ಬೆಳಗಾವಿ:
ನೇಹಾ ಹತ್ಯೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಸಿಐಡಿ ತಂಡ ತನಿಖೆ ತೀವ್ರಗೊಳಿಸಿದೆ. ಪ್ರಕರಣದ
ಆರೋಪಿ ಫಯಾಜ್ ನನ್ನು ಆರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಮಂಗಳವಾರ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಫಯಾಜ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡಿತು.

ಹುಬ್ಬಳ್ಳಿ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಆತನ ಹುಟ್ಟೂರು ಮುನವಳ್ಳಿಯಲ್ಲಿಯೂ ತನಿಖಾ ತಂಡ ವಿಚಾರಣೆ ನಡೆಸಿದ ಬಗ್ಗೆ ಮಾಹಿತಿ ಇದೆ.
ಎಸ್ಪಿ ವೆಂಕಟೇಶ್ ನೇತೃತ್ವದ ತಂಡ ನ್ಯಾಯಾಲಯಕ್ಕೆ ಆರೋಪಿ ಒಪ್ಪಿಸುವಂತೆ ಅರ್ಜಿ ಸಲ್ಲಿಸಿತ್ತು.ಇದೀಗ ಸಿಐಡಿ ಮುಂದೆ ನೇಹಾ ಹತ್ಯಾ ಆರೋಪಿ ಯಾವ ವಿಚಾರ ಬಾಯ್ಬುತ್ತಾನೊ ಎಂಬುದನ್ನು ಕಾದು ನೋಡಬೇಕು.