ಪಾಲಿಕೆ ಮೇಲೆ ನ್ಯಾಯಾಂಗ ನಿಂದನಾ ಅರ್ಜಿ
ವಿಶೇಷ ಸಭೆಯಲ್ಲಿ ಏನಾಗಲಿದೆ ತೀರ್ಮಾನ?
20 ಕೋಟಿ ಪರಿಹಾರ ಚರ್ಚೆ. ಅತೀ ಬುದ್ದಿವಂತಿಕೆ ಉಪಯೋಗಿಸಿದರೆ ಕಳಚಲಿದೆ ನಿಂದನಾ ಅರ್ಜಿ .
ಇನ್ನೂ ಎಷ್ಟು ಇಂತಹ ಅರ್ಜಿಗಳಿವೆ? ಏನ್ ಮಾಡುತ್ತದೆ ಮಹಾನಗರ ಪಾಲಿಕೆ.?
20 ಕೋಟಿ ರೂ ಪರಿಹಾರ..ಇದು ಹಳೆಯ ಕೇಸ್
ಬೆಳಗಾವಿ.
ಭೂ ಪರಿಹಾರಕ್ಕೆ ಸಂಬಂಧಿಸಿದಂತೆ 20 ಕೋಟಿ ರೂ ಪರಿಹಾರ ಕೊಡುವ ವಿಷಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಮಹಾನಗರ ಪಾಲಿಕೆಯ ಮುಂದಿನ ನಡೆ ಏನು?
ಈ ಹಿನ್ನೆಲೆಯಲ್ಲಿ ಮಂಗಳವಾರ ದಿ, 27 ರಂದು ಕರೆಯಲಾದ ಪಾಲಿಕೆಯ ವಿಶೇಷ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುವ ಬಹುದೊಡ್ಡ ಪ್ರಶ್ನೆ ಬೆಳಗಾವಿಗರನ್ನು ಕಾಡುತ್ತಿದೆ.
ಇಲ್ಲಿ ಕೋರ್ಟ ಆದೇಶದ ಪ್ರಕಾರ ಕೋರ್ಟ ಮೆಟ್ಟಿಲು ಹತ್ತಿದವರಿಗೆ ಪ;ರಿಹಾರ ಧನ ಸಂದಾಯ ಮಾಡಲೇಬೇಕು,
ಆದರೆ ಇಲ್ಲಿ ಅತೀ ಬುದ್ದಿವಂತಿಕೆ ಉಪಯೋಗಿಸಿ ಕೊಕ್ಕೆ ಹಾಕುವ ಪ್ರಯತ್ನವಾದರೆ ಪಾಲಿಕೆ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ ಕಳಚಿ ಬೀಳುವುದರಲ್ಲಿ ಅನುಮಾನವೇ ಇಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ಇದೇ ಮಹಾನಗರ ಪಾಲಿಕೆ ಇನ್ನೂ ಎಷ್ಟು ಇಂತಹ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸುತ್ತಿದೆ ಎನ್ನುವುದರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆ ಆಯುಕ್ತರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವುದು ಇದು ಮೊದಲ ಸಲವೇನಲ್ಲ.
ಈ ಹಿಂದೆ ಕೂಡ ಕೆಲ ಪ್ರಕರಣಗಳಲ್ಲಿ ಕೋರ್ಟ ಮೆಟ್ಟಿಲು ಹತ್ತಿದ್ದೂ ಉಂಟು, ಕೆಲವೊಂದು ಸಂದರ್ಭದಲ್ಲಿ ದಂಡ ಸಹ ಭತರ್ಿ ಮಾಡಿದ ಉದಾಹರಣೆಗಳೂ ಇವೆ,

ಅಚ್ಚರಿ ಸಂಗತಿ ಎಂದರೆ, ಇಂತಹ ಅತ್ಯಂತ ಗಂಭೀರವಾಗಿರುವ ಪ್ರಕರಣವನ್ನು ಕಳೆದ ಕೆಲ ದಿನಗಳ ಹಿಂದೆ ಜರುಗಿದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾಕೆ ಚರ್ಚೆ ನಡೆಸಲಿಲ್ಲ.? ಪಾಲಿಕೆ ಆಯುಕ್ತರು ಸಹ ಈ ಸಂಗತಿಯನ್ನು ಕೌನ್ಸಿಲ್ ಗಮನಕ್ಕೆ ತಂದರೂ ಕೂಡ ಅದನ್ನು ಚರ್ಚೆಗೆ ಯಾಕೆ ಕೈಗೆತ್ತಿಕೊಳ್ಳಲಿಲ್ಲ ಎನ್ನುವುದನ್ನು ಕೆದಕುತ್ತ ಹೋದರೆ ಮತ್ತೇ ಇನ್ನೂ ಕೆಲ ಸಂಗತಿಗಳು ಬೆಳಕಿಗೆ ಬರುತ್ತವೆ.
ಏನಿದರ ಹಿನ್ನೆಲೆ?
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ 20/3, 08/ ಹಾಗೂ 220/7 ರಲ್ಲಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ. ರಸ್ತೆ ಆಗಣಕದಾದ ಕುರಿತಂತೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಈಗ ಅಂದಾಜು 20 ಕೋಟಿ ರೂ ಪರಿಹಾರ ಕೊಡಬೇಕಾಗಿದೆ.
2021 ರಿಂದಲೇ ಈ ಪರಿಹಾರ ಕುರಿತಂತೆ ಕೋರ್ಟನಲ್ಲಿ ವಾದ ವಿವಾದಗಳು ನಡೆದಿವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಅಂದರೆ ಈಗಿನ ಆಯುಕ್ತರದ್ದು ಇದರಲ್ಲಿ ತಪ್ಪಿಲ್ಲ,. ಹಿಂದಿನವರು ಮಾಡಿದ ತಪ್ಪುಗಳನ್ನು ಸರಿಪಡಿಸಲು ಈಗಿನವರು ಹರಸಾಹಸ ಮಾಡಬೇಕಾಗಿದೆ ಎನ್ನುವುದು ಸ್ಪಷ್ಟ.

ಧಾರವಾಡ ಉಚ್ಚ ನ್ಯಾಯಾಲಯದಲ್ಲಿ 100058/2022 ನ್ಯಾಯಾಂಗ ನಿಂದನಾ ಅರ್ಜಿ ದಾಖಲಾಗಿದೆ,
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಸ್ಮಾರ್ಟ ಸಿಟಿ. ವತಿಯಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಜಾಗೆಯ ಕುರಿತು ಉಚ್ಚ ನ್ಯಾಯಾಲಯದ ರಿಟ್ ಅರ್ಜಿ (ಸಂಖ್ಯೆ: 102712/2021 ದಿನಾಂಕ:31-08-2021,) ದಾಖಲಾಗಿದೆ, ಭೂ ಸ್ವಾಧೀನ ಪ್ರಕ್ರಿಯೆಯಂತೆ ಭೂ ಮಾಲೀಕರಿಗೆ ಪರಿಹಾರ ಧನ ನೀಡಬೇಕೆಂದು ಉಲ್ಲೇಖ (1) ರನ್ವಯ ಉಚ್ಚನ್ಯಾಯಾಲಯವು ಆದೇಶಿಸಿತ್ತು.
ಈ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಗಳು ಅಫಿಡವಿಟ್ ಸಲ್ಲಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸುವುದಾಗಿ ಮುಚ್ಚಳಿಕೆ ಪತ್ರವನ್ನು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು,
ಆದರೆ ಭೂಸ್ವಾಧಿನ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಪುನರ್ ವಿಮರ್ಶಿಸಿ ಅರ್ಜಿಯನ್ನು ಸಲ್ಲಿಸಲು ದೂರುದಾರರಿಗೆ ಅವಕಾಶವನ್ನು ನ್ಯಾಯಾಲಯವು ಕಲ್ಪಿಸಿತ್ತು, ಈ ಹಿನ್ನೆಲೆಯಲ್ಲಿ ದೂರುದಾರರು ಮತ್ತೇ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆಯ ಪುನರ್ ಪರಿಶೀಲಿಸಲು ಅರ್ಜಿ ಸಲ್ಲಿಸಿದ್ದರು,.
ಇದೆಲ್ಲದರ ಮಧ್ಯೆ ಬೆಳಗಾವಿ ಉಪ ವಿಭಾಗಾಧಿಕಾರಿಗಳು ಭೂ ಸ್ವಾಧೀನ ಯೋಜನೆಗೆ ತಗಲುವ ಅಂದಾಜು ವೆಚ್ಚ ರೂ.20 ಕೋಟಿಯನ್ನು ಮಹಾನಗರ ಪಾಲಿಕೆಯಿಂದ ಭರಿಸಬೇಕೆಂದು ಆದೇಶ ಮಾಡಿದ್ದರು,
ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರೂ. 20 ಕೋಟಿಯಷ್ಟು ದೊಡ್ಡ ಮೊತ್ತವನ್ನು ಪಾಮತಿಸಲು ಅನುದಾನದ ಕೊರತೆಯಿದುವುದರಿಂದ ಅದನ್ನು ಕೋಟಿ ಅನುದಾನವನ್ನು ಸರ್ಕಾರವೇ ಬಿಡುಗಡೆ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ ಪಾಲಿಕೆ ಹಂತದಲ್ಲಿಯೇ ಭೂ ಪರಿಹಾರ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳವಂತೆ ಸರ್ಕಾರ ನಿದೇರ್ಶನ ನೀಡಿತ್ತು,.
ಹೀಗಾಗಿ ಈಗ ಅಷ್ಟು ದೊಡ್ಡ ಮೊತ್ತದ ಪರಿಹಾರ ವನ್ನು ಪಾಲಿಕೆಯಿಂದಲೇ ಭರಿಸಬೇಕಾದ ಪರಿಸ್ಥಿತಿ ಬಂದೊದಗಿದೆ, ಈ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಸಭೆ ನಡೆಯಲಿದೆ.