ಬೆಳಗಾವಿ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಎಲ್ಲರನ್ಬು ವಿಶ್ವಾಸಕ್ಕೆ ತೆಗೆದುಕೊಂಡು ಮತಬೇಟೆಗೆ ಮುಂದಾಗುತ್ತಿದ್ದಾರೆ.
ನಿತ್ಯ ಬೆಳುಗ್ಗೆಯಿಂದ ರಾತ್ರಿಯವರೆಗೆ ಎಡೆಬಿಡದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿತ್ತಿರುವ ಶೆಟ್ಟರ್ ಎಲ್ಲ ವರ್ಗದವರನ್ಬು ಭೆಟ್ಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.
ಇದನ್ನೂ ಓದಿ…
ಗಮನಿಸಬೇಕಾದ ಸಂಗತಿ ಎಂದರೆ, ಶೆಟ್ಟರ್ ಅವರು ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡದೇ ಅಬ್ಬರದ ಬರೀ ಪ್ರಚಾರದ ಗೊಡವೆಗೂ ಹೋಗದೆ ಮತಯಾಚನೆ ಮಾಡುತ್ತಿದ್ದಾರೆ. ಇದುಮತದಾರರ ಮೇಲೆ ಪ್ರಭಾವ ಬೀರುತ್ತಿದೆ. ಶೆಟ್ಟರ್ ಹೋದ ಕಡೆಗೆಲ್ಲ ದೇಶದ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ನಾವು ಮೋದಿಜಿಯವರನ್ನು ಬೆಂಬಲಿಸುತ್ತಿದ್ದೇವೆ ಎಂದು ಮತದಾರರು ಹೇಳುತ್ತುದ್ದಾರೆ.
ಬೆಳಗಾವಿ ಟಿಳಕವಾಡಿಯ ನಾಥ್ ಪೈ ಗಾರ್ಡನದಲ್ಲಿ ಬೆಳ್ಳಂ ಬೆಳಿಗ್ಗೆ ಚಾಯ್ ಪೇ ಚರ್ಚಾ ಗೆ ಆಗಮಿಸಿದ್ದ ಶೆಟ್ಟರ್ ಅವರಿಗೆ ಮಹಾನಗರ ಪಾಲಿಕೆಯ ನಗರಸೇವಕಿ ಮತ್ತು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ಪಕ್ಷದ ಮಹಾನಗರ ಅಧ್ಯಕ್ಷೆ ಗೀತಾ ಸುತಾರ ಸೇರಿದಂತೆ ಇನ್ನಿತರ ನಗರಸೇವಕರು ಹಾಜರಿದ್ದರು.