ಬೆಳಗಾವಿ. ಬಿಸಿಲಿನ ಬೆಗೆಯಿಂದ ತತ್ತರಿಸಿದ್ದ ಬೆಳಗಾವಿ ಈಗ ಕೂಲ್ ಕೂಲ್.
ಶಿವಜಯಂತಿ ಮೆರವಣಿಗೆ ಆರಂಭಕ್ಕೂ ಮುನ್ನವೇ ಧರೆಗಿಳಿದ ಮಳೆರಾಯ ಬೆಳಗಾವಿಯನ್ನು ಕೂಲ್ ಮಾಡಿದ.
ಮಧ್ಯಾಹ್ನ ವೇ ಗುಡುಗು ಸಿಡಿಲಿನ ಅರ್ಭಟದ ಮಧ್ಯೆಧಾರಾಕಾರ ಮಳೆ ಸುರಿಯಿತು. ಬಹುತೇಕ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತು. ಒಳಚರಂಡಿಗಳಲ್ಲಿ ನೀರು ತುಂಬಿದ್ದವು.
ಬೆಳಗಾವಿ ಜನ ಧಾರಾಕಾರ ಸುರಿದ ಮಳೆಯಿಂದ ಫುಲ್ ಖುಷ್ ಆದರು. ಕೆಲವರಂತೂ ಖುಷಿಯಲ್ಲಿ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.
ಶಿವಜಯಂತಿ ಮೆರವಣಿಗೆ ಆರಂಭವಾಗುವ ಕೆಲವೇ ತಾಸುಗಳ ಮೊದಲು ವರುಣನ ಅರ್ಭಟ ಕಡಿಮೆಯಾಯಿತು.