ಬೆಳಗಾವಿ. ಇವರು ಇನ್ನುಳಿದ ರಾಜಕಾರಣಿಗಳಂತೆ ಜನರ ಮುಂದೆ ಅಪ್ಪಾ, ಅಣ್ಣಾ ಎಂದು ಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ.
ಐಷರಾಮಿ ಕಾರಿನಿಂದಲೇ ಇಳಿದು ಕೈಬೀಸಿ ತೋರಿಕೆಗೆ ಎನ್ನುವಂತೆ ಅಹವಾಲು ಕೇಳಲ್ಲ. ಏನೇ ಇದ್ದರೂ ನೇರಾ ನೇರ ಮಾತು, ಹಳ್ಳಿ ಮಾತಿನಲ್ಲಿ ಹೇಳಬೇಕೆಂದರೆ `ಏಕ್ ಮಾರ್ ದೋ ತುಕಡಾ’ ತರಹ ಮಾತು. ಇಷ್ಟೆಲ್ಲ ವಿವರಣೆ ಕೊಟ್ಟ ಮೇಲೆ ಇವರು ಯಾವೂರು ಶಾಸಕರು ಎನ್ನುವುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಅವರ ಹೆಸರು ಅಭಯ ಪಾಟೀಲ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು.
ಸಂಘ ಮತ್ತು ಪಕ್ಷ ನಿಷ್ಠೆ ಹೊಂದಿದ ಇವರನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣಕ್ಕೆ ಉಸ್ತುವಾರಿಯಾಗಿ ಕಳಿಸಲಾಗಿತ್ತು. ಆದರೆ ಅಲ್ಲಿ ಝಿರೋದಿಂದ ಸಂಘಟನೆ ಶುರುಮಾಡಿ ಪಕ್ಷಕ್ಕೆ ಒಂದು ಗೌರವ ತಂದು ಕೊಡುವ ಕೆಲಸ ಮಾಡಿದರು, ಅದೆಲ್ಲ ಬಿಡಿ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ತಪ್ಪಿಸುವ ನಿಟ್ಟಿನಲ್ಲಿ ವಿರೋಧಿಗಳು ಮಾಡಿದ ಕಸರತ್ತು ಎಷ್ಟಿತ್ತು ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಿಲ್ಲ.
ಇವರ ಮಾತು ಒರಟ ಆದರೂ ಅಭಿವೃದ್ಧಿ ಕೆಲಸಕ್ಕೆ ನಿಂತರೆ ಹಿಂದೆ ಮುಂದೆ ನೋಡಲ್ಲ.
ಇದೇ ಕಾರಣದಿಂದ ಬೆಳಗಾವಿ ದಕ್ಷಿಣ ಕ್ಷೇತ್ರದ ಜನ ಅಭಯ ಪಾಟೀಲರ ಕೈ ಬಿಡಲಿಲ್ಲ ಎನ್ನುವುದು ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ.
20 ಕಿಮಿ ಸಂಚಾರ ಶಾಸಕ ಅಭಯ ಪಾಟೀಲರು ತಮ್ಮ ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ನಡೆಸಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು.
ಬೆಳಿಗ್ಗೆ 6.30 ಕ್ಕೆ ಆರಂಭಗೊಂಡ ಸೈಕಲ್ ಫೇರಿ ಮೂಲಕ ಸುಮಾರು 20 ಕಿಲೋ ಮೀಟರ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಬಹುತೇಕ ಕಡೆಗೆ ಸ್ಮಾರ್ಟ ಸಿಟಿ, ಎಲ್ ಆ್ಯಂಡ್ ಟಿ ಕಂಪನಿ ನಡೆಸಿರುವ ಕಾಮಗಾರಿ ಬಗ್ಗೆ ವೀಕ್ಷಣೆ ಮಾಡಿದರು, ಈ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಶಾಸಕ ಅಭಯ ಪಾಟೀಲರು ಅಲ್ಲಿಯೇ ಅಧಿಕಾರಿಗಳಿಗೆ ತಾಕೀತು ಕೊಡುವ ಕೆಲಸ ಕುಡ ಮಾಡಿದರು. ರಾಣಿ ಚನ್ನಮ್ಮ ನಗರ, ರಾಘವೇಂದ್ರ ಕಾಲೋನಿ,ಟಿಳಕವಾಡಿ, ಚಿದಂಬರ ನಗರ, ಸೇರಿದಂತೆ ಮತ್ತಿತರ ಕಡೆಗೆ ಸಂಚೆರಿಸಿ ಅಹವಾಲು ಆಲಿಸಿದರು,
ಕ್ರಿಮಿನಲ್ ಕೇಸ್ ಹಾಕಿ ಇದೇ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿಯೊಬ್ಬರು ಕೆಲ ದಿನಗಳ ಹಿಂದೆ ಸ್ವಚ್ಚತೆಗೆಂದು ಹೋಗಿದ್ದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡ ಮೇಲಿರುವ ಕೆಲವರು ಕಸವನ್ನು ನಮ್ಮ ತೆಲೆಯ ಮೇಲೆ ಎಸೆದರು ಎಂದು ಹೇಳಿದರು.
ಇದನ್ನು ಗಂಭೀರವಾಗಿಯೇ ಆಲಿಸಿದ ಶಾಸಕ ಅಭಯ ಪಾಟೀಲರು ಅಂತಹವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು,
ಒಳಚರಂಡಿ ದುರಸ್ತಿಗೆ ಸೂಚನೆ ಟಿಳಕವಾಡಿ ಪ್ರದೇಶದಲ್ಲಿ ಬಾವಿಗಳಿಗೆ ಚರಂಡಿ ನೀರು ಸೇರುತ್ತಿದೆ, ಅದನ್ನು ದುರಸ್ತಿ ಮಾಡಿಸಿಕೊಡಿ ಎಂದು ಜನರು ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಶಾಸಕರು ಅಲ್ಲಿಯೇ ಇದ್ದ ಅಧಿಕಾರಿಗಳಿಗೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು,. ಒಂದು ವೇಳೆ ಅಲ್ಲಿನ ಪೈಪ್ ಲೈನ್ ಬದಲಾವಣೆ ಮಾಡಬೇಕಿದ್ದರೆ ಅದರ ಅಂದಾಜು ವೆಚ್ಚ ತಯಾರಿಸಿ ಕಳಿಸಿ ಎಂದು ಸೂಚನೆ ನೀಡಿದರು,
ಸ್ವಚ್ಚತೆಗೆ ಆಧ್ಯತೆ ಕೊಡಿ.. ಇಂದು ಸಂಚರಿಸಿದ ಬಹುತೇಕ ಕಡೆಗೆ ಕೆಲವರು ಸ್ವಚ್ಚತೆಗೆ ಬಗ್ಗೆ ತಕರಾರರು ಮಾಡಿದರು, ಮನೆ ಮನೆ ಕಸ ತೆಗೆದುಕೊಂಡು ಹೋಗಲು ಸರಿಯಾಗಿ ಬರುವುದಿಲ್ಲ ಎನ್ನುವುದು ಸೇರಿದಂತೆ ಭಂಗಿಬೋಳ ಸ್ವಚ್ಚತೆ ಕೂಡ ಮಾಡುವುದಿಲ್ಲ ಎಂಬುದನ್ನು ಶಾಸಕರ ಗಮನಕ್ಕೆ ತಂದರು, ವಾರ್ಡ ನಂಬರ 43 ರ ಟಿಳಕವಾಡಿಯಲ್ಲಿ ಜನ ಕೂಡ ಭಂಗಿಬೋಳ ಸ್ವಚ್ಚತೆ ಬಗ್ಗೆ ಪ್ರಸ್ತಾಪಿಸಿದಾಗ ಅಲ್ಲಿಯೇ ಇದ್ದ ನಗರಸೇವಕಿ ಮೇಲಿಂದ ಮೇಲೆ ಅದನ್ನು ಸ್ವಚ್ಚ ಮಾಡಿಸಲಾಗುತ್ತಿದೆ, ಆದರೆ ಕೆಲವರು ಮತ್ತೇ ಅಲ್ಲಿಯೇ ಕಸ ಎಸೆಯುತ್ತಾರೆ ಎಂದು ಹೇಳಿದರು,
ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಭಯ ಪಾಟೀಲರು, ಮುಖ್ಯ ರಸ್ತೆಯಲ್ಲಿದ್ದ ಕಸವನ್ನು ನಿತ್ಯ ಸ್ವಚ್ಚಗೊಳಿಸಬಹುದು, ಆದರೆ ಭಂಗಿಬೋಳವನ್ನು ಒಮ್ಮೆ ಸ್ವಚ್ಚಗೊಳಿಸಿದ ಮೇಲೆ ಅದನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಅಲ್ಲಿನ ನಿವಾಸಿಗಳದ್ದು ಎಂದು ಸ್ಪಷ್ಟಪಡಿಸಿದರು.
ಉಪಮೇಯರ್ ಆನಂದ ಚವ್ಹಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ, ಜಯಂತ ಜಾಧವ,ರಾಜು ಭಾತಖಾಂಡೆ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು,