ಶಾಸಕ ಅಭಯ ಪಾಟೀಲ ಬಂಧನ ಬಿಡುಗಡೆ

ಶಾಸಕ ಅಭಯ ಪಾಟೀಲ ಸೇರಿದಂತೆ ಮುಖಂಡರ ಬಂಧನ, ಬಿಡುಗಡೆ
ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ:
ಕಾಂಗ್ರೆಸ್ ಕಚೇರಿಗೆ ಎದುರು ಬಿಜೆಪಿ ಪ್ರತಿಭಟನೆ

ಬೆಳಗಾವಿ:
ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ದಿನವನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.


ಅಲ್ಲದೇ, ಕಾಂಗ್ರೆಸ್ ಕ್ಷಮೆ ಕೋರಬೇಕೆಂಬ ಭಿತ್ತಿ ಪತ್ರಗಳನ್ನು ಕಾಂಗ್ರೆಸ್ ಕಚೇರಿಗೆ ಅಂಟಿಸಲು ಹೊರಟಿದ್ದ ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಇಂದಿರಾ ಗಾಂಧಿಯವರು ದೇಶದಲ್ಲಿ ತುತರ್ು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ನಗರದ ಪ್ರವಾಸಿ ಮಂದಿರದಿಂದ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಸಂಗೊಳ್ಳಿ ರಾಯಣ್ಣ ಸರ್ಕಲ್ ದಲ್ಲಿನ ಕಾಂಗ್ರೆಸ್ ಕಚೇರಿವರೆಗೂ ಮೆರವಣಿಗೆ ನಡೆಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

MLA ABHAY PATIL PRESS MEET


ಸಂವಿಧಾನವನ್ನು ಬಿಜೆಪಿ ಬದಲಿಸುತ್ತದೆ ಎಂದು ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ುನ ಖಗರ್ೆಯವರು ಮೊದಲು ದೇಶದ ಕ್ಷಮೆ ಕೇಳಬೇಕು. ದೇಶದಲ್ಲಿ ತುತರ್ು ಪರಿಸ್ಥಿತಿ ಹೇರುವ ಮೂಲಕ ಇಂದಿರಾ ಗಾಂಧಿಯವರು ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಚಾರ ಬಗೆದಿದ್ದರು. ಹೀಗಾಗಿ, ಕಾಂಗ್ರೆಸ್ ನವರು ದೇಶದ ಜನರ ಕ್ಷಮೆಯಾಚಿಸಬೇಕೆಂದರು


ರಾಹುಲ್ ಗಾಂಧಿ ದೇಶವಾಸಿಗಳಲ್ಲಿ ಕ್ಷಮೆ ಕೇಳಬೇಕೆಂಬ ಭಿತ್ತಿ ಪತ್ರಗಳನ್ನು ಕಾಂಗ್ರೆಸ್ ಕಚೇರಿಗೆ ಅಂಟಿಸಲು ಮುಂದಾದ ಶಾಸಕ ಅಭಯ ಪಾಟೀಲ, ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ್ ಪಾಟೀಲ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬಂಧಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿಮರ್ಾಣವಾಯಿತು. ಆದರೆ, ಪೊಲೀಸರು ಶಾಸಕ ಅಭಯ ಪಾಟೀಲ ಸೇರಿದಂತೆ ಎಲ್ಲರನ್ನೂ ಬಲವಂತವಾಗಿ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಹಾಕಿಕೊಂಡು ಹೋದರು.


ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಸಂವಿಧಾನದ ಅಂಶಗಳನ್ನು ಗಾಳಿಗೆ ತೂರಿ 1975 ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ನವರು ಸಂವಿಧಾನ ಬಗ್ಗೆ ನಮಗೆ ಬುದ್ದಿವಾದ ಹೇಳಲು ಬರುತ್ತಿದ್ದಾರೆ. ತುತರ್ು ಪರಿಸ್ಥಿತಿ ಸಂದರ್ಭದಲ್ಲಿ 1 ಲಕ್ಷ 40 ಸಾವಿರ ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿ ಹಿಟ್ಲರ್ ರೀತಿ ಆಡಳಿತ ನಡೆಸಿದ್ದರು ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಮಾತನಾಡಿದರು.

ಸುಭಾಷ್ ಪಾಟೀಲ್, ಪಾಲಿಕೆಯ ಬಿಜೆಪಿ ನಗರಸೇವಕರು ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.


ಸಿದ್ಧರಾಮಯ್ಯ ಈಗ ಮೌನಿ ಬಾಬಾ..

ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮೌನಿ ಬಾಬಾ ಆಗಿದ್ದಾರೆ. ನೀರು ನಿನ್ನ ಬಣ್ಣ ಹೇಗೆ ಅಂದ್ರೆ ಸಿಕ್ಕ ಹಾಗೆ ಎಂಬಂತೆ ಸಿಎಂ ಸಿದ್ಧರಾಮಯ್ಯ ಮೌನಿಯಾಗಿದ್ದು, ಮೊದಲಿನ ಸಿದ್ದರಾಮಯ್ಯ ಈಗ ಉಳಿದಿಲ್ಲ.
ಅಭಯ್ ಪಾಟೀಲ್,
ಶಾಸಕರು.

Leave a Reply

Your email address will not be published. Required fields are marked *

error: Content is protected !!