ಅಧಿವೇಶನ ನಂತರ ವರ್ಗಾವಣೆ ಸುಗ್ಗಿ

ಬೆಳಗಾವಿ. ಚುನಾವಣೆ ನಂತರ ಮತ್ತೇ ಕರ್ತವ್ಯಕ್ಕೆ ಹಾಜರಾಗಿರುವ ಅಧಿಕಾರಿಗಳು ತಮ್ನ ಕುರ್ಚಿ ಉಳಿಸಿಕೊಳ್ಳಲು ಮತ್ತೊಮ್ಮೆ ಸರ್ಕಸ್ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು.

ಕಳೆದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ವರ್ಗಾವಣೆಗೊಂಡಿದ್ದರು. ಚುನಾವಣೆ ಮುಗಿದ ನಂತರ ಅವರೆಲ್ಲರೂ ಮತ್ತೆ ತಮ್ಮ ಸ್ಥಾನಕ್ಕೆ ಬಂದಿದ್ದರು

ಆದರೆ ಈಗ ಆ ಕುರ್ಚಿಗಳು ಮತ್ತೆ ಅಲ್ಲಾಡುವ ಲಕ್ಷಣಗಳು ಕಾಣಸಿಗುತ್ತಿವೆ.

ಪೊಲೀಸ್, ಕಂದಾಯ ಇಲಾಖೆಯಲ್ಲಿಯೇ ಹೆಚ್ಚು ಕುರ್ಚಿಗಳು ಅದಲು ಬದಲಾಗುವ ಸಾಧ್ಯತೆಗಳಿವೆ. ಇಲ್ಲಿ ಆಡಳಿತ ಪಕ್ಷದ ರಾಜಕಾರಣಿಗಳ ಹಿತ ಕಾಯ್ದುಕೊಂಡವರು ತಮ್ನ ಕುರ್ಚಿ ಉಳಿಸಿ ಕೊಳ್ಳಬಹುದು. ಇಲ್ಲದಿದ್ದರೆ ಎತ್ತಂಗಡಿ ಗ್ಯಾರಂಟಿ.

ಗಮನಿಸಬೇಕಾದ ಸಂಗತಿ ಎಂದರೆ ಇಂತಹ ವರ್ಗಾವರ್ಗಿ ಕುರಿತಂತೆ ಶಿಫಾರಸ್ಸು ಪತ್ರವನ್ನು ಮಂತ್ರಿಗಳಿಂದ ಕೊಡಿಸಲು ಟೆಂಪ್ರರಿ ಪಿಎಗಳು ಹುಟ್ಟಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿ ಕೆಲ ಮಂತ್ರಿಗಳ ಹತ್ತಿರ ವರ್ಗಾವರ್ಗಿಗೆ ಹೋದರೆ ಅವರು ಮೊದಲು ‘ಅವರನ್ನು’ ಭೆಟ್ಟಿ ಮಾಡಿ ಎಂದು ಸಲಹೆ ಕೊಡುತ್ತಾರೆ. ಇದರ ಅರ್ಥ ಊಹಿಸಿಕೊಳ್ಳೋರಿಗೆ ಬಿಟ್ಟಿದ್ದು.

ಮೂಲಗಳ ಪ್ರಕಾರ ಬೆಳಗಾವಿ ನಗರದಲ್ಲಿ ಕನಿಷ್ಟ 5 ರಿಂದ 6 CPI ಮತ್ತು ಇಬ್ಬರು ಎಸಿಪಿಗಳ ಕುರ್ಚಿ ಅಲ್ಲಾಡುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!