ಶಾಸಕ ಅಭಯ ಪಾಟೀಲರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸಾಥ್.
ಬಿಜೆಪಿ ಕಾರ್ಯಕರ್ತರು, ನಗರಸೇವಕರ ಹಾಜರಿ..
ಶಾಸಕರನ್ನು ಎರಡು ತಾಸು ಕಾಯಿಸಿದ ಪೊಲೀಸ್ ಅಧಿಕಾರಿಗಳು!
ಬೆಳಗಾವಿ.
ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಪರ ಮತದಾನ ಮಾಡಲು ಹಣ ಹಂಚುತ್ತಿದ್ದ ಪ್ರಕರಣದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕೂಗು ಹೆಚ್ಚಾಗಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸ ಠಾಣೆಗೆ ಆಗಮಿಸಿದ ಶಾಸಕ ಅಭಯ ಪಾಟೀಲ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕಚಟಗಿಮಠರು ಠಾಣೆಯಲ್ಲಿಯೇ ಠಿಕಾಣಿ ಹೂಡಿದರು.

ಇಲ್ಲಿ ಶಾಸಕರು ಕಣ ಹಂಚುತ್ತಿದ್ದವರ ಮೇಲೆ ಕ್ರಮ ತೆಗೆದುಕಿಳ್ಳಬೇಕೆಂದುಪಟ್ಡು ಹಿಡಿದರೆ, ಪೊಲೀಸರು ಅವರನ್ನು ಬಿಟ್ಟು ಹಿಡಿದುಕೊಟ್ಟವರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುವ ಮಟ್ಟಕ್ಕೆ ಹೋಗಿದ್ದು ವಾತಾವರಣ ಕಾವೇರಲು ಕಾರಣವಾಯಿತು
ಈ ಬಗ್ಗೆ ಡಿಸಿಪಿ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರೂ ಕೂಡ ಅವರು ಹಣ ಹಂಚುವವರನ್ನು ಹಿಡುದುಕೊಟ್ಟಿದ್ದೇ ತಪ್ಪು ಎಂದು ವಾದಿಸಿದರು ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಆಕ್ರೋಶಿತಗೊಂಡ ಶಾಸಕ ಅಭಯ ಪಾಟೀಲ ಮತ್ತು ಮಹಾಂತೇಶ ಕವಟಗಿಮಠರು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ ಪೊಲೀಸ್ ಅಧಿಕಾರಿಗಳ ಕ್ರಮದ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.
ಅಷ್ಟೇ ಅಲ್ಲ ಮಶ್ಯರಾತ್ರಿಯಿಂದಲೇ ಹೋರಾಟ ಮಾಡುವ ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.