Headlines

ಶೆಟ್ಟರ್ ಅನುಭವಿ ರಾಜಕಾರಣಿ- ಅಭಯ

ಅನುಭವ ಇರುವ ಶೆಟ್ಟರ್ಗೆ ನಿಮ್ಮ ಮತ ಕೊಡಿ’

ಅನುಭವಸ್ಥರಿಗೆ ಮತ ನೀಡಿದರೆ ಬೆಳಗಾವಿ ಅಭಿವೃದ್ಧಿ.

ಶೆಟ್ಟರ್ ಸಿಎಂ, ಸಚಿವರಗಿ ಕೆಲಸ ಮಾಡಿದ್ದಾರೆ. ಇನ್ನುಳಿದ ಅಭ್ಯರ್ಥಿ ಬಗ್ಗೆ ಮಾತಾಡಲ್ಲ‌


ಬೆಳಗಾವಿ:
ಜಗದೀಶ ಶೆಟ್ಟರ್ ಅವರಂತಹ ಅನುಭವ ಇರುವ ವ್ಯಕ್ತಿ ಲೋಕಸಭೆಗೆ ಆಯ್ಕೆ ಆದರೆ ನಮ್ಮ ಕೆಲಸಗಳು ಆಗಲಿವೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು,
ಗುರುವಾರ ಬೆಳಗ್ಗೆ ಬೆಳಗಾವಿ ದಕ್ಷಣ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ವಿವಿಧ ಕೈಗಾರಿಕಾ ಪ್ರದೇಶದ ಮಾಲೀಕರು ಹಾಗೂ ಕಾಮರ್ಿಕರೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರಾರ್ಥ ನಡೆದ ಸಭೆಯಲ್ಲಿ ಅವರು ಮಾತನಾಡಿದರು.


ಜಗದೀಶ್ ಶೆಟ್ಟರ್ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ವಿವಿಧ ಕೈಗಾರಿಗಳು ಬೆಳಗಾವಿಗೆ ಬರುವ ಮೂಲಕ ಉದ್ಯೋಗ ಸೃಷ್ಟಿ ಆಗಲಿದೆ ಎಂದರು..


ಜಗದೀಶ್ ಶೆಟ್ಟರ್ ಸಾಕಷ್ಟು ಅನುಭವ ಇರುವ ರಾಜಕಾರಣಿ, ಸಿಎಂ ಆಗಿ, ವಿವಿಧ ಇಲಾಖೆಯ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅನುಭವ ಇರುವ ವ್ಯಕ್ತಿಗೆ ನಿಮ್ಮ ಮತ ನೀಡಬೇಕು.ಈ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ನಾನು ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ಸ್ಪಧರ್ೆ ಮಾಡುತ್ತಿದ್ದೇನೆ. ನಾಲ್ಕು ಬಾರಿ ಸುರೇಶ್ ಅಂಗಡಿ ಅವರಿಗೆ ಆಶಿವರ್ಾದ ಮಾಡಿ, ಲೋಕಸಭಾ ಸದಸ್ಯರಾಗಿ ಗೆಲ್ಲಿಸಿದ್ದೀರಿ. ನರೇಂದ್ರ ಮೋದಿಯವರ ಕ್ಯಾಬಿನೆಟ್ನಲ್ಲಿ ದಿ. ಸುರೇಶ್ ಅಂಗಡಿಯವರು ರೈಲ್ವೆ ಸಚಿವರಾಗಿ ಕೆಲಸ ಮಾಡಿ, ಬೆಳಗಾವಿ ರೈಲ್ವೆ ನಿಲ್ದಾಣ ಹಾಗೂ ವಿವಿಧ ರೈಲ್ವೆಗಳನ್ನು ಅಭಿವೃದ್ಧಿ ಮಾಡಿದ್ದಾರೆ.


ಮಂಗಲಾ ಅಂಗಡಿಯವರು ಕೂಡಾ ಬೆಳಗಾವಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲು ಪ್ರಯತ್ನ ಮಾಡಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣ ಬಹಳಷ್ಟು ಅಭಿವೃದ್ಧಿ ಆಗಿದೆ. ಬರುವ ದಿನಗಳಲ್ಲಿ ಎರಡನೆಯ ಟಮರ್ಿನಲ್ ಕಾಮಗಾರಿ ಪೂರ್ಣ ಆದರೆ ಇನ್ನು 14-16 ನಗರಗಳಲ್ಲಿ ವಿಮಾನ ಸೇವೆ ಆರಂಭ ಆಗಲಿದೆ. ಕೆಲವು ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!