ಆನ್ ಲಾಯಿನ ವಂಚನೆ ಪ್ರಕರ್ಣ
ಪಂಜಾಬ ನ್ಯಾಷನಲ್ ಬ್ಯಾಂಕ ರೂ. 3,82,230/- ಹಾಗೂ ಪರಿಹಾರ ಹಣವನ್ನು ವಂಚಿತರಿಗೆ ನೀಡುವಂತೆ ಬೆಳಗಾವಿ ಗ್ರಾಹಕರ ಪರಿಹಾರ ವೇದಿಕೆ ಆದೇಶ.
ಬೆಳಗಾವಿ.
ಇಲ್ಲಿನ ಎರಡನೇಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಇತ್ತಿಚಿಗೆ ಸುಕೃತಾ ರಾಜೇಂದ್ರ ಕುಲಕರ್ಣಿ ಎಂಬುವರು ಆನ್ ಲಾಯಿನ್ ವಂಚನೆ ಪ್ರಕರ್ಣದಲ್ಲಿ ಕಳೆದು ಕೊಂಡಿದ್ದ ರೂ.3,82,230/-ಹಣ ವನ್ನು 6% ಬಡ್ಡಿ ಸಹಿತ ಹಾಗು ರೂ. 10,000/- ಗಳನ್ನು ಮಾನಸಿಕ ವ್ಯಥೆ ಗಾಗಿ ಮತ್ತು ರೂ. 5,000/- ಗಳನ್ನು ಕೋರ್ಟ್ ಕಲಾಪಗಳಿಗಾಗಿ ವ್ಯಯಿಸಿದ ಹಣವೆಂದು ಅರ್ಜಿದಾರಳಿಗೆ ಪಾವತಿಸಬೆಕೆಂದು ಪಂಜಾಬ ನ್ಯಾಷನಲ್ ಬ್ಯಾಂಕಗೆ ಆದೇಶ ನೀಡಿದೆ.

ವಝಿರೆ ಎಕ್ಸ್ ಎಂಬ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಂಪನಿ ನಡೆಸುವ ಬಿಟ್ ಕ್ಯಾಯಿನ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಶೀಘ್ರದಲ್ಲಿ ಅಧಿಕ ಹಣಗಳಿಸಬಹುದು ಎಂದು ಮೋಬಾಯಿಲ್ ಸಂದೇಶ ಕಳಿಸಿ ಸವಿ ಮಾತುಗಳಿಂದ ಕಳೆದ ವರ್ಷದ ಮೇ ತಿಂಗಳಿನಲ್ಲಿ ಹಂತ ಹಂತವಾಗಿ ಅರ್ಜಿದಾರಳಿಂದ ರೂ.3,82,230/-ಗಳನ್ನು ಆನ್ ಲಾಯಿನ ಮೂಲಕ ವಂಚನೆ ದಾರರು ತಮ್ಮ ಪಂಜಾಬ ನ್ಯಾಷನಲ್ ಬ್ಯಾಂಕನ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

ಹೂಡಿಕೆ ಮಾಡಿದ ಹಣ ವಾಪಸ್ ಬಾರದಿದ್ದಾಗ ತಾನು ವಂಚನೆಗೆ ಬಲಿಯಾಗಿರುವೆ ಎಂದು ತಿಳಿದ ತಕ್ಷಣ ನಗರದ ಸೈಬರ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಂಚನೆದಾರರ ಪಂಜಾಬ ನ್ಯಾಷನಲ್ ಬ್ಯಾಂಕಿನ ಖಾತೆಗೆ ವರ್ಗಾವಣೆಯಾಗಿದ್ದ ರೂ.2,32,327/- ಹಣ ವನ್ನು ಸ್ಥಗಿತ ಗೊಳಿಸಿ ಹಣವನ್ನು ವಾಪಸ್ ಪಡೆಯುವ ಆದೇಶಕ್ಕಾಗಿ ಜೂಡಿಸಿಯಲ್ ಮ್ಯಾಜಿಸ್ಟ್ರೇಟ ನ್ಯಾಯಾಲಯದಿಂದ ಹಣ ಬಿಡುಗಡೆ ಆದೇಶವನ್ನು ಬ್ಯಾಂಕಿಗೆ ನೀಡಿದ್ದರು.
ಹಲವು ತಿಂಗಳು ಕಳೆದರೂ ಬ್ಯಾಂಕನಿಂದ ಹಣ ವಾಪಸ್ ಬಾರದಿದ್ದಾಗ ಅರ್ಜಿದಾರರು ವಕೀಲರ ಮೂಲಕ ಬ್ಯಾಂಕಿಗೆ ಲಿಗಲ್ ನೋಟಿಸ್ ಹಾಗು ಆರ್ ಟಿ ಆಯ್ ಅರ್ಜಿ ರವಾನಿಸಿದ್ದರೂ ಯಾವುದೆ ಪ್ರತಿಕ್ರಿಯೆ ದೊರೆಯದಿದ್ದಾಗ ಗ್ರಾಹಕ ವೇದಿಕೆಗೆ ಮೋರೆ ಹೋಗಿದ್ದರು.
ಆನ್ ಲಾಯಿನ ವಂಚನೆ ಪ್ರಕರ್ಣಗಳಲ್ಲಿ ಬ್ಯಾಂಕಗಳ ಹೊಣೆಗಾರಿಕೆ ನಿರ್ಧರಿಸುವ ಆರ್ ಬಿ ಆಯ್ ಸುತ್ತೋಲೆಯ ಅನ್ವಯ ವಂಚಕರ ಖಾತೆಗಳಿಗೆ ಹಣ ಸಂದಾಯವಾಗುವದನ್ನು ತಡೆ ಗಟ್ಟುವಲ್ಲಿ ಪಂಜಾಬ ನ್ಯಾಷನಲ್ ಬ್ಯಾಂಕ ವಿಫಲ ವಾಗಿದ್ದರಿಂದ ಮತ್ತು ಗ್ರಾಹಕ ಶಬ್ದದ ವ್ಯಾಪ್ತಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನ್ವಯ ಅರ್ಜಿದಾರರ ಅರ್ಜಿಯು ವಿಚಾರಣೆಗೆ ಸ್ವೀಕೃತ ವಾಗಿತ್ತು. ಅರ್ಜಿದಾರರು ಬ್ಯಾಂಕ್ ಗ್ರಾಹಕರಲ್ಲ, ಬ್ಯಾಂಕ್ ಸೂಕ್ತ ಪ್ರತಿವಾದಿಯಲ್ಲ ಸೂಕ್ತ ಪ್ರತಿವಾದಿಗಳನ್ನು ನಮೂದಿಸಿಲ್ಲ, ವಂಚನೆಗೆ ಬ್ಯಾಂಕ್ ಹೋಣೆಯಲ್ಲ ಎಂಬ ಪ್ರತಿವಾದಿಗಳ ವಾದವನ್ನು ತಿರಸ್ಕಾರ ಮಾಡಿ ಗ್ರಾಹಕರ ವೇದಿಕೆಯ ಅಧ್ಯಕ್ಷ ಸಂಜೀವ ಕುಲಕರ್ಣಿ ಹಾಗು ಸದಸ್ಯರಾದ ಗಿರೀಶ ಪಾಟೀಲರು ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ಬ್ಯಾಂಕ ವಿರುದ್ಧ ಆದೇಶ ಜಾರಿ ಮಾಡಿದ್ದಾರೆ. ಅರ್ಜಿದಾರರ ಪರವಾಗಿ ಅರ್. ವಿ. ಕುಲಕರ್ಣಿ ವಕೀಲರು ಸೂಕ್ತ ದಾಖಲೆಗಳನ್ನು ಹಾಜರು ಪಡಿಸಿ ವಾದ ಮಂಡಿಸಿದ್ದರು.