ವಿರೋಧಿಗಳಿಗೆ ಅಡ್ರೆಸ್ ಕೊಟ್ಟ ಶೆಟ್ಟರ್‌…!

ಬೆಳಗಾವಿ. ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುತ್ತ ಮತದಾರರನ್ಬು ಸೆಳೆಯುವ ವಿರೋಧಿಗಳ ಯತ್ನ ಈಗ ಠುಸ್ ಆಗಿದೆ.

ಶೆಟ್ಟರ್ ಹೆಸರು ಘೋಷಣೆ ಆದಾಗಿನಿಂದ ಇದೊಂದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡುತ್ತಿತ್ತು..

ಮತದಾರರು ನಾವು ಮೋದಿ ನೋಡ್ತೆವಿ ಎನ್ನುವ ಉತ್ತರವನ್ನೂ ನೀಡಿ‌ಕಳಿಸುವ ಕೆಲಸ ಮಾಡಿದ್ದರು.

ವಿರೋಧಿಗಳ ಈ ಮಾತಿಗೆ ಶೆಟ್ಟರ್ ಅಷ್ಟೇ ಅಲ್ಲ ಅರಭಾವಿ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಖಡಕ್ ಎದಿರೇಟು ಕೊಟ್ಟಿದ್ದರು. ಅಡ್ರೆಸ್ ಕೇಳಿದವರೇ ಅಡ್ರೆಸ್ ಇಲ್ಲದಂತೆ ಹೋಗ್ತಾರೆ ಎಂದು ಅವರು ಹೇಳಿದ್ದರು.

ಈಗ ಶೆಟ್ಟರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕುಮಾರಸ್ವಾಮಿ ಲೇಔಟದಲ್ಲಿ ಎರಡಂತಸ್ತಿನ ಮನೆಯನ್ನು ಹಿಡಿದಿದ್ದಾರೆ. ಇಂದು ಅದರ ಪ್ರವೇಶ ಕೂಡ ಮಾಡಿದರು.

ಹೀಗಾಗಿ ಈಗ ವಿರೋಧಿಗಳಿಗೆ ಶೆಟ್ಟರ್ ವಿರುದ್ಧ ಆಡಲು ಬೇರೆ ಮಾತುಗಳೇ ಇಲ್ಲದಾಗಿದೆ.

ಇದೆಲ್ಲದರ ನಡುವೆ ಕಾಂಗ್ರೆಸ್ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರಕ್ಕೆ ಲಗ್ಗೆ ಇಡುವ ಪ್ರಯತ್ನ‌ ನಡೆಸಿದೆ ಆರಭಾವಿ, ಗೋಕಾಕಬಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಲೀಡನ್ನು ಕಟ್ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮರಾಠಿ‌ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು. ಹೀಗಾಗಿ ಅದೇ ರೀರಿ ಲೋಕಸಮರದಲ್ಲೂ ಆಗುತ್ತದೆ ಎನ್ನುವುದು ಕಾಙಗ್ರೆಸ್ ನವರ ಲೆಕ್ಕಾಚಾರವಾಗಿದೆ‌

ಈ ನಿಟ್ಟಿನಲ್ಲಿ ಅನಗೋಳ ಭಾಗದಲ್ಲಿ ಕಾಂಗ್ರೆಸ್ ಅಲ್ಲಿನ ಮರಾಠಿ‌ ಭಾಷಿಕರನ್ನು ಓಲೈಸಿಕೊಳ್ಳಲು ಎಲ್ಲ ತಂತ್ರಗಾರಿಕೆ ನಡೆಸಿದೆ.ಇನ್ಬುಳಿದಂತೆ ನೇಕಾರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕೂಡ ಕಾಂಗ್ರೆಸ್ ಪ್ರಯತ್ನ‌‌ ನಡೆಸಿದೆ

ಗಮನಿಸಬೇಕಾದ. ಮತ್ತೊಂದು ಸಂಗತಿ ಎಂದರೆ ಬಿಜೆಪಿ ನಾಯಕರು ಕಾಂಗ್ರೆಸ್ ಹಿಡಿತದಲ್ಕಿರುವ ಐದು ವಿಧಾನಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರ ನಡೆಸಿದೆ.ಹೀಗಾಗಿ ಈ ಐದು ಕ್ಷೇತ್ರಗಳಿಂದ ಕನಿಷ್ಟ ಒಂಸು‌ಲಕ್ಷ ಮತಗಳು ಹೆಚ್ಚಿಗೆ ಬರಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಗಿದೆ.

Leave a Reply

Your email address will not be published. Required fields are marked *

error: Content is protected !!