ಬೆಳಗಾವಿ.
ಕಾರ್ಯಕ್ರಮlಕ್ಕೆ ಆಹ್ವಾನಿಸದೆ ಹಕ್ಕುಚ್ಯುತಿ ಉಲ್ಲಂಘನೆ ಮಾಡಿದ ಹೆಸ್ಕಾಂ ಅಧಿಕಾರಿಗಳು ಶಾಸಕ ಅಭಯ ಪಾಟೀಲರ ಕ್ಷಮೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಚ್ಚೆಯಲ್ಲಿ ನಡೆದ ವಿದ್ಯುತ್ ಉಪಕೇಂದ್ರದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಹೇಳಿ ಶಾಸಕ ಅಭಯ ಪಾಟೀಲರುಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಪತ್ರವನ್ನು ಸಭಾಧ್ಯಕ್ಷರಿಗೆ ಪತ್ರವನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಭಯಬಿದ್ದ ಅಧಿಕಾರಿಗಳು ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆಂದು ಗೊತ್ತಾಗಿದೆ.