ಬೆಳಗಾವಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ ಎನ್ನುವ ಮಾತು ಸಹಜ ಮತ್ತು ಸ್ವಾಭಾವಿಕ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೈಖರಿ ಬೇರೆಯಾಗಿತ್ತು ಆಗ ಧ್ವನಿ ವರ್ಧಕಕಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಏಕೆಂದರೆ ಆಗ ಈಗಿನಷ್ಟು ಸಾಮಾಜಿಕ ಜಾಲತಾಣಗಳ ಹಾವಳಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ನಾಳೆ ಅನ್ನೋದೇ ಇಲ್ಲ. ಎಲ್ಲವೂ ತಕ್ಷಣ ಆಗಬೇಕು. ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಹೊಸ ಹೊಸ ಬೆಳವಣಿಇಗೆಗಳು ತಕ್ಷಣ ಅಂಗೈಯಲ್ಲಿ ನೋಡಲು ಸಿಗಬೇಕು. ಅಷ್ಟರ ಮಟ್ಟಿಗೆ ಜಗತ್ತು ಫಾಸ್ಟ ಆಗಿ ಓಡುತ್ತಿದೆ.
ಪ್ರಚಾರ ಹೀಗೂ ಉಂಟೆ..?!
ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ ಭಾರತೀಯ ಜನತಾ ಪಕ್ಷದವರು ಇಂಡಿಯಾ ಒಕ್ಕೂಟದವರನ್ನೇ ಟಾರ್ಗೆಟ್ ಮಾಡಿಕೊಂಡು ಸಿದ್ಧಪಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.