ಮಹಾನಗರ ಪಾಲಿಕೆ ನಗರಸೇವಕಿ ಪತಿ ಮೇಲೆ ಹಲ್ಲೆ.
ಹಲ್ಲೆ ಪ್ರಕರಣದಲ್ಲಿ ಸತ್ಯ ಮರೆಮಾಚಲು ಯತ್ನಿಸಿದರೇ ಪೊಲೀಸರು.?
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾಗೆ ಗುಬ್ಬಿ ಕಥೆ ಹೇಳಲಾಯಿತೇ?
ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ದಂಧೆಗಳನ್ನು ಗಮನಿಸಿದರೆ ಹೆಡಮುರಿ ಕಟ್ಟಲು ಮುಂದಾಗಬೇಕಿದ್ದ ಪೊಲೀಸರ ಕೈಗಳನ್ನು ಬಲವಾಗಿ ಕಟ್ಟಿ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕುಂದಾನಗರಿ ಜತೆಗೆ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊತ್ತ ಬೆಳಗಾವಿ ಹೆಸರಿಗೆ ಈ ಪರಿ ಕಳಂಕ ಬರುವ ಹಾಗೆ ಖಾಕಿಧಾರಿಗಳು ಯಾಕೆ ಕೈಕಟ್ಟಿಕೊಂಡು ಕುಳಿತರು ಎನ್ನುವ ಬಹುದೊಡ್ಡ ಪ್ರಶ್ನೆ ಇಲ್ಲಿನವರನ್ನು ಕಾಡುತ್ತಿದೆ.

ಸಧ್ನ ಏನಾಗಿದೆ ಅಂದ್ರೆ, ಬೆಳಗಾವಿ ತುಂಬ ಅದರಲ್ಲೂ ಗ್ರಾಮೀಣ ಕ್ಷೇತ್ರದಲ್ಲಿ ಅಕ್ರಮ ದಂಧೆಯ ಅಡ್ಡೆಗಳು ತೆರೆದುಕೊಂಡಿವೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ, ಸುವರ್ಣ ಸೌಧ ಹತ್ತಿರ ಇರುವ ಕೆಲವೊಙದು ದಾಭಾಗಳಲ್ಲಿ ಕೂಡ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರಿದೆ. ಈ ದಂಧೆಯ ಬಗ್ಗೆ ಪೊಲೀಸರಿಗೆ ಗೊತ್ತಿಲ್ಲ ಎಂದಿಲ್ಲ.ಇಲ್ಕಿ ಅವರು ಕಣ್ಣಿದ್ದು ಕುರುಡರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ನಗರಸೇವಕಿ ಪತಿ ಮೇಲೆ ಹಲ್ಲೆ
`ಕಾಗೆ ಗುಬ್ಬಿ ಕಥೆ’ ಕಟ್ಟಿದ ಪೊಲೀಸರು.?
ಮಹಾನಗರ ಪಾಲಿಕೆ ಸದಸ್ಯೆ ಪತಿ ರಾಜು ಕಡೋಲ್ಕರ ಮೇಲೆ ಕಳೆದ ದಿನ ಚುರಮರಿ ಬಳಿ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.
ಹಲ್ಲೆಯಲ್ಲಿ ಗಾಯಗೊಂಡ ಕಡೋಲ್ಕರ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೊಳಗಾದ ರಾಜು ಕಡೋಲ್ಕರ ಪತ್ನಿ ಜ್ಯೋತಿ ಕಡೋಲ್ಕರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಸೇವಕಿಯಾಗಿದ್ದಾರೆ.
ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಪೊಲೀಸರು ಹಿರಿಯ ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಕ್ರಮ ದಂಧೆ ತವರೂರು..!
ಬೆಳಗಾವಿ ತಾಲುಕಿನ ದೇಸೂರು, ಚುರಮರಿ, ಬೆನ್ನಾಳಿ, ಹಿರೆಬಾಗೇವಾಡಿ,, ಕಾಕತಿ, ಸಾಂಬ್ರಾ, ತಾರಿಹಾಳ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಯಾರದೇ ಹಂಗಿಲ್ಲದೆ ಅಕ್ರಮ ದಂಧೆಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ, ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ಗೋವಾ ಮಾದರಿಯಲ್ಲಿ ಕ್ಯಾಸಿನೋ ಆರಂಭವಾಗಿತ್ತಂತೆ, ಆದರೆ ಅದು ಕಳೆದ ಹದಿನೈದು ದಿನಗಳಿಂದ ಬಂದ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ,
ಕೊಲ್ಲಾಪುರ ಮೂಲದ ವ್ಯಕ್ತಿಯೊಬ್ಬ ಈ ಕ್ಯಾಸಿನೋ ನಡೆಸುವ ಜವಾಬ್ದಾರಿ ಹೊತ್ತಿದ್ದನು ಎನ್ನಲಾಗಿದೆ.
ಈ ದಂಧೆಯಲ್ಲಿ ಗುರುತರ ಆರೋಪ ಹೊತ್ತವರೇ ತೊಡಗಿದ್ದಾರೆಂದು ಹೇಳಲಾಗುತ್ತಿದೆ.
ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಇರುವ ಕೆಲವೊಂದು ದಾಭಾಗಳಲ್ಲಿ ಕೂಡ ಅಕ್ರಮ ದಂಧೆಗಳು ನಡೆಯುತ್ತವೆ ಎನ್ನುವ ದೂರು ಕೇಳಿ ಬರುತ್ತಿದೆ.
ಕಾಗೆ ಗುಬ್ಬಿ ಕಥೆ
ಕಳೆದ ದಿನ ನಗರಸೇವಕಿ ಪತಿ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಈಗ ಕಾಗೆ ಗುಬ್ಬಿ ಕಥೆ ಹೇಳುತ್ತ ಹೊರಟಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ,