ಹಿರೇಬಾಗೇವಾಡಿ ಗುಡ್ಡದ ಮಲ್ಲಪ್ಪನಜಾಗೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ.
ಅವೈಜ್ಞಾನಿಕವಾಗಿ ನಡೆದ ಕಾಮಗಾರಿ.
ಎಲ್ಲೆಂದರಲ್ಲಿ ಜೆಸಿಬಿಯಿಂದ ತೆಗ್ಗು ಅಗೆತ. ಗುಡ್ಡದ ಕೆಳಗಿರುವ ಜಮೀನುಗಳಲ್ಲಿ ನುಗ್ಗಿದ ನೀರು.
ಹೊಂಡಗಳಾಗಿ ಪರಿವರ್ತನೆಯಾದ ಜಮೀನುಗಳು .ನ್ಯಾಯಕ್ಕಾಗಿ ಆರ್ ಸಿಯು ಮೊರೆ ಹೋದ ರೈತರು.
ಬೆಳಗಾವಿ.
ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗುಡ್ಡದ ಬಳಿ ನಿಮರ್ಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಹರಿದು ಬಂದು ನೀರಿನಿಂದ ಫಲವತ್ತಾದ ಮಣ್ಣಿನ ಜೊತೆಗೆ ಬೆಳೆ ಕೂಡ ಕೊಚ್ಚಿಕೊಂಡು ಹೋಗುತ್ತಿದೆ,
ಈ ಹಿನ್ನೆಲೆಯಲ್ಲಿಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿ ಪರ ಹೋರಾಟ ಸಮಿತಿಯವರು ವಿವಿಯ ಕುಲಪತಿಯವರಿಗೆ ಮನವಿ ಪತ್ರ ಅರ್ಪಿಸಿದ್ದಾರೆ.
ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ನೂರಾರು ಎಕರೆ ಜಾಗೆಯಲ್ಲಿ ಕಟ್ಟಡ ನಿರ್ಮಣಕ್ಕಾಗಿ ಎಲ್ಲೆಂ ದರಲ್ಲಿ ಜೆಸಿಬಿಯಿಂದ ತೆಗ್ಗು ತೆಗೆಯಲಾಗಿದೆ,
ಆದರೆ ಈಗ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆ ತೆಗ್ಗಿನಲ್ಲಿ ನೀರು ತುಂಬಿ ಅದು ಗುಡ್ಡದ ಕೆಳಗಿರುವ ಜಮೀನುಗಳಿಗೆ ನುಗ್ಗಿದ್ದರಿಂದ ಬೆಳೆ ಹಾನಿ ಆಗುತ್ತಿದೆ ಎಂದು ರೈತರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಅವೈಜ್ಞಾನಿಕ ಕಾಮಗಾರಿಯೇ ಈ ಅನಾಹುತಕ್ಕೆ ಕಾರಣವಾಗಿದೆ, ಹೀಗಾಗಿ ಗುಡ್ಡದ ಕೆಳಗೆ ಇರುವ ಜಮೀನುಗಳು ಹೊಂಡಗಳಾಗಿ ಪರಿವರ್ತನೆಯಾಗಿವೆ ಎಂದು ಕುಲಪತಿಯವರಿಗೆ ತಿಳಿಸಲಾಗಿದೆ,
ರೈತರೆ ಈ ದೇಶದ ಬೆನ್ನೆಲಬು ಎಂದು ಹೇಳಲಾಗುತ್ತದೆ. ಆದರೆ ಅದು ಕಾರ್ಯರೂಪದಲ್ಲಿ ಬರುತ್ತಿಲ್ಲ ಎಮದು ಮನವಿ ಪತ್ರದಲ್ಲಿ ವಿಷಾದಿಸಲಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಕೆಲ ವಿಷಯಗಳಲ್ಲಿ ಜನರು ರಾಜಕಾರಣಿಗಳನ್ನು ನಂಬುವುದು ಕೂಡ ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಈ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯ”ವು ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬರುವಲ್ಲಿ ದಶಕಗಳ ಹೋರಾಟದ ಇತಿಹಾಸವಿದೆ. ರೈತರು ಎಲ್ಲ ರೀತಿಯಿಂದ ಸಹಕಾರ ಕೊಟ್ಟಿದ್ದಾರೆ. ಆದ್ದರಿಂದ ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಆರ್ಸಿಯುದವರು ರೈತರಿಗೆ ಆಗುತ್ತಿರುವಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಬಿ.ಎಸ್. ಗಾಣಗಿ, ಮಂಜುನಾಥ ವಸ್ತ್ರದ, ಸಂಜಯ ದೇಸಾಯಿ,ಆನಂದ ನಂದಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.