ಎಂಇಎಸ್ಗೆ ಶಾಕ್ ಕೊಟ್ಟ ಮಾಜಿ ಮೇಯರ್..!

ಎಂಇಎಸ್ ಶಾಕ್ ಕೊಟ್ಟ ಮಾಜಿ ಮೇಯರ್.

ಮರಾಠಿಗರ ಮತವನ್ನೇ ನಂಬಿದ್ದ ಎಂಇಎಸ್ , ಕಾಂಗ್ರೆಸ್ ಗೆ ಮರ್ಮಾಘಾತ.

ಬಿಜೆಪಿಗೆ ಬೆಂಬಲ ಎಂದ ಮಾಜಿ ಮೇಯರ್, ಗ್ರಾಮೀಣ ಭಾಗದಲ್ಲಿ ಹಿಡಿತ ಹೊಂದಿದ್ದ ಮಾಜಿ ಮೇಯರ್ ಸುಂಟಕರ.

ಎಂಇಎಸ್ ಅಭ್ಯರ್ಥಿ ಆಯ್ಕೆ ಬಗ್ಗೆಯೇ ಅಸಮಾಧಾನ.

ದೇಶದ ಸುರಕ್ಷತೆ ದೃಷ್ಟಿಯಿಂದ ಬಿಜೆಪಿ ಬೆಂಬಲ. ಮರಾಠಿ ಭಾಷಿಕರ ಒಲವು ಬಿಜೆಪಿಯತ್ತ ಎಂದ ಮಾಜಿ ಮೇಯರ್.


ಬೆಳಗಾವಿ.
ಮರಾಠಿಗರ ಮತಗಳನ್ನೇ ನಂಬಿ ಕಣಕ್ಕಿಳಿದಿದ್ದ ಎಂಇಎಸ್ ಅಭ್ಯರ್ಥಿ ಮಹಾದೇವ ಪಾಟೀಲರಿಗೆ ಈಗ ಮರಾಠಿ ಭಾಷಿಕರೇ `ಕೈ’ ಕೊಡುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಾಜಿ ಮೇಯರ್ ಶಿವಾಜಿ ಸುಂಠಕರ ಅವರು ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ಗೆ ಬೆಂಬಲ ಘೋಷಿಸಿದ್ದಾರೆ.

ಇದು ಸಹಜವಾಗಿ ಎಂಇಎಸ್ ಮತ್ತು ಕಾಂಗ್ರೆಸ್ಗೆ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತಾಸಕ್ತಿ ಮತ್ತು ಸುರಕ್ಷತೆ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು,


ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಹಾಗೂ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಿ ಈ ನಿರ್ಣಯಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದರು,
ಬೆಳಗಾವಿ ಹಾಗೂ ಇಲ್ಲಿನ ಸ್ವಭಾಷಿಕರ ಅಭಿವೃದ್ಧಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನಮ್ಮ ಬೆಂಬಲಿಗರ ಸಮೇತ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು,
ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಮತಕ್ಷೇತ್ರದ ಬಹುತೇಕ ಎಂಇಎಸ್ ಕಾರ್ಯಕರ್ತರೂ ಸಹ ಈ ಬಾರಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಸುಂಟಕರ ಹೇಳಿದರು,.


ನಾವು ಹಾಗೂ ನಮ್ಮೆಲ್ಲ ಬೆಂಬಲಿಗರೂ ಸಹ ಇಂದಿಗೂ ಮರಾಠಿ ಭಾಷಿಕರ ಅಭಿವೃದ್ಧಿ ಪರವಾಗಿದ್ದೇವೆ. ಆದರೆ, ದೇಶದ ಸರ್ವತೋಮುಖ ಅಭಿವೃದ್ಧಿಕ್ಕೆ ದಕ್ಷ ನಾಯಕತ್ವ ಬೇಕು ಎಂಬ ಮಹತ್ವಕಾಂಕ್ಷೆಯಿಂದ ಸ್ವಹಿತಾಸಕ್ತಿ ಬದಿಗಿಟ್ಟು ದೇಶದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷದ ಜಗದೀಶ ಶೆಟ್ಟರ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಮರಾಠಿ ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗೆ ಹೋರಾಟವನ್ನು ಎಂದಿನಂತೆ ಮುಂದುವರಿಸುತ್ತೇವೆ ಎಂದರು,

ಎಂಇಎಸ್ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಪಾರದರ್ಶಕತೆ ಕಾಪಾಡಲಿಲ್ಲ. ಎಂಇಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಯಾರಿಗೆ ಲಾಭ, ನಷ್ಟ ಎನ್ನುವುದಕ್ಕಷ್ಟೇ ಸೀಮಿತವಾಗಿತ್ತು. ಹೀಗಾಗಿ, ನಾವು ಅನ್ಯ ಮಾರ್ಗವಿಲ್ಲದೇ, ದೇಶದ ಸಮಗ್ರ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!