ಗ್ಯಾರಂಟಿ ಯೋಜನೆಗಳ ಮನವರಿಕೆ ಮಾಡಿ ಮತ ಸೆಳೆಯಿರಿ-ಸಚಿವ ಜಾರಕಿಹೊಳಿ
ಹುಕ್ಕೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟನೆ
ಹುಕ್ಕೇರಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿ ಕಾಂಗ್ರೆಸ್ ಪರ ಮತ ಸೆಳೆಯಬೇಕು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮತದಾರರಿಗೆ ಪದೇ ಪದೇ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್‌ನತ್ತ ಮತ ಸೆಳೆಯಬೇಕು ಎಂದರು.
ಗ್ಯಾರAಟಿ ಯೋಜನೆಗಳ ಪಲಾನುಭವಿಗಳಾದ ಶೇ.70 ರಷ್ಟು ಮಹಿಳೆಯರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಅವಕಾಶಗಳಿದ್ದು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳು ಕಾಂಗ್ರೆಸ್‌ಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಯುವ ಮುಖಂಡ ವಿನಯಗೌಡ ಪಾಟೀಲ ಮಾತನಾಡಿ, ಹುಕ್ಕೇರಿ ಪಟ್ಟಣದ ಸದಾ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಪ್ರತಿ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬಂದಿವೆ. ಈ ಬಾರಿಯೂ ಅಭ್ಯರ್ಥಿ ಪ್ರಿಯಂಕಾ ಅವರಿಗೆ ಹೆಚ್ಚಿನ ಮತಗಳ ಬರುವಂತೆ ಶ್ರಮಿಸಲಾಗುವುದು ಎಂದರು.
ಕೆಪಿಸಿಸಿ ಸಂಯೋಜಕ ರಾಜಶೇಖರ ಮೆಣಸಿನಕಾಯಿ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಮುಖಂಡರಾದ ರವಿ ಕರಾಳೆ, ಮೌನೇಶ ಪೋತದಾರ, ರಾಜು ಸಿದ್ನಾಳ, ಇಲಿಯಾಸ್ ಇನಾಮದಾರ, ವೀರುಪಾಕ್ಷಿ ಮರೆನ್ನವರ, ಕಿರಣ ಕರೋಶಿ, ಇಮ್ರಾನ ಮೋಮಿನ, ಶಾನೂಲ್ ತಹಸೀಲದಾರ, ರೇಖಾ ಚಿಕ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದು ಗಂಗನ್ನವರ ನಿರೂಪಿಸಿದರು.