ಕುಂಕುಮ ರಕ್ಷಿಸದ ಕಾಂಗ್ರೆಸ್ ಸರ್ಕಾರ

ಇಲ್ಲಿ ಹಿಂದೂ ಮಹಿಳೆಯರೇ ಟಾರ್ಗೆಟ್. ಕುಂಕುಮ ಉಳಿಸಿ ಹೋರಾಟಕ್ಕೆ ಸಿದ್ಧರಾದ ಹಿಂದೂಗಳು. ಬೇಜವಾಬ್ದಾರಿ ಉತ್ತರ ಕೊಟ್ಟು ಕ್ಷಮೆ ಕೇಳಿದ ಗೃಹ ಸಚಿವರು

ಆಗ ಶೀತಲ್. ಈಗ ನೇಹಾ..ಮುಂದೆ..!
ಬೆಳಗಾವಿ ಪೊಲೀಸರ ಧೈರ್ಯ
ಹುಬ್ಬಳ್ಳಿಯವರಿಗೆ ಏಕೆ ಬರಲಿಲ್ಲ ?


ಬೆಳಗಾವಿ.
ಎತ್ತ ಸಾಗುತ್ತಿದೆ ಕರ್ನಾಟಕ, ಹೆಣ್ಣಿಗೆ ಕೈ ಮುಗಿದು ಗೌರವಿಸುವ ನಾಡಿದು.

ಹೆಣ್ಣಿನ ಅರಿಶಿನ ಕುಂಕುಮವನ್ನೇ ನಾಡ ಧ್ವಜವನ್ನಾಗಿ ಮಾಡಿದ ನಾಡಿದು, ಸದಾ ಕನ್ನಡಾಂಬೆಯ ಪೂಜಿಸೊ ನಾಡಿದು.
ಈಗ ಹೇಳಿ..

ಎಲ್ಲಿದೆ ನಮ್ಮ ಸರ್ವಜನಾಂಗದ ಶಾಂತಿಯ ತೋಟ…!

ಇದಕ್ಕೆ ಉತ್ತರ ಕೊಡಬೇಕಾದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದೆ. ನಂತರ ಜನ ಛೀ ಥೂ ಅಂದ ಮೇಲೆ ಕ್ಷಮೆ ಕೇಳುವ ಕೆಲಸ ಮಾಡಿದೆ. ನಾಚಿಕೆಯಾಗಬೇಕು ಸರ್ಕಾರಕ್ಕೆ.!

ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಪಾಠವಾಗಲಿದೆ ಎನ್ನುವುದು ಸುಳ್ಳಲ್ಲ

ಕುಂಕುಮ..!

ಸರ್ಕಾರದ ಈ ದ್ವಂದ್ವ ಹೇಳಿಕೆಯಿಂದ ರಾಜ್ಯದ ಹಿಂದೂ ಹೆಣ್ಣು ಮಕ್ಕಳು ನಮ್ಮ ಕುಂಕುಮ ಉಳಿಸಿ ಎಂದು ಬೀದಿಗಿಳಿಯುವ ಪರಿಸ್ಥಿತಿ ಬಂದೊದಗಿದೆ.


ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ಮೊದಲ ವರ್ಷದ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಡು ಹಗಲೆ ಕೊಲೆಯಾದ ನಂತರ ಹಿಂದೂ ಹೆಣ್ಣು ಮಕ್ಕಳು ಇಂತಹ ಆತಂಕದ ಕ್ಷಣವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ, ಮತ್ತೊಂದು ಕಡೆಗೆ ಕಾಲೇಜಿಗೆ ಮಕ್ಕಳನ್ನು ಕಳಿಸಲೂ ಸಹ ಪಾಲಕರು ಭಯಪಡುವಂತಾಗಿದೆ.


ಅಂದು ಬೆಳಗಾವಿ ಶೀತಲ್….!

2007 ಸೆಪ್ಟಂಬರ. ಬೆಳಗಾವಿಯ ಶೀತಲ್ ಚೌಗಲೆ ಬರ್ಬರ ಹತ್ಯೆ, ಸ್ಥಳ-ಗಣೇಶಪುರ ರಾಜದೀಪ ಬಂಗಲೆ.
ಇಲ್ಲಿ ಶೀತಲ್ ಚೌಗಲೆ ಹತ್ಯೆ ಮಾಡಿದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕೂಡ ಇರಲಿಲ್ಲ. ಆದರೂ ಬೆಳಗಾವಿ ಆಗಿನ ಖಡಕ್ ಎಸ್ಪಿ ಹೇಮಂತ ನಿಂಬಾಳಕರ ನೇತೃತ್ವದ ತಂಡ ಮಾತ್ರ ಎಂಟೆದೆಯ ಬಂಟರಂತೆ ಆರೋಪಿಗೆ ಅದೇ ಸ್ಥಳದಲ್ಲಿಯೇ ತಕ್ಕ ಉತ್ತರ ಕೊಟ್ಟಿತು,

ಜನ ಎನ್ಕೌಂಟರ್ ಮಾಡಿ ಎನ್ನುವ ಮೊದಲೇ ಪೊಲೀಸರು ಆ ಕೆಲಸ ಮಾಡಿ ಮುಗಿಸಿದ್ದರು,

ಆಗಿನ ಪೊಲೀಸ್ ಅಧಿಕಾರಿಗಳಾದ ಎನ್.ವಿ. ಬರಮನಿ, ಮಹಾಂತೇಶ್ವರ ಜಿದ್ದಿ, ಶಂಕರ ಮಾರಿಹಾಳ ಮುಂತಾದವರು ಹಂತಕನಿಗೆ ತಕ್ಕ ಉತ್ತರ ನೀಡಿದ್ದರು, ಹೀಗಾಗಿ ಈಗಲೂ ಹೇಮಂತ ನಿಂಬಾಳ್ಕರ ತಂಡ ಅಂದ ಕೂಡಲೇ ರೌಡಿಗಳು ಹೆದರುತ್ತಾರೆ, ಕಂಡರೆ ನಮಸ್ತೆ ಸಾಬ್ ಎನ್ನುತ್ತಾರೆ,

ಇಂದು ಹುಬ್ಬಳ್ಳಿಯ ನೇಹಾ ಹಿರೇಮಠ..

ನೇಹಾ ಹಿರೇಮಠ ಹಂತಕ‌ ಫಯಾಜ

ಹುಬ್ಬಳ್ಳಿಯ ನೇಹಾಳ ಬರ್ಬರ ಹತ್ಯೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಹೆಸರಾಂತ ಬಿವಿಬಿ ಕಾಲೇಜಿನ ಆವರಣದಲ್ಲಿಯೇ ಹಾಡು ಹಗಲೇ ಹಂತಕ ಫಯಾಜ ಆಕೆಗೆ ಒಂದಲ್ಲ ಬರೊಬ್ಬರಿ ಒಂಬತ್ತು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಜನರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ, ಅದು ಬೇರೆ ಮಾತು.
ಆದರೆ ಘಟನೆಯನ್ನು ಸಿಸಿಟಿವಿಯಲ್ಲಿ ಗಮನಿಸಿದ ರಾಜ್ಯದ ಜನತೆ ಹೇಳಿದ್ದು ಒಂದೇ ಮಾತು, ಆತನಿಗೆ ಗಲ್ಲು ಶಿಕ್ಷೆ ಕೊಡಿ, ಇಲ್ಲದಿದ್ದರೆ ನಮಗೆ ಒಪ್ಪಿಸಿ,
ಸಹಜವಾಗಿ ಅಂತಹ ಮಾತುಗಳು ಬರುವುದು ಸಹಜ ಮತ್ತು ಸ್ವಾಭಾವಿಕ.

ಇಲ್ಲಿ ಏನಾಗಿದೆ ಎಂದರೆ, ರಾಜ್ಯದ ಗೃಹ ಮಂತ್ರಿಗಳು ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಅದು ವೈಯಕ್ತಿಕ ಎನ್ನುವ ಹೇಳಿಕೆ ನೀಡಿ ಬಿಟ್ಟರು,. ಹೀಗಾಗಿ ಹುಬ್ಬಳ್ಳಿ ಪೊಲೀಸರು ಕೂಡ ಕಠಿಣ ಕ್ರಮಕ್ಕೆ ಒಂದು ಹೆಜ್ಜೆ ಹಿಂದಿಟ್ಟರು ಎನ್ನುವ ಮಾತು ಕೇಳಿ ಬರುತ್ತಿದೆ, ಈಗಲೂ ಕೂಡ ನ್ಯಾಯಾಲಯದಲ್ಲಿ ಆತನಿಗೆ ಗಲ್ಲು ಶಿಕ್ಷೆಯೇ ಆಗುವ ನಿಟ್ಟಿನಲ್ಲಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ ಇದೆ,

ವಿಕೃತ ಮನಸ್ಸಿನವರು….!
ಇಂತಹ ಸೂಕ್ಷ್ಮ ಘಟನೆಗಳು ನಡೆದ ಸಂದರ್ಭದಲ್ಲಿಯೂ ಕೂಡ ಕೆಲ ವಿಕೃತ ಮನಸ್ಸಿನವರು ಕೆಲವರು ಫಯಾಜನೊಂದಿಗಿರುವ ಆಕೆಯ ಪೊಟೊಗಳನ್ನು ವೈರಲ್ ಮಾಡುತ್ತಿದ್ದಾರೆ,

ಸಹಜವಾಗಿ ಕಾಲೇಜಿನಲ್ಲಿ ಓದುತ್ತಿರುವಾಗ ಪೊಟೊ ತೆಗೆಸಿಕೊಂಡರೆ ಅದಕ್ಕೆ ಪ್ರೀತಿ ಬಣ್ಣ ಕಟ್ಟುವ ಮನಸ್ಸಿನವರಿಗೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದು ಅರ್ಥವಾಗುವದೇ ಇಲ್ಲ. ಇಲ್ಲಿ ವಿಕೃತ ಮನಸ್ಸಿನವರ ಪ್ರಕಾರ, ಆಕೆ ಅವನನ್ನು ಪ್ರೀತಿಸುತ್ತಿದ್ದರೆ ಮನೆಯಲ್ಲಿ ಹೇಳುವ ಪ್ರಮೇಯವೇ ಬರುತ್ತಿರಲಿಲ್ಲ. ಇಲ್ಲಿ ನೇಹಾ ಮನೆಯಲ್ಲಿ ಪಾಲಕರಿಗೆ ಹೇಳಿದ್ದಾಳೆಂದರೆ ಆಕೆಗೆ ಅವನ ಮೇಲೆ ಪ್ರೀತಿ ಗೀತಿ ಮತ್ತೊಂದು ಇರಲಿಲ್ಲ ಎನ್ನುವುದು ಸ್ಪಷ್ಟ.

ಪ್ರಕರಣ ದಾರಿ ತಪ್ಪಿಸುವ ಯತ್ನ…
ರಾಜ್ಯವ್ಯಾಪಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಈ ಪ್ರಕರಣದ ದಿಕ್ಕನ್ನು ತಪ್ಪಿಸುವ ಹುನ್ನಾರ ಇದರ ಹಿಂದಿದೆ ಎನ್ನುವ ಸಂಗತಿ ಬೆಳಕಿಗೆ ಬರತೊಡಗಿದೆ,.
ಕೆಲ ವಿಕೃತ ಮನಸ್ಸಿನವರು ಆ ಪೊಟೊಗಳನ್ನೇ ಮುಂದಿಟ್ಟುಕೊಂಡು ವಿಕೃತ ಹಂತಕನದ್ದು ತಪ್ಪಿಲ್ಲ ಎನ್ನುವುದನ್ನು ಪರೋಕ್ಷವಾಗಿ ಬಿಂಬಿಸುವ ಕೆಲಸ ನಡೆಸಿದ್ದಾರೆ, ಆದರೆ ಪ್ರಜ್ಞಾವಂತರು ಇಂಹುದಕ್ಕೆ ಕವಡೆ ಕಾಸಿನ ಕಿಮ್ಮತ್ತುಕೊಡುವುದಿಲ್ಲ ಎನ್ನುವುದು ಸತ್ಯ.

Leave a Reply

Your email address will not be published. Required fields are marked *

error: Content is protected !!