ಬೆಳಗಾವಿ ಮಹಾನಗರ ಪಾಲಿಕೆ ಸ್ಥಿತಿ ಅಯೋಮಯ.
ಅಧಿಕಾರಿಗಳಿಗೆ ಕಚೇರಿಯಲ್ಲಿ ಕುಳಿತುಕೊಳ್ಳೊದೇ ಕಷ್ಟ. ಅಭಿವೃದ್ಧಿಗೆ ಬಿಡುಗಾಸಿಲ್ಲ.
ಆದರೆ ಪರಿಹಾರ ಮಾತ್ರ ಕೋಟಿ ಕೋಟಿ ಪಾವತಿ ಬಾಕಿ.
ಪಾಲಿಕೆ ಆಸ್ತಿ ಹರಾಜಿಗಿಡುವ ಪರಿಸ್ಥಿತಿ.
20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಅನುಮೋದನೆ
ಬೆಳಗಾವಿ. ಅದೊಂದು ಕಾಲವಿತ್ತು .ಅಪರೂಪ ಎನ್ನುವಂತೆ ಪರಿಹಾರ ಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ ಆದೇಶದ ಪ್ರಕಾರ ಜಪ್ತಿ ಪ್ರಕರಣಗಳು ನಡೆಯುತ್ತಿದ್ದವು.
ಆದರೆ ಈಗ ಅವೂ ಕೂಡ ಮಾಮೂಲು ಎನ್ನುವಂತಾಗಿದೆ. ಯಾವುದೊ ಒಂದು ಕಚೇರಿಯ ಅಧಿಕಾರಿ ಆಸನ ಅಥವಾ ಕಾರನ್ನು ಜಪ್ತಿ ಮಾಡಿದ್ದರೆ ಹೋಗಲಿ ಬಿಡು ಅನಬಹುದಿತ್ತು.
ಆದರೆ ಈಗ ಜನಪ್ರತಿನಿಧಿಗಳ ಆಡಳಿತ ಇರುವ ಕಚೇರಿಯಲ್ಲಿ ಇಂತಹ ಜಪ್ತಿ ಪ್ರಕರಣಗಳು ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಡಳಿತ ವ್ಯವಸ್ಥೆ ಎಲ್ಲೋ ಒಂದು ಕಡೆಗೆ ದಾರಿ ತಪ್ಪುತ್ತಿದೆ ಎನ್ಬುವ ಮಾತುಗಳು ಸರ್ವೇಸಾಮಾನ್ಯ ವಾಗಿ ಕೇಳಿ ಬರುತ್ತಿವೆ.
ಕುಂದಾನಗರಿ ಬೆಳಗಾವಿ ನಗರದ ಮುಕುಟ ಎಂದು ಕರೆಯಲಾಗುತ್ತಿರುವ ಮಹಾನಗರ ಪಾಲಿಕೆ ಯಲ್ಲಿ ಸರಾಸರಿ ನಿತ್ಯ ಕೋರ್ಟ್ ಆದೇಶದಂತೆ ಜಪ್ತಿಗೆ ಬರುತ್ತಿರುವ ಸುದ್ದಿಗಳು ಬರುತ್ತಿವೆ.
ಇವತ್ತು ಶಹಾಪುರ ಹುಲಬತ್ತೆ ಕಾಲೋನಿ ಜಾಗೆಗೆ ಸಂಬಂಧಿಸಿದಂತೆ ಸುಮಾರು 75 ಲಕ್ಷ ರೂ ಪರಿಹಾರ ಪಾವತಿಸಿಲ್ಲ ಎನ್ನುವ ಕಾರಣದಿಂದ ಕೋರ್ಟ್ ಆದೇಶದ ಪ್ರಕಾರ ಪಾಲಿಕೆ ಉಪ ಆಯುಕ್ತರ ಕಾರು ಜಪ್ತಿಗೆ ಬಂದಿದ್ದರು.ಆದರೆ ಇದೇ ಪ್ರಕರಣದ ವಿಚಾರಣೆ ನಾಳೆ ಇರುವುದರಿಂದ ಪಾಲಿಕೆ ಕಾನೂನು ಸಲಹೆಗಾರರು ಹೇಳಿದ್ದರಿಂದ ಜಪ್ತಿಗೆ ಬಂದವರು ಮತ್ತೇ ವಾಪಸ್ಸು ಹೋದರು.
ಕ್ಯಾಬಿನೆಟ್ ಅನುಮೋದನೆ ಕಡ್ಡಾಯ..!
ಗಮನಿಸಬೇಕಾದ ಸಂಗತಿ ಎಂದರೆ, ಶಹಾಪುರ ಭಾಗದ ರಸ್ತೆ ನಿರ್ಮಾಣದಲ್ಲಿ ಕೋರ್ಟ ಆದೇಶದಂತೆ ಪರುಹಾರ ರೂಪದಲ್ಲಿ ಪಾಲಿಕೆಯು ಬರೊಬ್ಬರಿ 20 ಕೋಟಿ ರೂ.ವನ್ಬು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಖಾತೆಗೆ ಡಿಪಾಜಿಟ್ ಮಾಡಬೇಕಾಗಿದೆ.
ಈ ಬಗ್ಗೆ ಧಾರವಾಡ ಹೈಕೋರ್ಟ್ ಆದೇಶದಂತೆ ಹಣ ಸಂದಾಯ ಮಾಡಬೇಕಾಗಿ ಬಂದಿರುವದರಿಂದ ಮತ್ತು ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರಾಗುವ ಉದ್ದೇಶದಿಂದ ವಿಶೇಷ ಸಭೆಯನ್ನು ಮೇಯರ್ ಕರೆದಿದ್ದರು.
ಇಲ್ಲಿ ವಿರೋಧ ಪಕ್ಷದವರ ಅಸಮ್ಮತಿ ನಡುವೆಯೇ ಮೇಯರ್ ಅವರು ‘ಸರ್ವಾನುಮತ” ಎಂದು ಹೇಳಿ 20 ಕೋಟಿ ರೂ ಪಾವತಿಗೆ ಸಮ್ಮತಿ ಸೂಚಿಸಿದರು.
ಕೊನೆಗೆ ಅದರ ರೂಲಿಂಗ್ ಪ್ರತಿಯನ್ನು ಕೈಗೆತ್ತಿಕೊಂಡು ಹೋದ ಆಯುಕ್ತರು ಕಳೆದ ದಿ.29 ರಂದು ಕೋರ್ಟ್ ಗೆ ಸಲ್ಲಿ ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರಾದರು.
ಆದರೆ ಈಗ ಅಸಲಿಗೆ ಬೆಳಗಾವಿ ಮಹಾನಗರ ಪಾಲಿಕೆಯೇ 20 ಕೋಟಿ ರೂ.ವನ್ಬು ನೇರವಾಗಿ ಎಸಿ ಖಾತೆಗೆ ಜಮಾ ಮಾಡಬಹುದೇ ಎನ್ನುವ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ.
ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪ್ರಕಾರ , ಬೆಳಗಾವಿ ಪಾಲಿಕೆ ಕೌನ್ಸಿಲ್ಗೆ ಎರಡು ಕೋಟಿ ರೂ ಆರ್ಥಿಕ ವ್ಯವಹಾರ ಮಾಡುವ ಅಧಿಕಾರವಿದೆ. 2 ರಿಂದ 5 ಕೋಟಿ ರೂ.ವರೆಗೆ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ. ನಂತರ 5 ರಿಂದ ೧೫ ಕೋಟಿ ರೂ.ವರೆಗೆ ನಗರಾಭಿವೃದ್ಧಿ ಇಲಾಖೆಗೆ ಅಧಿಕಾರವಿದೆ. ಅದಕ್ಕಿಂತಲೂ ಹೆಚ್ಚಿನ ಹಣ ಪಾವತಿ ಇದ್ದರೆ ಸರ್ಕಾರದ ಮಙತ್ರಿಮಂಡಳ ಸಭೆಯ ಅನುಮೋದನೆ ಬೇಕೇ ಬೇಕು. ಇಲ್ಲಿ 20 ಕೋಟಿ ರೂ. ಆಗಿದ್ದರಿಂದ ಕ್ಯಾಬಿನೆಟ್ ಅನುಮೋದನೆ ಬೇಕಾಗುತ್ತದೆ. ಹೀಗಾಗಿ ಕ್ಯಾಬಿನೆಟ್ ಅನುಮತಿ ಎಷ್ಟರ ಮಟ್ಟಿಗೆ ಅನುಮೋದನೆ ಕೊಡಬಹುದು ಎನ್ನುವುದನ್ನು ಕಾದುನೋಡಬೇಕು.
ಏಕೆಂದರೆ ಈಗಾಗಲೇ ಪಾಲಿಕೆ ತೀರ್ಮಾನಕ್ಕೆ ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಆಸೀಫ್ ಶೇಠ ತಮ್ನ ಅಸಮ್ಮತಿ ಸೂಚಿಸಿದ್ದನ್ಬುಇಲ್ಲಿ ಸ್ಮರಿಸಬಹುದು.