ಈಶ್ವರಪ್ಪ ಮೆರವಣಿಗೆಯಲ್ಲಿ ಮೋದಿ ಹವಾ..!

ಶಿವಮೊಗ್ಗ. ಯಾರ ಮಾತಿಗೂ ಬಗ್ಗದ ಕೆ.ಎಸ್. ಈಶ್ವರಪ್ಪ ಕೊಬೆಗೂ ಶಿವಮೊಗ್ಗದಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದು ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದರು.

ಕಳೆದ ಹಲವು ದಿನಗಳಿಂದ ಕಣದಿಂದ ಹಿಂದೆ ಸರಿಯಬಹುದು ಎನ್ನುವ ಗಾಳಿ ಸುದ್ದಿಗೆ ಈಶ್ವರಪ್ಪ ನಾಮಪತ್ರ ಸಲ್ಲಿಸುವ ಮೂಲಕ ಸ್ಪರ್ಧೆಯನ್ನು ಖಚಿತಪಡಿಸಿದರು.

ಸಾವಿರಾರು ಸಂಖ್ಯೆಯಲ್ಲಿದ್ದ ನಾಮಪತ್ರ ಸಲ್ಲಿಸಲು ಹೊರಟ ಮೆರವಣಿಗೆಯಲ್ಲಿ ಭಗವಾ ಧ್ವಜಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಜಿಯವರ ಪೊಟೊ ರಾರಾಜಿಸುತ್ತಿತ್ತು. ಅಷ್ಟೇ ಅಲ್ಲ ಜೈ ಶ್ರೀರಾಮ ಘೋಷಣೆಗಳು ಕಿವಿಗಡಚಿಕ್ಕುವಂತೆ ಕೇಳಿ ಬಂದವು.

ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಕುಟುಂಬ ಸಮೇತ ಆಗಮಿಸಿದ ಈಶ್ವರಪ್ಪ ನಾಮಪತ್ರಸಲ್ಲಿಸಿದರು.

ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ವಿರುದ್ದ ಒಂದು ಹಂತದಲ್ಲಿ ಶಕ್ತಿ ಪ್ರದರ್ಶನವನ್ನೆ ಮಾಡಿದೆರೆನ್ನಬಹುದು. ಈಶ್ವರಪ್ಪ ಅವರ ಜೊತೆಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ , ಕುರುಬ ಸಮಾಜದ ಮುಖಂಡ ಮುಕುಡಪ್ಪ, ಮಾಜಿ ಕಾರ್ಪೋರೇಟರ್ ವಿಶ್ವಾಸ್ ಅವರಿದ್ದರು.

Leave a Reply

Your email address will not be published. Required fields are marked *

error: Content is protected !!