ಬೆಳಗಾವಿ. ಸರಗಳ್ಳನೊಬ್ಬನನ್ನು ಬಂಧಿಸಿದ ಶಹಾಪುರ ಪೊಲೀಸರು ಸುಮಾರು4 ಲಕ್ಷ 47 ಸಾವಿರ ರೂ ಮೌಲ್ಯದ ಚಿನ್ನದ ಸರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.


ಕಳೆದ ದಿನವಷ್ಟೆ ಬಂಧಿತ ಕಳ್ಳ ಮಹಿಳೆಯ ಕೊರಳಲ್ಲಿನ ಚಿನ್ಬದ ಸರವನ್ನು ದೋಚಿ ಫರಾರಿಯಾಗಿದ್ದನು.
ಈ ಪ್ರಕರಣವನ್ನು ಬೆನ್ನಟ್ಟಿದ ಶಹಾಪುರ ಪೊಲೀಸರು ಸಂಗಮೇಶ್ವರ ನಗರದ ಸಮಾನ ಅಹ್ಮದ ರಿಯಾಜ ಅಹ್ಮದ ನಕ್ಕರಚಿ ಎಂಬಾತನನ್ನು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿಮತ್ತು ಎಸಿಪಿ ಮಾರ್ಗದರ್ಶನದಲ್ಲಿ ಶಹಾಪುರ ಸಿಪಿಐ ಎಸ್.ಎಸ್.ಸೀಮಾನಿ ನೇತೃತ್ವದ ತಂಡಬಂಧಿಸಿದೆ