ಯವನ್ನು ತೋರಿಸಿದರು, ಅದನ್ನು ಕಂಡು ಹೌಹಾರಿದ ಅಧಿಕಾರಿಗಳು ನೇರವಾಗಿ ಸಿಪಿಐಗೆ ದೂರವಾಣಿ ಮೂಲಕ ಕೇಸ್ ದಾಖಲು ಮಾಡುವಂತೆ ತಾಕೀತು ಮಾಡಿದರು,
ಆದರೆ ಇಲ್ಲಿಯವರೆಗೆ ಸಿಸಿಟಿವಿಯನ್ನು ನೋಡಿ ಕ್ರಮ ತೆಗೆದುಕೊಳ್ಳದ ಸಿಪಿಐ ಮತ್ತು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಪೊಲೀಸ್ ಹಿರಿಯ ಅಧಿಕಾರಿಗಳು ಮಾಡಬೇಕಿದೆ. ಕಾದುನೋಡಬೇಕು.