27 ಕ್ಕೆ ಪಾಲಿಕೆ ವಿಶೇಷ ಸಭೆ ನಿಗದಿ 29 ಕ್ಕೆ ಆಯುಕ್ತರಿಗೆ ಮತ್ತೇ ಕೋರ್ಟ್ ಗೆ ಬುಲಾವ್.
20 ಕೋಟಿ ಪರಿಹಾರ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಗ್ಯಾರಂಟಿ.
27 ರ ವಿಶೇಷ ಸಭೆಯಲ್ಲಿ ಚರ್ಚೆ ಎಂದ ಪಾಲಿಕೆ.
ಕಂತು ರೂಪದಲ್ಲಿ ಪರಿಹಾರ ಪಾವತಿಗೆ ಸಮಯ ಕೇಳುವ ಸಾಧ್ಯತೆ.
ಬೆಳಗಾವಿ:
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಪಾಲಿಕೆಗೆ ಶನಿ ಹೆಗಲೇರಿ ಕುಳಿತಂತಾಗಿದೆ.
ಮೂಲಗಳ ಪ್ರಕಾರ ಬೆಳಗಾವಿ ಮಹಾನಗರ ಪಾಲಿಕೆಯು ಬರೊಬ್ಬರಿ 7 ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದೆ.
ಬೆಳಗಾವಿ ಶಹಾಪುರ ಭಾಗದ 20 ಕೋಟಿ ಪರಿಹಾರ ಪಾವತಿ ಸಂಬಂಧ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಪಾಲಿಕೆ ಆಯುಕ್ತರು ಈಗ ಇದೇ ದಿ. ೨೭ ರಂದು ವಿಶೇಷ ಸಭೆ ಕರೆಯಲಾಗಿದೆ ಎನ್ನುವ ಪತ್ರ ಕೊಟ್ಟು ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ.
ಆದರೆ ಧಾರವಾಡ ಹೈಕೋರ್ಟ್ ದಿ. 27 ರಂದಿನ ಸಭೆ ಮುಗಿಸಿ ದಿ.29 ರಂದು ಮತ್ತೇ ಕೋರ್ಟ್ ಗೆ ಹಾಜರಾಗಬೇಕು ವಿವರ ಸಮೇತ ಹಾಜರಾಗಬೇಕೆಂದು ಸೂಚನೆ ನೀಡಿದೆ.
ಹೀಗಾಗಿ ಇದೇ ದಿ. ೨೭ ರಂದು ಕರೆಯಲಾದ ವಿಶೇಷ ಸಭೆಯಲ್ಲಿ 20 ಕೋಟಿ ರೂ ಹಣವನ್ನು ಯಾವ ರೀತಿ ಕೊಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ.
ಹೀಗಾಗಿ ಅದನ್ನು ಪಾಲಿಕೆಯಿಂದಲೇ ಪಾವತಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.

ಮತ್ತೊಂದು ಸಂಗತಿ ಎಂದರೆ, ಇಲ್ಲಿ ಆ ಪರಿಹಾರವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಪಾಲಿಕೆ ವಿರುದ್ಧವೇ ನ್ಯಾಯಾಂಗ ನಿಂದನೆ ಪ್ರಕರಣ ಆಗುತ್ತದೆ. ಆಗ ಕೋರ್ಟ್ ಮುಂದಿನ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ.
ರಾಜ್ಯ ಸರ್ಕಾರವು ಕೂಡ ಪಾಲಿಕೆಯ ಸಂಪನ್ಮೂಲಗಳನ್ಬು ಕ್ರೋಢೀಕರಿಸಿ ಪರಿಹಾರ ಪಾವತಿಸಬೇಕೆಂದು ಆದೇಶ ಮಾಡಿದೆ.

ಇದೆಲ್ಲದರ ನಡುವೆ ಸುಮಾರು ೭೦ ಲಕ್ಷ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತರ ಕಾರನ್ಬು ಜಪ್ತಿ ಮಾಡಲಾಗಿದೆ.
