ಎಚ್ಚೆತ್ತುಕೊಳ್ಳಲಿ ಸಚಿವೆ ಹೆಬ್ಬಾಳಕರ.
ತವರು ಕ್ಷೇತ್ರದಲ್ಲಿಯೇ ಹೆಬ್ಬಾಳಕರ ಕೈ ಹಿಡಿಯದ ಮತದಾರ ,
ಸ್ವಪಕ್ಷೀಯರೇ ಕಾಂಗ್ರೆಸ್ ಅಭ್ಯರ್ಥಿಗೆ ಕೈ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಒಬ್ಬಂಟಿ ಆದರಾ?.
ಏರಿದ ಏಣಿ ಒದ್ದು ಹೋಗಿದ್ದ ಸಚಿವೆ…ಸ್ವಭಾವ ಬದಲಿಸಿಕೊಳ್ಳದಿದ್ದರೆ ಮುಂದಿನ ರಾಜಕೀಯ ನಡೆ ಕಷ್ಟ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವೆ ಹೆಬ್ಬಾಳಕರ ಹೆಸರಿದ್ದ ಸ್ಟೆ ತೆರವಿಗೆ ಬಿಜೆಪಿ ಸಿದ್ಧತೆ
(ಇ ಬೆಳಗಾವಿ ವಿಶೇಷ)
ಬೆಳಗಾವಿ.
ದುಡ್ಡು ಒಂದಿದ್ದರೆ ಏನನ್ನಾದರೂ ಸುಲಭವಾಗಿ ಪಡೆಯಬಹುದು ಎನ್ನುವ ಹುಚ್ಚು ಕಲ್ಪನೆ ಬೆಳಗಾವಿ ಲೋಕಸಭೆ ಚುನಾವಣೆ ಫಲಿತಾಂಶ ಹುಸಿ ಮಾಡಿದೆ.
ಅಂದರೆ ಎಲ್ಲವನ್ನು ದುಡ್ಡಿನಿಂದಲೇ ಗೆಲ್ಲುತ್ತೇನೆ ಎನ್ನುವ ಭ್ರಮೆಯನ್ನು ಇದು ದೂರ ಮಾಡಿದೆ.
ಬದಲಾಗಿ ಮಾನವೀಯತೆ. ಅದಕ್ಕಿಂತಲೂ ಮಿಗಿಲಾದ ಸಂಬಂಧಗಳು ಮುಖ್ಯ ಎನ್ನುವುದು ಈ ಫಲಿತಾಂಶ ತೋರಿಸಿಕೊಟ್ಟಿದೆ.
ಸಿಂಪಲ್ ಆಗಿ ಹೇಳಬೇಕೆಂದರೆ , ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್ ಹೆಚ್ಚಿಗೆ ದುಡ್ಡು ಖರ್ಚೇ ಮಾಡಿಲ್ಲ. ಆದರೂ ಅವರು ಲಕ್ಷ ಲೀಡನಿಂದ ಗೆದ್ದಿದ್ದಾರೆ. ಆದರೆ ಸೋತವರು ಖರ್ಚು ಮಾಡಿದ ರೀತಿ ಗಮನಿಸಿದರೆ ಎಂತಹವರೂ ಹೌಹಾರುವ ಸ್ಥಿತಿ.

ಮತ್ತೊಂದು ಸಂಗತಿ ಎಂದರೆ, ಕಾಂಗ್ರೆಸ್ ಅಭ್ಯರ್ಥಿಗಿಂತ ಲಕ್ಷ್ಮೀ ಹೆಬ್ಬಾಳಕರ ಅವರು ಮಂತ್ರಿಗಿರಿ ಸಿಕ್ಕ ನಂತರ ಸಂಪೂರ್ಣ ಬದಲಾದರು. ದೊಡ್ಡವರು, ಸಣ್ಣವರು ಅವರ ಮುಂದೆ ನಗಣ್ಯರಾದರು. ಹತ್ತಿದ್ದ ಏಣಿಯನ್ನು ಒದ್ದು ಬಿಟ್ಟರು. ಒಂದು ಹಂತದಲ್ಲಿ ಕಷ್ಟ ಕಾಲದಲ್ಲಿದ್ದವರನ್ನು ಅರ್ಧಕ್ಕೆ ಬಿಟ್ಟರು. ಹೀಗಾಗಿ ಜನರೇ ಅವರಿಗೆ ಸರಿಯಾದ ಪಾಠ ಕಲಿಸಿದರು.
ಗ್ರಾಮೀಣ ಏಕೆ ಕಡಿಮೆ ಆಯಿತು?
ಸಚಿವೆಯ ತವರು ಗ್ರಾಮೀಣ ಕ್ಷೇತ್ರದಲ್ಲೇ ಮೃನಾಲ್ ಹೆಬ್ಬಾಳಕರಗೆ ಏಕೆ ಮತಗಳು ಬೀಳಲಿಲ್ಲ? ಜನ ಏಕೆ ತಿರಸ್ಕಾರ ಮಾಡಿದ್ರು?
ಈ ಕ್ಷೇತ್ರವೊಂದರಲ್ಲಿಯೇ ಬರೊಬ್ಬರಿ 50 ಸಾವಿರಕ್ಕೂ ಅಧಿಕ ಮತ ಲೀಡ್ ಬಿಜೆಪಿಗೆ ಬಂದಿವೆ.ಇನ್ನು ಉಳಿದ ಕ್ಷೇತ್ರಗಳ ಪರಿಸ್ಥಿತಿ ಊಹಿಸುವುದು ಅಸಾಧ್ಯ.

ಮತ್ತೊಂದು ಸಂಗತಿ ಎಂದರೆ, ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಗೆ ಕೈ ಕೊಟ್ಟಿದ್ದಾರೆ ಎಂದು ಹೇಳಬಹುದು.
ಈ ಲೋಕಸಭೆ ಚುನಾವಣೆ ಫಲಿತಾಂಶದ ಸಾಧಕ ಬಾಧಕ ಬಗ್ಗೆ ವಿಚಾರ ಮಾಡುತ್ತ ಹೋದರೆ ಸಚಿವರ ಹತ್ತಾರು ತಪ್ಪುಗಳು ಕಣ್ಮುಂದೆ ಬಂದು ನಿಲ್ಲುತ್ತವೆ.

ಈ ಕ್ಷೇತ್ರದ ಜನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮನೆ ಮಗಳೆಂದು ಹೆಬ್ಬಾಳಕರ ಅವರನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಭರ್ಜರಿ ಲೀಡದಿಂದ ಗೆದ್ದಿದ್ದರು. ಆದರೆ ಬರಬರುತ್ತ ಆ ಸಂದರ್ಭದಲ್ಲಿ ತನಗೋಸ್ಕರ ರಾತ್ರಿ ಹಗಲೆನ್ನದೇ ದುಡಿದವರನ್ನು ಮೂಲೆಗೊತ್ತಿ ಹೊಸ ತಂಡ ಕಟ್ಟಿದರು. ಹೀಗಾಗಿ ಗ್ರಾಮೀಣದ ಹಳಬರು ಯಾರೂ ಹೆಬ್ಬಾಳಕರ ಅವರನ್ನು ಮನೆ ಮಗಳೆಂದು ಈ ಸಲ ಭಾವಿಸಲೇ ಇಲ್ಲ. ಇದೂ ಕೂಡ ಸೋಲಿಗೆ ಕಾರಣವಾಯಿತು.
ಫೋನ್ ನಾಟ್ ರಿಸೀವ್..!
ಹೆಬ್ಬಾಳಕರ ರಾಜಕೀಯದಲ್ಲಿ ಏನೂ ಇಲ್ಲದೇ ಇದ್ದಾಗ ತಕ್ಷಣ ಕಾಲ್ ರಿಸೀವ್ ಮಾಡುತ್ತಿದ್ದರು. ಯಾವಾಗ ಶಾಸಕರು, ಮಂತ್ರಿ ಆದರೋ ಆಗ ಅವರಿಗೆ ದುಡ್ಡಿನ ಮತ್ತು ಅಧಿಕಾರದ ಪಿತ್ತ ನೆತ್ತಿಗೇರಿತು. ಆವಾಗಿನಿಂದ ಮತದಾರರ ಸಂಪರ್ಕವನ್ನೇ ಕಳೆದುಕೊಂಡರು ಎನ್ನುವ ದೂರು ಇದೆ.

ಮತ್ತೊಂದು ಸಂಗತಿ ಎಂದರೆ, ಸಚಿವೆ ಎಲ್ಲವನ್ನೂ ತಮ್ಮ ಪಿಎಗಳ ಮೂಲಕ ನಿಭಾಯಿಸತೊಡಗಿದರು.ಆದರೆ ಆ ಕೆಲ ಪಿಎಗಳು ಮಾಡಿದ ಯಡವಟ್ಟುಗಳು ಸಚಿವೆಗೆ ಮುಳುವಾದವು.
ಅಚ್ಚರಿ ಸಂಗತಿ ಎಂದರೆ, ಸಚಿವರು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟದಿಂದ ಸ್ಟೇ ತಂದಿದ್ದರು.ಅದು ಬೆಳಗಾವಿ ಪತ್ರಕರ್ತರಿಗೆ ಗೊತ್ತಿರಲಿಲ್ಲ. ಆದರೆ ಪಿಎ ಎನ್ನುವವರೊಬ್ಬರು ಬೇರೆ ಪ್ರಕರಣ ಉಲ್ಲೇಖಿಸಿ ಈ ಸ್ಟೇ ಪ್ರತಿಯನ್ನು ಮಾಧ್ಯಮ ಗ್ರುಪನಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದರು.
ಕನಸು ಭಗ್ನ
ಜಾರಕಿಹೊಳಿ ಕುಟುಂಬಕ್ಕೆ ಸರಿಸಮಾನವಾಗಿ ರಾಜಕೀಯವಾಗಿ ಬೆಳೆಯಬೇಕು ಎನ್ನುವ ಕನಸು ಕಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕನಸು ಭಗ್ನವಾಗಿದೆ.
ರಾಜ್ಯ ರಾಜಕಾರಣ ಬಂದಾಗ ಜಾರಕಿಹೊಳಿ ಕುಟುಂಬ ಯಾವಾಗಲೂ ಶಕ್ತಿ ಕೇಂದ್ರ ಎನಿಸಿಕೊಳ್ಳುತ್ತಿತ್ತು, ಅಂದರೆ ಒಂದು ಸರ್ಕಾರ ರಚಿಸುವಷ್ಟು ಮತ್ತು ಬೀಳಿಸುವಷ್ಟು ಶಕ್ತಿ ಈ ಕುಟುಂಬಕ್ಕಿತ್ತು,
ಅದೇ ರೀತಿ ಹೆಬ್ಬಾಳಕರ ಕುಟುಂಬ ಕೂಡ ಒಂದು ಶಕ್ತಿ ಕೇಂದ್ರವಾಗಬೇಕು ಎನ್ನುವ ಕನಸನ್ನು ಸಚಿವೆ ಹೆಬ್ಬಾಳಕರ ಕಂಡಿದ್ದರು.
ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಕುಟುಂಬದಲ್ಲಿದ್ದಂತೆ ಸಚಿವರು ಸೇರಿದಂತೆ ಇಬ್ಬರು ಶಾಸಕರು ಮತ್ತು ಒಬ್ಬ ಎಂಎಲ್ಸಿ ಆಗಬೇಕು ಎಂದು ಅಂದುಕೊಂಡರು, ಅದಕ್ಕೆ ತಕ್ಕಂತೆ ತಾನು ಸಚಿವೆಯಾಗಿದ್ದಲ್ಲದೇ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಎಂಎಲ್ಸಿ ಮಾಡಿದರು, ಈಗ ಪ್ರಿಯಾಣಕಾ ಜಾರಕಿಹೊಳಿ ಸಂಸದರಾದರೆ ನನ್ನ ಮಗ ಮೃನಾಲ್ ಕೂಡ ಸಂಸದರಾಗಬೇಕು ಎಂದು ಕನಸು ಕಂಡರು,
ಅದೇ ಕಾರಣದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕರ್ತರನ್ನು ಬದಿಗೊತ್ತಿ ತಮ್ಮ ಪುತ್ರನನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಿದರು.

ಆದರೆ ಚಿಕ್ಕೊಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಗೆದ್ದು ದೆಹಲಿ ಸಂಸತ್ ಭವನ ಕಟ್ಟೆ ಹತ್ತಿದರು, ಇತ್ತ ಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್ ಹೆಬ್ಬಾಳಕರ ಸೋತು ಮನೆ ದಾರಿ ಹಿಡಿದರು,
ಹಠವಾದಿ..! ಬೆಳಗಾವಿ ರಾಜಕಾರಣದಲ್ಲಿ ಜಿದ್ದಿನ ರಾಜಕಾರಣ ಮಾಡುತ್ತ ಬಂದಿರುವ ಸಚಿವೆ ಹೆಬ್ಬಾಳಕರ ಒಳಗಿಂದೊಳಗೆ ಜಾರಕಿಹೊಳಿ ಕುಟುಂಬದ ವಿರುದ್ಶ ಮಸಲತ್ತು ನಡೆಸುತ್ತ ಬಂದಿದ್ದಾರೆ ಎನ್ನುವುದು ಸುಳ್ಳಲ್ಲ.
ಈ ಜಿದ್ದಿನ ರಾಜಕಾರಣದ ಮುನಿಸು ಹಿಂದೊಮ್ಮೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನಿಯ.